ಕುಶಾಲನಗರ, ಫೆ. ೯: ಕುಶಾಲನಗರದ ದಂಡಿನಪೇಟೆಯ ಮದರಸ ಅರೇಬಿಯ ನೂರುಲ್ ಇಸ್ಲಾಂ ಆಶ್ರಯದಲ್ಲಿ ಪಟ್ಟಣದ ಮದರಸ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಮೈಸೂರಿನ ದಂತ ವೈದ್ಯ ತಜ್ಞ ಶೌಕತ್ ಆಲಿಖಾನ್ ಶಿಬಿರಕ್ಕೆ ಚಾಲನೆ ನೀಡಿದರು.

ಮದರಸ ಸಮಿತಿ ಅಧ್ಯಕ್ಷ ಶಬ್ಬೀರ್ ಬಾಷಾ ಮತ್ತು ಉದ್ಯಮಿ ಅಮ್ಜದ್ ಹುಸೇನ್ ನೇತೃತ್ವದಲ್ಲಿ ಸುಮಾರು ೨೦೦ಕ್ಕೂ ಅಧಿಕ ಮಕ್ಕಳಿಗೆ ತಪಾಸಣೆ ನಡೆಸಲಾಯಿತು. ಮಕ್ಕಳಿಗೆ ದಂತ ಸಂರಕ್ಷಣೆ, ಸಾಮಾನ್ಯ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು. ವೈದ್ಯರಾದ ಶಾದಿಯ ನಿಜಾಂ, ನಿವೃತ್ತ ಸರ್ಕಾರಿ ವೈದ್ಯಾಧಿಕಾರಿ ಡಾ. ರಾಮಚಂದ್ರ, ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಶ್ವೇತ, ದೀಪಾ ಮಮತಾ ಮತ್ತಿತರರು ಶಿಬಿರ ನಡೆಸಿಕೊಟ್ಟರು.

ಈ ಸಂದರ್ಭ ಧರ್ಮಗುರು ಗಳಾದ ಮೊಹಮ್ಮದ್ ಯೂಸುಫ್ ಅವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ದರು. ಕುಶಾಲನಗರ ಜಾಮಿಯಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾದ ಮುಜಿಬ್ ಉರ್ ರೆಹಮಾನ್, ಕಾರ್ಯದರ್ಶಿ ರಫೀಕ್ ಅಹಮದ್, ಮತ್ತು ಪ್ರಮುಖರು ಇದ್ದರು. ಇದೇ ಸಂದರ್ಭ ಶಿಬಿರದಲ್ಲಿ ಪಾಲ್ಗೊಂಡ ವೈದ್ಯಾಧಿಕಾರಿಗಳಿಗೆ ಸನ್ಮಾನಿಸಲಾಯಿತು.