ನವದೆಹಲಿ, ಫೆ. ೧೦: ಕೇಂದ್ರ ಸರಕಾರದ ಪರ್ವತ್ಮಾಲ ಪರಿಯೋಜನಾ ಯೋಜನೆಯಡಿಯಲ್ಲಿ ಕರ್ನಾಟಕದ ವಿವಿಧ ಬೆಟ್ಟ ಪ್ರದೇಶಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೋಪ್ವೇಗಳ ಪೈಕಿ ಕೊಡಗು ಜಿಲ್ಲೆಗೆ ಸೇರಿರುವ ಕುಮಾರ ಪರ್ವತದಲ್ಲೂ ಯೋಜನೆ ಅನುಷ್ಠಾನ ಸಂಬAಧ ಪೂರ್ವ ಕಾರ್ಯಸಾಧ್ಯತೆ ಅಧ್ಯಯನ ನಡೆಸಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ.
ರೋಪ್ವೇಗಳ ಕುರಿತು ರಾಜ್ಯಸಭೆ ಸಂಸತ್ನಲ್ಲಿ ರಾಜ್ಯಸಭಾ ಸದಸ್ಯ ನಾರಾಯಣ ಕೊರಗಪ್ಪ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ ಅವರು, ೨೦೨೨-೨೩ ಆಯವ್ಯಯದಲ್ಲಿ ಘೋಷಣೆ ಆದ ಯೋಜನೆಯಡಿಯಲ್ಲಿ ಕರ್ನಾಟಕದಲ್ಲಿ ೧೫ ಬೆಟ್ಟ ಪ್ರದೇಶಗಳಲ್ಲಿ ರೋಪ್ವೇ ನಿರ್ಮಾಣ ಸಂಬAಧ ಈಗಾಗಲೇ ಕೊಡಚಾದ್ರಿಯಲ್ಲಿ ಕಾರ್ಯಸಾಧ್ಯತೆ ಅಧ್ಯಯನ (ಜಿeಚಿsibiಟiಣಥಿ sಣuಜಥಿ) ನಡೆಸಲಾಗಿದೆ. ಕೊಡಗು ಜಿಲ್ಲೆಯಲ್ಲಿನ ಕುಮಾರ ಪರ್ವತ ಸೇರಿದಂತೆ ಇತರ ಪ್ರದೇಶಗಳಲ್ಲಿ ಪೂರ್ವ ಕಾರ್ಯಸಾಧ್ಯತೆ ಅಧ್ಯಯನ (ಠಿಡಿe ಜಿeಚಿsibiಟiಣಥಿ sಣuಜಥಿ) ನಡೆಸಲಾಗಿದೆ ಎಂದು ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ.