(ವಿಶೇಷ ವರದಿ : ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಫೆ.೭: ಕಾಡಾನೆ ಹಾಗೂ ಹುಲಿಗಳ ಹಾವಳಿಯಿಂದ ತತ್ತರಿಸಿರುವ ಗ್ರಾಮಸ್ಥರು ಇದೀಗ ಕೆನ್ನಾಯಿಗಳ ಆಗಮನದಿಂದಾಗಿ ಭಯದ ವಾತಾವರಣದಲ್ಲಿ ದಿನದೂಡಬೇಕಾದ ಪರಿಸ್ಥಿತಿ ಎದುರಾಗಿದೆ. ಮತ್ತಿಗೋಡು ಅರಣ್ಯ ವ್ಯಾಪ್ತಿಗೆ ಒಳಪಡುವ ತಿತಿಮತಿ ಸಮೀಪದ ದೇವಮಚ್ಚಿ ಭಾಗದ ಅರಣ್ಯ ಅಂಚಿನಲ್ಲಿ ವಾಸಿಸುತ್ತಿರುವ ಪ್ರದೇಶದಲ್ಲಿ ಇತ್ತೀಚೆಗೆ ಪ್ರತಿನಿತ್ಯ ಕೆನ್ನಾಯಿಗಳ ಹಿಂಡು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಜನರಲ್ಲಿ ಸಹಜವಾಗಿಯೇ ಆತಂಕ ಎದುರಾಗಿದೆ.

ದೇವಮಚ್ಚಿ, ಅಕ್ಕೆಮಾಳ ಹಾಗೂ ಕಾರೆಹಡ್ಲು ಭಾಗದಲ್ಲಿ ನೂರಾರು ಕುಟುಂಬಗಳು ವಾಸವಾಗಿವೆ. ಈ ಪ್ರದೇಶಗಳು ಅರಣ್ಯ ವ್ಯಾಪ್ತಿಯ ಅಂಚಿನಲ್ಲಿರುವುದರಿAದ ಇತ್ತೀಚೆಗೆ ಕೆನ್ನಾಯಿಗಳು ಅರಣ್ಯ ಪ್ರದೇಶದಿಂದ ಜನನಿಬಿಡ ಪ್ರದೇಶಕ್ಕೆ ಲಗ್ಗೆ ಇಡುತ್ತಿವೆ. ಇಲ್ಲಿರುವ ನಾಯಿ,ಹಸು,ಮೇಕೆ, ಸೇರಿದಂತೆ ಇನ್ನಿತರ ಪ್ರಾಣಿಗಳ ಮೇಲೆ ದಾಳಿ ಇಡಲು ಮುಂದಾಗಿವೆ. ಇದರಿಂದ ಎಚ್ಚೆತ್ತುಕೊಂಡ ಗ್ರಾಮಸ್ಥರು ತಮ್ಮ ಜಾನುವಾರು ಹಾಗೂ ಇತರ ಸಾಕು ಪ್ರಾಣಿಗಳನ್ನು ಮನೆಯ ಮುಂದೆಯೇ ಕಟ್ಟಿ ಹಾಕಿಕೊಳ್ಳುತ್ತಿದ್ದಾರೆ.

ಪಾಳು ಬಿಟ್ಟಿರುವ ಭತ್ತದ ಗದ್ದೆಯಲ್ಲಿ ಈ ಹಿಂದೆ ತಮ್ಮ ತಮ್ಮ ಜಾನುವಾರುಗಳನ್ನು ಹಾಗೂ ಮೇಕೆಗಳನ್ನು ಮೇಯಲು ಬಿಡುತ್ತಿದ್ದರು. ಇದೀಗ ಕೆನ್ನಾಯಿಗಳ ಗುಂಪು ಭತ್ತದ ಗದ್ದೆಗಳ ಬಳಿ ಕಾಣಿಸಿಕೊಂಡಿರುವುದರಿAದ ತಮ್ಮ ಜಾನುವಾರುಗಳನ್ನು ಭತ್ತದ ಗದ್ದೆಯಲ್ಲಿ ಬಿಡಲು ಸಾಧ್ಯವಾಗುತ್ತಿಲ್ಲ. ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಬಳಿಯೇ ಪಾಳು ಬಿದ್ದಿರುವ ಭತ್ತದ ಗದ್ದೆಗಳಿವೆ. ಈ ಭಾಗದಲ್ಲಿ ಕೆನ್ನಾಯಿಗಳು ಕಾಣಿಸಿಕೊಂಡಿರುವುದರಿAದ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಯದಿಂದ ಸಂಚಾರ ಮಾಡುವ ಪರಿಸ್ಥಿತಿ ಎದುರಾಗಿದೆ.

ಈ ಭಾಗದಲ್ಲಿ ಮತ್ತಿಗೋಡು ಅರಣ್ಯ ವ್ಯಾಪ್ತಿಗೆ ಸೇರಿರುವ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಕೆನ್ನಾಯಿಗಳು ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿವೆೆ. ಇದೀಗ ಈ ಕೆನ್ನಾಯಿಗಳ ಗುಂಪು ಜನವಸತಿ ಪ್ರದೇಶದತ್ತ ಹೆಜ್ಜೆ ಹಾಕಿವೆ. ಈ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳು ನಿರಂತರವಾಗಿ ಸಾರ್ವಜನಿಕರಿಗೆ ದರ್ಶನ ನೀಡುತ್ತಿವೆ. ಆದರೆ ಹಲವು ಕಡೆಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಆನೆ ಕಂದಕ ನಿರ್ಮಾಣವಾಗಿರುವುದರಿಂದ ಕಾಡಾನೆಗಳು ವಸತಿ ಪ್ರದೇಶದತ್ತ ಆಗಮಿಸುತ್ತಿಲ್ಲ. ಪ್ರತಿನಿತ್ಯ ಅರಣ್ಯ ವ್ಯಾಪ್ತಿಯಿಂದ ಹುಲಿಯ ಘರ್ಜನೆಯ ಶಬ್ದವು ಇಲ್ಲಿಯ ಜನರಿಗೆ ಸಾಮಾನ್ಯವಾಗಿದೆ. ಹಲವು ಬಾರಿ ನಾಗರಿಕರಿಗೆ ಹುಲಿಯ ದರ್ಶನವಾಗಿದೆ.

(ಮೊದಲ ಪುಟದಿಂದ) ಈ ಸಾಲಿಗೆ ಇದೀಗ ಕೆನ್ನಾಯಿಗಳು ಸೇರಿಕೊಂಡಿವೆ.

ಗುAಪು ಗುಂಪಾಗಿ ಕೆನ್ನಾಯಿಗಳು ಕಾಣಿಸಿಕೊಂಡಿರುವುದರಿAದ ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಿಗೆ ಕಷ್ಟವಾಗುತ್ತಿದೆ. ರಸ್ತೆಯಲ್ಲಿ ಓಡಾಡುವ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೆನ್ನಾಯಿಗಳ ಸಂಚಾರದಿAದ ಭಯದ ವಾತಾವರಣ ಉಂಟಾಗಿದೆ.