ಕೂಡಿಗೆ, ಫೆ. ೯: ಬಿ.ಜೆ.ಪಿ. ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ೧೪೫ರ ಎರಡನೇ ಬೂತ್ನ ಬೂತ್ ವಿಜಯ್ ಅಭಿಯಾನ ಕಾರ್ಯಕ್ರಮವು ನಡೆಯಿತು.
ಬೂತ್ನ ಕಾರ್ಯಕ್ರಮದ ಅಂಗವಾಗಿ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯ ಕರ ಪತ್ರಗಳನ್ನು ಹಂಚಲಾಯಿತು.
ಈ ಸಂದರ್ಭ ಬೂತ್ನ ಪ್ರಬಾರಿಯಾದ ತೊರೆನೂರು ಚಂದ್ರಪ್ಪ ಅವರ ಸಮ್ಮುಖದಲ್ಲಿ ಕೂಡಿಗೆ ಶಕ್ತಿ ಕೇಂದ್ರದ ಅಧ್ಯಕ್ಷ ಗಿರೀಶ್, ಬೂತ್ ಅಧ್ಯಕ್ಷ ಕೆ.ಡಿ. ಲೋಕೇಶ್ ಉಪಸ್ಥಿತಿಯಲ್ಲಿ ಕಾರ್ಯಕರ್ತರಾದ ಪ್ರಭು, ಯೋಗೇಶ್, ಸುಬ್ಬಯ್ಯ, ಗಿರೀಶ್, ಧರ್ಮ, ಚಂದ್ರಪ್ಪ, ಲೋಕೇಶ್ ಮತ್ತು ಹಿರಿಯ ಬಿಜೆಪಿ ಕಾರ್ಯಕರ್ತರಾದ ದೇವರಾಜ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.