ಮಡಿಕೇರಿ, ಫೆ. ೧೦: ಅರಣ್ಯ ಹಕ್ಕು ಕಾಯಿದೆ -೨೦೦೬ರ ಅನುಷ್ಠಾನದಲ್ಲಿ ಚಾಲ್ತಿಯಲ್ಲಿನ ಕಾನೂನನ್ನು ಗಾಳಿಗೆ ತೂರಿ ಅರಣ್ಯ ಪ್ರದೇಶವನ್ನು ಅನರ್ಹರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಕೊಡಗು ಏಕೀಕರಣ ರಂಗ ಆಕ್ಷೇಪಿಸಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು, ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖಾಧಿಕಾರಿ ಗಳಿಗೆ ಮನವಿ ಸಲ್ಲಿಸಿರುವ ರಂಗದ ಪ್ರಮುಖರು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳ ಕಾಜೂರು, ಬೆಳ್ಳೂರು, ಎಡಪಾರೆ, ನಂಜರಾಯಪಟ್ಟಣ, ಎಡವನಾಡು, ವಿರೂಪಾಕ್ಷಪುರ, ಮಸ್ಕೋಡು, ಹೊಸಪಟ್ಟಣ, ತಣ್ಣೀರುಹಳ್ಳ, ಗೊಂದಿಬಸವನಹಳ್ಳಿ ಮುಂತಾದ ಗ್ರಾಮಗಳಲ್ಲಿ ಸಾಂಪ್ರದಾಯಿಕ ಅರಣ್ಯ ವಾಸಿಗಳಿಗೆ ವೈಯಕ್ತಿಕ ಹಕ್ಕು ಗುರುತಿಸಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಸಂಪೂರ್ಣ ಆಡಳಿತಾತ್ಮಕವಾದ ಹಾಗೂ ಅರೆ ನ್ಯಾಯಾಂಗದ ಈ ಪ್ರಕ್ರಿಯೆಗೆ ರಾಜಕೀಯ ಹಸ್ತಕ್ಷೇಪವಾಗುತ್ತಿದೆ. ಅರಣ್ಯ ಹಕ್ಕು ಕಾಯಿದೆ ೨೦೦೬ರಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ನು ಉಲ್ಲಂಘಿಸಿ ಅನರ್ಹರಿಗೆ ಹಕ್ಕು ಮಂಜೂರು ಮಾಡುವ ವ್ಯವಸ್ಥಿತ ಕೆಲಸ ನಡೆಯುತ್ತಿದೆ. ಸದ್ಯದಲ್ಲಿಯೇ ಜಿಲ್ಲೆಗೆ ಆಗಮಿಸಲಿರುವ ಮುಖ್ಯ ಮಂತ್ರಿಗಳಿAದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ತರಾತುರಿಯಲ್ಲಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಲಾಗಿದೆ.

ಮನವಿಯ ಅಂಶಗಳು

*ಈ ಕಾಯಿದೆ ಪ್ರಕಾರ ೨೦೦೫ರ ಡಿಸೆಂಬರ್ ೧೩ರಂದು ಅರ್ಜಿದಾರರ ವಶದಲ್ಲಿದ್ದ ಅರಣ್ಯ ಪ್ರದೇಶಕ್ಕೆ ಮಾತ್ರ ಹಕ್ಕು ನೀಡಲು ಸಾದ್ಯ. ಆದರೆ, ಇದೀಗ ೨೦೦೫ರ ನಂತರ ಒತ್ತುವರಿಯಾದ ಪ್ರದೇಶಕ್ಕೂ ಹಕ್ಕು ನೀಡುವ ಯತ್ನ ನಡೆಯುತ್ತಿದೆ. ಅರಣ್ಯ ಹಕ್ಕು ಕಾಯಿದೆ - ೨೦೦೬ರಡಿ ಹಕ್ಕು ಪಡೆಯಬಹುದು ಎಂದು ಅರಣ್ಯ ಒತ್ತುವರಿ ನಡೆಸಿದವರಿಗೂ ಸೌಲಭ್ಯ ನೀಡುವುದು ಕಾನೂನು ಬಾಹಿರವಾಗುತ್ತದೆ.

*ಸಾಂಪ್ರದಾಯಿಕ ಅರಣ್ಯ ವಾಸಿಗಳಿಗೆ ವೈಯಕ್ತಿಕ ಹಕ್ಕು ಗುರುತಿಸಿ ನೀಡುವ ಪ್ರಕ್ರಿಯೆಯಲ್ಲಿ ಅರ್ಜಿದಾರರು ಮೂರು ತಲೆಮಾರು ಅಥವಾ ಎಪ್ಪತ್ತೆöÊದು ವರುಷ ನಿರ್ದಿಷ್ಟ ಜಮೀನು ತಮ್ಮ ವಶದಲ್ಲಿದೆ ಎಂಬುದನ್ನು ಸಾಬೀತುಪಡಿಸಬೇಕಿದೆ. ಈ ಅಂಶವನ್ನು

(ಮೊದಲ ಪುಟದಿಂದ) ಖಾತರಿಪಡಿಸಲು ೧೯೩೦ಕ್ಕೆ ಮುನ್ನ ಜನಿಸಿದ ವ್ಯಕ್ತಿಯ ಹೇಳಿಕೆಯನ್ನು ಬಳಸಬಹುದು ಎಂಬ ಅಂಶವನ್ನು ಆಧಾರವಾಗಿಟ್ಟುಕೊಂಡು ಇತ್ತೀಚೆಗೆ ಒತ್ತುವರಿಯಾದ ಜಮೀನನ್ನು ಮಂಜೂರು ಮಾಡುವ ಪರಿಪಾಠ ಪ್ರಾರಂಭವಾಗಿದೆ. ಕಂದಾಯ, ಸಮಾಜ ಕಲ್ಯಾಣ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಹೊಣೆಗಾರಿಕೆಯನ್ನು ಮರೆತು ರಾಜಿ ಮನೋಭಾವ ತೋರಿ ಅರಣ್ಯವನ್ನು ಎಲ್ಲೆಂದರಲ್ಲಿ ಪ್ರಭಾವಿಗಳಿಗೆ, ಅನರ್ಹರಿಗೆ ಹಕ್ಕು ನೀಡುತ್ತಿದ್ದಾರೆ.

*ಮೇಲೆ ಹೇಳಿದಂತೆ ಅರಣ್ಯ ಹಕ್ಕು ಕಾಯಿದೆ -೨೦೦೬ ಅನುಷ್ಠಾನಕ್ಕೆ ಸ್ಪಷ್ಟವಾದ ಆಡಳಿತಾತ್ಮಕ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದನ್ನು ರಾಜಕೀಯ ಒತ್ತಡಕ್ಕೆ ಮಣಿದು ಬದಲಾಯಿಸುವ ಅಗತ್ಯವಿಲ್ಲ. ಆ ರೀತಿ ಕಾನೂನು ಬಾಹಿರ ಒತ್ತುವರಿಗೆ ಅರಣ್ಯ ಹಕ್ಕು ಕಾಯಿದೆಯಡಿ ಮಾನ್ಯತೆ ನೀಡಿದ ಹಲವು ಅಧಿಕಾರಿಗಳ ವಿರುದ್ಧ ಸರಕಾರ ಶಿಸ್ತು ಕ್ರಮ ಕೈಗೊಂಡ ಉದಾಹರಣೆ ಕೂಡ ಇದೆ. ಇದನ್ನು ಪರಿಗಣಿಸಿ ಅರಣ್ಯ ಹಕ್ಕು ಕಾಯಿದೆ-೨೦೦೬ ಮಾನದಂಡಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ಜಿಲ್ಲಾ ಸಮಿತಿಯ ಮುಂದಿಡುವAತೆ ಕಂದಾಯ, ಸಮಾಜ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಬೇಕಾಗಿ ಅರಣ್ಯ ಹಕ್ಕು ಅನುಷ್ಠಾನಕ್ಕಾಗಿನ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳನ್ನು ಒತ್ತಾಯಿಸಲಾಗಿದೆ.

* ಅರಣ್ಯ ಪ್ರದೇಶದ ಒತ್ತುವರಿಯನ್ನು ಗುರುತಿಸಲು ಇದೀಗ ತಂತ್ರಜ್ಞಾನ ಲಭ್ಯವಿದೆ. ನಿರ್ದಿಷ್ಟ ಅರಣ್ಯ ಪ್ರದೇಶದಲ್ಲಿ ಹಕ್ಕು ನೀಡಿಕೆಗೂ ಮುನ್ನ ಉಪಗ್ರಹ ಆಧಾರಿತ ಗೂಗಲ್ ನಕಾಶೆಗಳನ್ನು ಸಾಕ್ಷಿಯಾಗಿ ಪರಿಗಣಿಸುವಂತೆ, ಆ ರೀತಿಯ ನಕಾಶೆಗಳನ್ನು ಇಲಾಖೆಯಲ್ಲಿರುವ ಸಂಪನ್ಮೂಲಗಳನ್ನು ಬಳಸಿ ಒದಗಿಸುವಂತೆ ಕೊಡಗು ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳಲ್ಲಿಯೂ ಮನವಿ ಮಾಡಲಾಗಿದೆ.

ಅರಣ್ಯ ಇಲಾಖೆಯ ಕೆಲ ನೌಕರರು ಮತ್ತು ಅಧಿಕಾರಿಗಳು ಅರಣ್ಯ ಹಕ್ಕು ಕಾಯಿದೆ -೨೦೦೬ರಡಿ ಅನರ್ಹರಿಗೆ ಅರಣ್ಯದ ಮೇಲೆ ಹಕ್ಕು ನೀಡುತ್ತಿದ್ದರೂ, ಸುಮ್ಮನಿರುವ ಮೂಲಕ ಕರ್ತವ್ಯಲೋಪ ಎಸಗುತ್ತಿದ್ದಾರೆ. ಈ ವಿಚಾರದಲ್ಲಿ ಪ್ರತಿ ಅಧಿಕಾರಿಯ ಹೊಣೆಗಾರಿಕೆಯನ್ನು ನಿಗದಿಪಡಿಸಿ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಆಗ್ರಹಿಸಲಾಗಿದೆ.

ಭೂ ಮಂಜೂರಾತಿ ಪ್ರಕ್ರಿಯೆ ಅತ್ಯಂತ ಗೊಂದಲಮಯವಾಗಿದೆ. ಕೆಲ ಅಧಿಕಾರಿಗಳು ಈ ಗೊಂದಲದ ಲಾಭ ಪಡೆದ ಹಲವಾರು ಉದಾಹರಣೆಗಳು ನಮ್ಮಲ್ಲಿದೆ. ಅರಣ್ಯ ಹಕ್ಕು ಕಾಯಿದೆ -೨೦೦೬ರಲ್ಲಿ ಖಚಿತ ಮಾನದಂಡಗಳನ್ನು ನಿಗದಿಮಾಡಲಾಗಿದ್ದರೂ, ಕೆಲ ಅಧಿಕಾರಿಗಳು ವೈಯಕ್ತಿಕ ಲಾಭಕ್ಕಾಗಿ ಅನರ್ಹರಿಗೆ ಹಕ್ಕು ನೀಡಿಕೆಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ -೨೦೦೬ರಲ್ಲಿ ಹಕ್ಕು ನೀಡಿಕೆ ಪ್ರಕ್ರಿಯೆಯ ಸಮಯದಲ್ಲಿ ಭಾಗಿಯಾಗುವ ಅಧಿಕಾರಿಗಳ ಹೆಸರುಗಳನ್ನು ಸಭಾ ನಡವಳಿಗಳಲ್ಲಿ ದಾಖಲಿಸುವಂತೆ ಪ್ರಮುಖರು ಒತ್ತಾಯಿಸಿದ್ದಾರೆ.

ಅರಣ್ಯ ಹಕ್ಕು ಕಾಯಿದೆ -೨೦೦೬ರ ಕಾನೂನು ಬಾಹಿರತೆ ಬಗ್ಗೆ ಈಗಾಗಲೇ ವೈಲ್ಡ್ಲೈಫ್ ಫಸ್ಟ್ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿವೆ. ಕೊಡಗು ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ-೨೦೦೬ರಡಿ ಅನರ್ಹರಿಗೆ ಹಕ್ಕು ನೀಡಿಕೆಯನ್ನು ಮುಂದುವರಿಸಿದಲ್ಲಿ ಸಂಬAಧಿಸಿದ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಮನವಿಯಲ್ಲಿ ತಿಳಿಸಲಾಗಿದೆ.

ನಾಗರಹೊಳೆ ರಾಷ್ಟಿçÃಯ ಉದ್ಯಾನವನದಲ್ಲಿ ಕೂಡ ನೂತನ ಕಟ್ಟಡಗಳ ನಿರ್ಮಾಣಕ್ಕೆ ಕೂಡ ಸಮಾಜ ಕಲ್ಯಾಣ ಇಲಾಖೆ ಪ್ರಯತ್ನಿಸುತ್ತಿದೆ. ಈ ಬಗ್ಗೆ ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುವಂತೆ ಕೂಡ ರಂಗದ ಕಾರ್ಯದರ್ಶಿ ಟಿ.ಎಂ. ಸೋಮಯ್ಯ ಹಾಗೂ ಪ್ರಮುಖರು ಮನವಿ ಸಲ್ಲಿಸಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.