ಮಡಿಕೇರಿ, ಫೆ. ೧೦ : ವೈದ್ಯಕೀಯ ಸೇರಿದಂತೆ ಇತರ ಎಲ್ಲಾ ವಲಯಗಳಲ್ಲಿನ ಅಧ್ಯಯನ ಮತ್ತು ಸಂಶೋಧನೆಗಳಿಗೆ ಪುಸ್ತಕಗಳೇ ಆಧಾರವಾಗಿದ್ದು, ಗ್ರಂಥಪಾಲಕರು ಇದನ್ನು ಅರಿತು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕ ಹಾಗೂ ನಿಸ್ವಾರ್ಥದಿಂದ ನಿರ್ವಹಿಸಬೇಕೆಂದು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ ಟಿ.ಡಿ. ಕೆಂಪರಾಜು ಕರೆ ನೀಡಿದರು.

ನಗರದ ಹೊರವಲಯದಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗ್ರಂಥಾಲಯ, ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯಗಳ ಸಂಘ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ‘ಗ್ರಂಥಪಾಲಕರು ಮತ್ತು ವೈದ್ಯರಿಗೆ ಆರೋಗ್ಯ ವಿಜ್ಞಾನದ ಮಾಹಿತಿ’ ಎಂಬ ಘೋಷವಾಕ್ಯದಲ್ಲಿ ಆಯೋಜಿಸಿದ್ದ ೧೪ನೇ ರಾಷ್ಟಿçÃಯ ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರ ಇಂದು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಬದಲಾವಣೆ ಜಗದ ನಿಯಮವಾಗಿದ್ದು, ಕಾಲಘಟ್ಟಕ್ಕೆ ತಕ್ಕಂತೆ ಜೀವನಶೈಲಿ, ಆವಿಷ್ಕಾರಗಳು ಮೇಲ್ದರ್ಜೆ ಗೇರುತ್ತಿರುತ್ತವೆ. ಜನರಿಗೆ ಬೇಕಾದ ಅಗತ್ಯತೆಗಳನ್ನು ಪೂರೈಸುವುದು ಆಯಾ ಕ್ಷೇತ್ರದ ಕರ್ತವ್ಯವಾಗಿದೆ. ಅದೇ ರೀತಿ ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆಗಳಿಗೆ ಪೂರಕ ಸಹಕಾರ ನೀಡುವುದು ವೈದ್ಯಕೀಯ ಗ್ರಂಥಾಲಯ ಪಾಲಕರ ಜವಾಬ್ದಾರಿಯಾಗಿದೆ ಎಂದರು.

ವೈದ್ಯಕೀಯ ಕ್ಷೇತ್ರದ ಆವಿಷ್ಕಾರಗಳಿಗೆ ಗ್ರಂಥಪಾಲಕರು ಕೈಜೋಡಿಸಿದರೆ ಗುಣಮಟ್ಟದ ಫಲಿತಾಂಶ ಹೊರಬರುವುದು ಖಚಿತ. ಕೋವಿಡ್ ಪರಿಸ್ಥಿತಿಯ ಬಳಿಕ ಆರೋಗ್ಯ ಬಹಳ ಮುಖ್ಯ ಎಂಬುದು ಅರಿವಿಗೆ ಬಂದಿದೆ. ಈ ನಿಟ್ಟಿನಲ್ಲಿ ಆರೋಗ್ಯದ ಮಾಹಿತಿ ಅವಶ್ಯಕತೆಯಾಗಿದೆ. ತ್ವರಿತವಾಗಿ ಇದನ್ನು ತಲುಪಿಸುವ ಕೆಲಸ ಗ್ರಂಥಪಾಲಕರಿAದ ಆಗಬೇಕು. ಅಂತರ್ಜಾಲ ಬಳಕೆಯಿಂದ ವಿದ್ಯಾರ್ಥಿಗಳು ಪುಸ್ತಕಗಳಿಂದ ದೂರ ಉಳಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಂಥಾಲಯಗಳಲ್ಲಿ ತಂತ್ರಜ್ಞಾನದ ಅಳವಡಿಕೆಯೂ ಅನಿವಾರ್ಯತೆಯಾಗಿದೆ ಎಂದು ಅಭಿಪ್ರಾಯಿಸಿದರು.

ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯಗಳ ಸಂಘದ ಅಧ್ಯಕ್ಷ ಡಾ. ಹೆಚ್.ಎಸ್. ಸಿದ್ದಮಲ್ಲಯ್ಯ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮಾಹಿತಿ ಅತೀ ಮುಖ್ಯವಾಗಿದೆ.

(ಮೊದಲ ಪುಟದಿಂದ) ಅಗತ್ಯ ಇರುವ ಮಾಹಿತಿ ದೊರೆತಲ್ಲಿ ಗುರಿ ಹಾಗೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅಂತರ್ಜಾಲದಲ್ಲಿ ಮಾಹಿತಿಗಳು ದೊರೆಯುತ್ತಿದ್ದರೂ ಅವಶ್ಯಕತೆ ಇರುವವರಿಗೆ, ಅಧ್ಯಯನ ನಡೆಸುವವರಿಗೆ ಗ್ರಂಥಪಾಲಕರು ನೆರವು ನೀಡುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿನ ಅಧ್ಯಯನಕ್ಕೆ ಪುಸ್ತಕಗಳ ಅವಶ್ಯಕತೆ ಬೇಕಿದ್ದು, ಇದನ್ನು ಒದಗಿಸುವ ಕೆಲಸವಾಗುತ್ತಿರುವುದು ಶ್ಲಾಘನೀಯ ಎಂದ ಅವರು, ಹೊಸ ಶಿಕ್ಷಣ ನೀತಿಯಿಂದ ಅಧ್ಯಯನಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಮುಂಬೈನ ಡಾ. ಮೇದ ಜೋಶಿ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ಆರ್ಥಿಕ ಸಲಹೆಗಾರ ಆನಂದ್, ಅಧೀಕ್ಷಕ ಡಾ. ರೂಪೇಶ್ ಗೋಪಾಲ್, ಆರ್.ಎಂ.ಓ. ಡಾ. ಸತೀಶ್, ಕಾರ್ಯನಿರ್ವಹಣಾಧಿಕಾರಿ ಸ್ವಾಮಿ, ಸಂಸ್ಥೆಯ ಮುಖ್ಯ ಗ್ರಂಥಪಾಲಕ ಹಾಗೂ ಕಾರ್ಯಕ್ರಮ ಸಂಚಾಲಕ ಸಿ.ಕೆ. ಸ್ವಾಮಿನಾಯಕ್, ಕಾರ್ಯಕ್ರಮ ಮೇಲ್ವಿಚಾರಕ ಡಾ. ಪುರುಷೋತ್ತಮ್, ಸಮುದಾಯ ಆರೋಗ್ಯ ಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ. ನರಸಿಂಹ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕಾವ್ಯಶ್ರೀ ಹಾಗೂ ಸಾವ್ಯಶ್ರೀ ಪ್ರಾರ್ಥಿಸಿ, ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್ ಸ್ವಾಗತಿಸಿ, ಭವಾನಿ ರೆಡ್ಡಿ, ಅನೂಷ್ ನಿರೂಪಿಸಿ, ವಂದಿಸಿದರು. ರಾಜ್ಯದ ವಿವಿಧೆಡೆಯ ವೈದ್ಯಕೀಯ ಕಾಲೇಜಿನ ಗ್ರಂಥಪಾಲಕರು ಸಮ್ಮೇಳನದಲ್ಲಿ ಭಾಗವಹಿಸಿ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡರು.