ಮಡಿಕೇರಿ, ಫೆ. ೮ : ರಾಜ್ಯ ಚುನಾವಣಾ ಆಯೋಗವು ೨೦೨೩ರ ಜನವರಿ ಮಾಹೆಯಿಂದ ಏಪ್ರಿಲ್ ಮಾಹೆಯವರೆಗೆ ಅವಧಿ ಮುಕ್ತಾಯ ವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ೧೯೯೩ ರ ಪ್ರಕರಣ ೩೦೮ಎಎ ಮತ್ತು ೩೦೮ಎಬಿ ರನ್ವಯ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ತಾ. ೮ ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ತಾ. ೧೪ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ತಾ. ೧೫ ರಂದು ನಾಮಪತ್ರ ಪರಿಶೀಲಿಸುವ ದಿನವಾಗಿದೆ. ತಾ. ೧೭ ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ತಾ. ೨೫ ರಂದು ಬೆಳಗ್ಗೆ ೭ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಮತದಾನ ಅವಶ್ಯವಿದ್ದರೆ, ಮತದಾನ ನಡೆಯಲಿದೆ. ತಾ. ೨೭ ರಂದು ಬೆಳಗ್ಗೆ ೭ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಮರು ಮತದಾನ ಅವಶ್ಯವಿದ್ದರೆ, ಮತದಾನ ನಡೆಸುವ ದಿನವಾಗಿದೆ. ತಾ. ೨೮ ರಂದು ಬೆಳಗ್ಗೆ ೮ ಗಂಟೆಯಿAದ ತಾಲೂಕು ಕೇಂದ್ರಗಳಲಿ ಮತಗಳ ಎಣಿಕೆ ನಡೆಯಲಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ(೦೪ ಸ್ಥಾನ), ನಿಟ್ಟೂರು(೧ ಸ್ಥಾನ), ಗೋಣಿಕೊಪ್ಪಲು (೧ ಸ್ಥಾನ), ಮಡಿಕೇರಿ ತಾಲೂಕಿನ ಎಮ್ಮೆಮಾಡು (೨ ಸ್ಥಾನ) ಒಟ್ಟಾರೆ ೪ ಗ್ರಾಮ ಪಂಚಾಯಿತಿಗಳ ಒಟ್ಟು ೮ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.