ಶಾಸಕ ಬೋಪಯ್ಯ

ವೀರಾಜಪೇಟೆ, ಫೆ. ೭: ಜಿಲ್ಲೆಯು ಕ್ರೀಡೆಗಳ ತವರೂರು. ಕೆಲವು ವರ್ಷಗಳಿಂದ ಕ್ರೀಡೆಗಳ ಆಯೋಜನೆಯು ವಿವಿಧ ಕಾರಣಗಳಿಂದ ಕಣ್ಮರೆಯಾಗಿತ್ತು. ಆದರೆ, ಪ್ರಸ್ತುತದ ಸಾಲಿನಲ್ಲಿ ಕ್ರೀಡೆಗಳ ಗತವೈಭವ ಮರುಕಳಿಸಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ, ತೋಮರ ಗ್ರಾಮದ ಲೆಜೆಂಡ್ಸ್ ತೋರ ಕ್ರೀಡಾ ಸಂಸ್ಥೆಯ ವತಿಯಿಂದ ತೋಮರ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ ೩ನೇ ವರ್ಷದ ಹೊನಲು ಬೆಳಕಿನ ಟಿ.ಕೆ.ಪಿ.ಎಲ್. ಪ್ರೊ. ಕಬಡ್ಡಿ ಕ್ರೀಡೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಬಡ್ಡಿ ಕ್ರೀಡೆಯು ಗ್ರಾಮೀಣ ಭಾಗದ ಕ್ರೀಡೆಯಾಗಿದ್ದು, ಇಂದು ದೇಶವ್ಯಾಪಿ ಮತ್ತು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಪಸರಿಸಿದ್ದು ಉತ್ತಮ ಪ್ರೋತ್ಸಾಹ ದೊರಕುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ ಅವರು ಈ ಮೊದಲು ತೋಮರ ಗ್ರಾಮವು ಕುಗ್ರಾಮವಾಗಿತ್ತು.

ಆದರೆ ಇಂದು ಅಭಿವೃದ್ಧಿ ಗೊಂಡು ಮುಂದುವರೆದ ಗ್ರಾಮವಾಗಿದೆ. ೨೦೧೯ ರಲ್ಲಿ ಗ್ರಾಮದಲ್ಲಿ ಸಂಭವಿಸಿದ ದುರ್ಘಟನೆಯಿಂದ ಗ್ರಾಮದ ಚಿತ್ರಣವೇ ಬದಲಾಗಿತ್ತು. ಇಲ್ಲಿ ವಾಸ ಮಾಡುವುದು ಕಷ್ಟ ಎಂಬ ಭಾವನೆ ಇಲ್ಲಿನ ವಾಸಿಗಳಲ್ಲಿತ್ತು. ಆದರೆ ಗ್ರಾಮ ವಾಸಿಗಳು ಎದೆಗುಂದದೆ ದಿಟ್ಟೆದೆಯ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮ ಉದ್ದೇಶಿಸಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೌಡುದಾರೆ ಚೋಟು ಬಿದ್ದಪ್ಪ ಅವರು ಮಾತನಾಡಿದರು. ಕಾರ್ಯಕ್ರಮದ ಮೊದಲಿಗೆ ೨೦೧೯ ರಲ್ಲಿ ದುರ್ಘಟನೆಯಲ್ಲಿ ಮಡಿದವರಿಗೆ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಕ್ರೀಡಾಂಗಣದ ಉದ್ಘಾಟನೆ ಮಾಡಲಾಯಿತು.

ವೇದಿಕೆಯಲ್ಲಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಡಿಕೇರಿಯಂಡ ಶೀಲಾ ಮೇದಪ್ಪ, ಉಪಾಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ಕೆ.ಎಂ. ರಾಮಯ್ಯ, ಎಂ.ಎA. ಪರಮೇಶ್ವರ, ಜಯಂತಿ ಮತ್ತು ದಾನಿಗಳಾದ ಬೈಮನ ಮಧು ನಾಣಯ್ಯ ಉಪಸ್ಥಿತರಿದ್ದರು.

ದಿ ಲೇಜೆಂಡ್ಸ್ ತೋರ ಕ್ರೀಡಾ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕ್ರೀಡಾ ಪಟುಗಳು, ಕ್ರೀಡಾ ತಂಡಗಳ ಮಾಲೀಕರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.