ಗೋಣಿಕೊಪ್ಪಲು, ಫೆ. ೭: ಯುವ ಪೀಳಿಗೆಯಲ್ಲಿ ಸೇವಾ ಮನೋಭಾವ ಬೆಳೆಯಲು ಭಾರತ ಸೇವಾದಳ ಸಹಕಾರಿಯಾಗಿದೆ ಎಂದು ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಎ.ಸಿ. ಗಣಪತಿ ತಿಳಿಸಿದರು.

ಪಾಲಿಬೆಟ್ಟ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜನೆ ಗೊಂಡಿದ್ದ ವೀರಾಜಪೇಟೆ ತಾಲೂಕು ಮಟ್ಟದ ರಾಷ್ಟಿçÃಯ ಭಾವೈಕ್ಯತಾ ಮಕ್ಕಳ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರö್ಯ ಪೂರ್ವದಲ್ಲಿ ಭಾರತ ಸೇವಾದಳ ವನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಅಂದಿನ ಸಂದರ್ಭದಲ್ಲಿ ಬ್ರಿಟಿಷರನ್ನು ಭಾರತದಿಂದ ಓಡಿಸಲು ಸೇವಾದಳ ಸಹಕಾರಿಯಾಗಿತ್ತು. ಗ್ರಾಮಾಂತರ ಮಟ್ಟದಲ್ಲಿ ಯುವಕ, ಯುವತಿಯರಲ್ಲಿ ಸೇವಾ ಮನೋಭಾವ ಬೆಳೆಯಬೇಕು. ನಾಯಕತ್ವ ಗುಣಗಳು ವೃದ್ಧಿ ಯಾಗಬೇಕು.

ರಾಷ್ಟಿçÃಯ ಮನೋಭಾವ ದೊಂದಿಗೆ ರಾಷ್ಟಿçÃಯ ಭಾವೈಕ್ಯತೆ, ದೇಶಭಕ್ತಿ, ದೇಶಾಭಿಮಾನ, ಇವುಗಳನ್ನು ಮೂಡಿಸುವ ಸಲುವಾಗಿ ಭಾರತ ಸೇವಾದಳ ಕೆಲಸ ನಿರ್ವಹಿಸುತ್ತಿದೆ. ಸೇವಾದಳದ ಮೂಲಕ ಎಲ್ಲರನ್ನು ಒಗ್ಗೂಡಿಸ ಬಹುದಾಗಿದೆ, ವಿದ್ಯಾರ್ಥಿಗಳಲ್ಲಿ ಸೇವಾಮನೋಭಾವ ಹೆಚ್ಚಾಗಿ ಬೆಳೆಯುವಂತಾಗಲಿ ಎಂದರು.

ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಅಜ್ಜಿಕುಟ್ಟಿರ ಸಿ. ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮೂಕೊಂಡ ವಿಜು ಸುಬ್ರಮಣಿ ಭಾರತ ದೇಶದಾದ್ಯಂತ ದೇಶಭಕ್ತಿ ಮತ್ತು ದೇಶಕ್ಕೆ ಭದ್ರಬುನಾದಿ ಹಾಕುವ ನಿಟ್ಟಿನಲ್ಲಿ ಭಾರತ ಸೇವಾದಳ ಕೆಲಸ ನಿರ್ವಹಿಸುತ್ತಿದೆ. ಭವ್ಯ ರಾಷ್ಟçವನ್ನು ಕಟ್ಟುವ ನಿಟ್ಟಿನಲ್ಲಿ ಸೇವಾದಳ ನಿರಂತರ ಕಾರ್ಯಕ್ರಮವನ್ನು ನಡೆಸುತ್ತಿದೆ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಮೂಡಿಸುವುದು ಇದರ ಮೂಲ ಉದ್ದೇಶವಾಗಿದೆ. ಭವ್ಯ ಭಾರತದ ನಿರ್ಮಾಣಕ್ಕಾಗಿ ಶಾಲಾ ವಿದ್ಯಾರ್ಥಿಗಳು ಪಣತೊಡು ವಂತೆ ಕರೆ ನೀಡಿದರು.

ಕಾರ್ಯಕ್ರಮದ ದಾನಿಗಳಾದ ಕೂತಂಡ ಬೋಜಮ್ಮ ಮಾತನಾಡಿ, ಹಲವಾರು ವರ್ಷಗಳಿಂದ ಸೇವಾ ದಳದ ಕಾರ್ಯಕ್ರಮಗಳು ನೆನೆಗುದಿಯಲ್ಲಿದ್ದವು. ಕೊರೊನಾ ಸಂದರ್ಭದಲ್ಲಿ ಜನತೆಯಲ್ಲಿ ಜಾಗೃತಿ ಮೂಡಿದೆ. ಅಂದಿನಿAದ ಭಾವೈಕ್ಯತೆಗೆ ಹೆಚ್ಚು ಒತ್ತು ನೀಡಲಾಗಿದೆ.ಮುಂದಿನ ದಿನದಲ್ಲಿ ಸೇವಾದಳವು ಉತ್ತಮ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಮೂಡಿಸುವಂತಾಗಲಿ ಎಂದರು. ಕಾರ್ಯಕ್ರಮದ ಅಂಗವಾಗಿ ಶೌರ್ಯ ಪ್ರಶಸ್ತಿ ವಿಜೇತ ಶಾಲಾ ವಿದ್ಯಾರ್ಥಿ ನಮೃತಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ನಿವೃತ್ತ ಶಿಕ್ಷಕಿಯರಾದ ಜಾನಕ್ಕಿ, ಹೇಮಾವತಿ, ಸ್ವಾತಿ ಹಾಗೂ ರೋಸಿರಾಣಿ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಭಾರತ ಸೇವಾದಳದ ತಾಲೂಕು ಉಪಾಧ್ಯಕ್ಷ ವಿಜು ಸುಬ್ರಮಣಿ, ಕಾರ್ಯದರ್ಶಿ ಹೊಟ್ಟೆಂಗಡ ಎನ್. ಸುರೇಶ್, ಖಜಾಂಚಿ ಕುಪ್ಪಂಡ ಕೆ. ದತ್ತಾತ್ರಿ, ಜಿಲ್ಲಾ ಸೇವಾದಳ ಸಮಿತಿ ಸದಸ್ಯರಾದ ಸಿ.ಡಿ. ಮಾದಪ್ಪ, ಪಿ.ಎ. ಪ್ರವೀಣ್, ತಾಲೂಕು ಸದಸ್ಯರಾದ ಚೋಂದಮ್ಮ ಎಂ.ಎಸ್. ತಮ್ಮಯ್ಯ, ಮೀರಾ ಅಶೋಕ್, ಕುಟ್ಟಂಡ ದೀಪಕ್, ಬಿ.ಇ. ರೇವಣ್ಣ ಪಾಲಿಬೆಟ್ಟ ಶಾಲೆಯ ಮುಖ್ಯೋಪಾಧ್ಯಾಯಿನಿ ಲೀಲಾವತಿ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಾಳೆಟಿರ ಪವಿತ್ರಾ, ಎಸ್.ಡಿ.ಎಂ.ಸಿ. ಅಧ್ಯಕ್ಷ ಅಕ್ಬರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ಬಯ್ಯ, ಡಿಡಿಪಿಐ ರಂಗದಾಮಯ್ಯ, ಬಿಇಓ ಶ್ರೀಶೈಲ ಬೀಳಗಿ, ಬಿಆರ್‌ಸಿ ವನಜಾಕ್ಷಿ, ಸೇರಿದಂತೆ ಪ್ರಮುಖರಾದ ಬಿ.ಆರ್. ಗಾಯತ್ರಿ, ಸದಾಶಿವ ಪಲ್ಲೇದ್, ಗಣೇಶ್, ಕರುಂಬಯ್ಯ, ರಂಗಸ್ವಾಮಿ, ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ತಾಲೂಕಿನ ೨೦ ಶಾಲೆಯ ೪೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಂಜಾನೆ ಸ್ಥಳೀಯ ವೈದ್ಯ ಡಾ. ಸುಧಾಕರ್ ಶೆಟ್ಟಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿಗಳು ನಗರದಲ್ಲಿ ಮೆರವಣಿಗೆ ನಡೆಸಿ ಗಮನ ಸೆಳೆದರು. ವಿವಿಧ ಶಾಲೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.

ವಿದ್ಯಾರ್ಥಿಗಳು ಮೈದಾನದಲ್ಲಿ ಪಥಸಂಚಲನ ನಡೆಸಿ ಅತಿಥಿಗಳಿಗೆ ಗೌರವ ವಂದನೆ ನೀಡಿದರು. ಶಿಕ್ಷಕಿ ಹಾಗೂ ಸೇವಾದಳದ ತಾಲೂಕು ಸದಸ್ಯೆ ಮೀರಾ ಅಶೋಕ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಹಲವು ಸಂಘ-ಸAಸ್ಥೆಯ ಪದಾಧಿಕಾರಿಗಳು ಶಾಲಾ ಮುಖ್ಯೋಪಾಧ್ಯಾಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿಆರ್‌ಪಿ ಕೆ.ಸಿ. ಕರುಂಬಯ್ಯ, ಸ್ವಾಗತಿಸಿ, ಸಹಶಿಕ್ಷಕಿ ಆರತಿ ನಿರೂಪಿಸಿ, ಪ್ರವೀಣ್ ವಂದಿಸಿದರು.