ಸೋಮವಾರಪೇಟೆ, ಫೆ. ೯: ಕಳೆದ ಹಲವು ದಶಕಗಳಿಂದ ನಿರ್ವಹಣೆಗಾಗಿ ಎದುರು ನೋಡುತ್ತಿದ್ದ ಸೋಮವಾರ ಪೇಟೆ-ಬಾಣಾವರ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಕೊನೆಗೂ ಕಾಲ ಕೂಡಿಬಂದಿದ್ದು, ರೂ. ೧೦ ಕೋಟಿ ವೆಚ್ಚದಲ್ಲಿ ೧೨ ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆಗೊಂಡಿದೆ.
ಬಾಣಾವರದಿAದ ಸೋಮವಾರ ಪೇಟೆ ಸಂಪರ್ಕಿಸುವ ೧೨ ಕಿ.ಮೀ. ರಸ್ತೆಯ ಬಹುತೇಕ ಕಡೆಗಳಲ್ಲಿ ರಸ್ತೆ ಗುಂಡಿ ಬಿದ್ದಿದ್ದು, ವಾಹನ ಸಂಚಾರ ದುಸ್ತರವಾಗಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸರ್ಕಾರದಿಂದ ರೂ. ೧೦ ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ.
ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಸೇರಿದಂತೆ ಬಾಣಾವರದಿಂದ ಸೋಮವಾರ ಪೇಟೆವರೆಗೆ ಮರು ಡಾಂಬರೀಕರಣ ಮಾಡುವ ರೂ. ೧೦ ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಅಪ್ಪಚ್ಚುರಂಜನ್ ಅವರು ತಣ್ಣಿರುಹಳ್ಳ ಗ್ರಾಮದಲ್ಲಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಮಳೆಗಾಲ ಹಾಗೂ ಅಕಾಲಿಕ ಮಳೆ ಹಿನ್ನೆಲೆ ರಸ್ತೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯಾಗಿತ್ತು. ಇದೀಗ ಕ್ಷೇತ್ರದಾದ್ಯಂತ ರಸ್ತೆ ಕಾಮಗಾರಿಗಳು ಆರಂಭವಾಗಿವೆ. ಜಿಲ್ಲಾ ಪಂಚಾಯಿತಿ ಮೂಲಕ ಗ್ರಾಮೀಣ ಭಾಗದ ರಸ್ತೆಗಳ ಡಾಂಬ ರೀಕರಣ ಕಾಮಗಾರಿ ನಡೆಯುತ್ತಿದೆ ಎಂದರು. ರಸ್ತೆ ಕೆಲಸ ನಡೆಯುವ ಸಂದರ್ಭ ಸಾರ್ವಜನಿಕರು ಜಾಗ್ರತೆ ವಹಿಸಬೇಕು. ಕಾಮಗಾರಿ ಕಳಪೆಯಾಗ ದಂತೆ ಗಮನಿಸಬೇಕು. ರಸ್ತೆ ಹಾಗೂ ಚರಂಡಿಗೆ ಬೇಕಾದ ಅಗತ್ಯ ಜಾಗವನ್ನು ಬಿಟ್ಟುಕೊಡಲು ಮುಂದಾಗಬೇಕೆAದು ಶಾಸಕ ರಂಜನ್ ಮನವಿ ಮಾಡಿದರು. ಈ ಸಂದರ್ಭ ನೇರುಗಳಲೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಉಪಾಧ್ಯಕ್ಷ ಟಿ.ಆರ್. ಪ್ರವೀಣ್, ಸದಸ್ಯರುಗಳು, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ತಾ.ಪಂ. ಮಾಜಿ ಅಧ್ಯಕ್ಷ ಅರೆಯೂರು ಜಯಣ್ಣ, ಲೋಕೋಪ ಯೋಗಿ ಇಲಾಖಾ ಅಭಿಯಂತರರಾದ ವೆಂಕಟೇಶ್, ವಿಜಯಕುಮಾರ್, ಪ್ರಮುಖರಾದ ಹೆಚ್.ಸಿ. ರಾಮಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.