ಪೊನ್ನಂಪೇಟೆ, ಫೆ. ೭: ಕೊಡವ ಕ್ರಿಯೇಷನ್ಸ್ ಕೂಟದ ವತಿಯಿಂದ ಕೊಡವ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ ಕಣ್ಮರೆಯಾದ ಸಾಹಿತಿ, ದಿ. ಮುಲ್ಲೇರ ಜಿಮ್ಮಿ ಅಯ್ಯಪ್ಪ ಅವರ ಸ್ಮರಣಾರ್ಥವಾಗಿ ನಡೆದ ಆನ್ಲೈನ್ ಗಾಯನ ಸ್ಪರ್ಧೆಯು ೫ರಿಂದ ೧೭ ವಯೋಮಿತಿಯಲ್ಲಿ ಹಾಗೂ ೧೭ ವಯಸ್ಸಿಗಿಂತ ಮೇಲ್ಪಟ್ಟವರೆಂಬ ಎರಡು ವಿಭಾಗಗಳಲ್ಲಿ ನಡೆಯಿತು.
೫ರಿಂದ ೧೭ ರ ವಯೋಮಿತಿಯ ವಿಭಾಗದಲ್ಲಿ ಬೊಳ್ಳಚೆಟ್ಟೀರ ಶರೀನ್ ಚಂಗಪ್ಪ ಪ್ರಥಮ, ಉಳುವಂಗಡ ಮೋಹಿತ್ ಅಪ್ಪಯ್ಯ ದ್ವಿತೀಯ, ಚೆಯ್ಯಂಡ ದೇಶಿಕ್ ನವೀನ್ ತೃತೀಯ ಬಹುಮಾನ ಪಡೆದುಕೊಂಡರು.
೧೭ ವಯಸ್ಸಿಗಿಂತ ಮೇಲ್ಪಟ್ಟವರ ವಿಭಾಗದಲ್ಲಿ ಅಪ್ಪಾರಂಡ ಶಶಾಂಕ್ ಮೇದಪ್ಪ ಪ್ರಥಮ, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ದ್ವಿತೀಯ, ಉಳುವಂಗಡ ಲೋಹಿತ್ ಭೀಮಯ್ಯ ತೃತೀಯ ಬಹುಮಾನ ಪಡೆದುಕೊಂಡರು.
ಅಮ್ಮುಣಿಚAಡ ಪ್ರವೀಣ್ ಚಂಗಪ್ಪ, ಪಳಂಗAಡ ರೀಟಾ ನಾಚಪ್ಪ, ಬೊಟ್ಟೋಳಂಡ ಆಶಿತಾ ಬೋಪಣ್ಣ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಮುಕ್ಕಾಟೀರ ನಾಣಯ್ಯ ಮತ್ತು ಸಂಸಾರ ಬಹುಮಾನ ಪ್ರಾಯೋಜಿಸಿದರು. ಕಾರ್ಯಕ್ರಮದ ಆಯೋಜಕರಾದ ಕೊಡವ ಕ್ರಿಯೇಷನ್ಸ್ ಕೂಟದ ಪ್ರಮುಖರಾದ ಮತ್ರಂಡ ಹರ್ಷಿತ್ ಪೂವಯ್ಯ, ಪುಟ್ಟಂಗಡ ದೀಕ್ಷಿತ್ ಅಯ್ಯಪ್ಪ, ನಾಯಕಂಡ ಮದನ್ ಬೋಪಯ್ಯ, ಪೆಮ್ಮಂಡ ಸಚಿನ್ ಅಪ್ಪಣ್ಣ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.