ಟರ್ಕಿ, ಫೆ. ೮: ಟರ್ಕಿ- ಸಿರಿಯಾದಲ್ಲಿ ಮತ್ತೆರಡು ಬಾರಿ ಪ್ರಬಲ ಕಂಪನ ಸಂಭವಿಸಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಮೃತರ ಸಂಖ್ಯೆ ೧೧,೮೦೦ಕ್ಕೆ ಏರಿಕೆಗೊಂಡಿದೆ. ರಕ್ಷಣಾ ಕಾರ್ಯಾಚರಣೆಗೆ ಹಿಮಪಾತ ಅಡ್ಡಿಯುಂಟುಮಾಡಿದೆ.

ಭೂಕAಪನದ ಮಹಾ ದುರಂತಕ್ಕೆ ಟರ್ಕಿ ಹಾಗೂ ಸಿರಿಯಾ ರಾಷ್ಟçಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಪ್ರಬಲ ಭೂಕಂಪನದಿAದಾಗಿ ಕಟ್ಟಡಗಳು ನೆಲಸಮಗೊಂಡಿದ್ದು, ಜನರ ಆಕ್ರಂದನ, ನೆರವಿಗಾಗಿನ ಕೂಗು ಮುಗಿಲು ಮುಟ್ಟಿದೆ. ಈ ನಡುವೆ ಒಂದರ ಮೇಲೊಂದರAತೆ ಕಂಪನಗಳು ಎದುರಾಗುತ್ತಿದ್ದು, ಜನಜೀವನವನ್ನು ಮತ್ತಷ್ಟು ಛಿದ್ರಗೊಳಿಸಿದೆ. ಭೂಕಂಪ ಪೀಡಿತ ಟರ್ಕಿಯಲ್ಲಿ ಓರ್ವ ಭಾರತೀಯ ಕಾಣೆಯಾಗಿದ್ದು- ಪತ್ತೆ ಕಾರ್ಯ ನಡೆಯುತ್ತಿದೆ.

ಟರ್ಕಿಗೆ ಕೆಲಸದ ಕಾರಣ ಭೇಟಿ ನೀಡಿದ ಭಾರತೀಯರೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಇಂದು ತಿಳಿಸಿದೆ.

ಟರ್ಕಿಯಲ್ಲಿ ೩,೦೦೦ ಭಾರತೀಯ ರಿದ್ದಾರೆ. ಆದರೆ ಭೂಕಂಪನದಿAದಾಗಿ ಹತ್ತು ಭಾರತೀಯರು ಟರ್ಕಿಯ ಹಲವು ಪ್ರದೇಶಗಳಲ್ಲಿ ಸಿಲುಕಿ ಕೊಂಡಿದ್ದಾರೆ. ಆದರೆ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

‘ದೋಸ್ತ್’ ಎಂದು ಧನ್ಯವಾದ

ತಮ್ಮ ದೇಶಕ್ಕೆ ನೆರವು ಒದಗಿಸಿದ ಉದಾರತೆಗಾಗಿ ಭಾರತವನ್ನು "ದೋಸ್ತ್" ಎಂದು ಕರೆಯುತ್ತಾ, ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ತಮ್ಮನನ್ನು ಕಾಪಾಡಿದ ಬಾಲಕಿ!

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಅವಶೇಷಗಳ ಕೆಳಗೆ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಪುಟ್ಟ ತಮ್ಮನ ತಲೆಯನ್ನು ರಕ್ಷಿಸುತ್ತಿರುವ ಫೋಟೋ ಮನಸ್ಸು ಕರಗಿಸುವಂತಿದೆ.

ಟ್ವಿಟರ್ನಲ್ಲಿ ಫೋಟೋವನ್ನು ಹಂಚಿಕೊAಡಿರುವ ವಿಶ್ವಸಂಸ್ಥೆ ಪ್ರತಿನಿಧಿ ಮೊಹಮದ್ ಸಫಾ, ಇಬ್ಬರೂ ೧೭ ಗಂಟೆಗಳ ಕಾಲ ಅವಶೇಷಗಳಡಿ ಯಲ್ಲಿದ್ದು ಸುರಕ್ಷಿತವಾಗಿ ಹೊರಬಂದಿ ದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ ಕಾರ್ಯಾಚರಣೆ ವೇಳೆ ಅವಶೇಷಗಳಡಿ ಸಿಲುಕಿರುವ ಈ ಮಕ್ಕಳು ರಕ್ಷಣಾ ತಂಡದ ಗಮನಕ್ಕೆ ಬಂದಿದ್ದಾರೆ.