ಗೋಣಿಕೊಪ್ಪಲು.ಫೆ.೧೦ : ಅರಣ್ಯ ಇಲಾಖೆಯಿಂದ ರೈತರ ಕಾಫಿ ತೋಟದ ಬದಿಯಲ್ಲಿ ಹಾಗೂ ತೋಟದ ಮಧ್ಯೆ ಕಾಂಕ್ರಿಟ್ ಕಲ್ಲುಗಳನ್ನು ಅಳವಡಿಸುವ ಮೂಲಕ ತನ್ನ ಸರಹದ್ದುಗಳನ್ನು ಗುರುತು ಮಾಡುವ ಕೆಲಸಕ್ಕೆ ಇದೀಗ ವಿರಾಮ ಬಿದ್ದಿದೆ. ಘಟನಾ ಸ್ಥಳಕ್ಕೆ ಮೈಸೂರಿನ ವನ್ಯ ಜೀವಿ ವಿಭಾಗದ ಆರ್‌ಎಫ್‌ಓ ಪೂಜಾ ಆಗಮಿಸಿ ಗ್ರಾಮಸ್ಥರೊಂದಿಗೆ ಹಾಗೂ ಹಲವು ಮುಖಂಡರೊAದಿಗೆ ಸುದೀರ್ಘವಾಗಿ ಚರ್ಚಿಸಿ ಇಲಾಖೆಯು ಅಳವಡಿಸಿರುವ ಸರಹದ್ದು ಕಂಬಗಳನ್ನು ತೋಟದ ಬದಿಯಿಂದ ಹಾಗೂ ತೋಟದೊಳಗಿರುವುದನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಮಂಗಲ ಅರಣ್ಯ ಕಚೇರಿಯ ಮುಂದೆ ಕೆ.ಬಾಡಗ ಹಾಗೂ ನಾಲ್ಕೇರಿ ಗ್ರಾಮ ಪಂಚಾಯಿತಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ.

ದ.ಕೊಡಗಿನ ಕಾನೂರು - ಲಕ್ಕುಂದ - ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ಮುಖ್ಯ ರಸ್ತೆ ಬದಿಯಲ್ಲಿ ಯಾರ ಗಮನಕ್ಕೆ ಬಾರದ ರೀತಿಯಲ್ಲಿ ಅರಣ್ಯ ವ್ಯಾಪ್ತಿಯನ್ನು ಗುರುತು ಮಾಡುವ ಕೆಲಸದಲ್ಲಿ ತೊಡಗಿದ್ದರು. ಈ ಬಗ್ಗೆ ಅರಣ್ಯ ಇಲಾಖೆಯು ಇಲ್ಲಿನ ರೈತರಿಗೆ ಯಾವುದೇ ಮಾಹಿತಿ ನೀಡದೆ ರೈತರ ಕಾಫಿ ತೋಟದ ಬದಿಯಲ್ಲಿ ಹಾಗೂ ಕಾಫಿ ತೋಟದ ಒಳಭಾಗದಲ್ಲಿ ಕಾಂಕ್ರಿಟ್ ಮಾದರಿಯ ಕಲ್ಲುಗಳನ್ನು ನೆಡುವ ಮೂಲಕ ಅರಣ್ಯ ಇಲಾಖೆಯು ತನ್ನ ಗಡಿಯನ್ನು ಕಳೆದೆರಡು ದಿನಗಳಿಂದ ಗುರುತಿಸುವ ಕೆಲಸವನ್ನು ಕೈಗೆತ್ತಿಕೊಂಡಿತ್ತು.

ಈ ಬಗ್ಗೆ ‘ಶಕ್ತಿ’ಯು ಸ್ಥಳಕ್ಕೆ ತೆರಳಿ ಸಮಗ್ರ ವರದಿ ಪ್ರಕಟಿಸಿತ್ತು. ವರದಿಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮುಂದಿನ ಹತ್ತು ದಿನದ ಒಳಗೆ ಗಡಿ ಗುರುತು ಕಂಬಗಳನ್ನು ರೈತರ ಕೆಲಸದಲ್ಲಿ ತೊಡಗಿದ್ದರು. ಈ ಬಗ್ಗೆ ಅರಣ್ಯ ಇಲಾಖೆಯು ಇಲ್ಲಿನ ರೈತರಿಗೆ ಯಾವುದೇ ಮಾಹಿತಿ ನೀಡದೆ ರೈತರ ಕಾಫಿ ತೋಟದ ಬದಿಯಲ್ಲಿ ಹಾಗೂ ಕಾಫಿ ತೋಟದ ಒಳಭಾಗದಲ್ಲಿ ಕಾಂಕ್ರಿಟ್ ಮಾದರಿಯ ಕಲ್ಲುಗಳನ್ನು ನೆಡುವ ಮೂಲಕ ಅರಣ್ಯ ಇಲಾಖೆಯು ತನ್ನ ಗಡಿಯನ್ನು ಕಳೆದೆರಡು ದಿನಗಳಿಂದ ಗುರುತಿಸುವ ಕೆಲಸವನ್ನು ಕೈಗೆತ್ತಿಕೊಂಡಿತ್ತು.

ಈ ಬಗ್ಗೆ ‘ಶಕ್ತಿ’ಯು ಸ್ಥಳಕ್ಕೆ ತೆರಳಿ ಸಮಗ್ರ ವರದಿ ಪ್ರಕಟಿಸಿತ್ತು. ವರದಿಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮುಂದಿನ ಹತ್ತು ದಿನದ ಒಳಗೆ ಗಡಿ ಗುರುತು ಕಂಬಗಳನ್ನು ರೈತರ