ಮಡಿಕೇರಿ, ಫೆ. ೭: ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ರಾಜ್ಯ ಖೆೆÃಲೋ ಇಂಡಿಯಾ ಆಶ್ರಯದಲ್ಲಿ ಇಲ್ಲಿನ ಸಾಯಿ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ ಸಾಯಿ ಬಾಲಕಿಯರ ಹಾಕಿ ಪಂದ್ಯಾಟದಲ್ಲಿ ಮಡಿಕೇರಿ ಸಾಯಿ ತಂಡಗಳು ಫೈನಲ್ ಪ್ರವೇಶಿಸಿವೆ.

ಇಂದು ನಡೆದ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಮಡಿಕೇರಿ ತಂಡ ಎಸ್‌ಟಿಸಿ ಹೈದರಾಬಾದ್ ತಂಡವನ್ನು ೧-೦ ಗೋಲುಗಳಿಂದ ಮಣಿಸಿ ಫೈನಲ್‌ಗೇರಿತು.

ಇದಕ್ಕೂ ಮುನ್ನ ನಡೆದ ಲೀಗ್ ಪಂದ್ಯಾವಳಿಯ ಸಬ್ ಜೂನಿಯರ್ ವಿಭಾಗದಲ್ಲಿ ಹೈದರಾಬಾದ್ ತಂಡ ೨-೦ ಗೋಲುಗಳಿಂದ ಮಡಿಕೇರಿ ತಂಡವನ್ನು ಮಣಿಸಿತು. ಜೂನಿಯರ್ ವಿಭಾಗದಲ್ಲಿ ಮಡಿಕೇರಿ ತಂಡ ೧೧-೦ ಗೋಲುಗಳ ಅಂತರದಿAದ ಕೊಲ್ಲಂ ತಂಡವನ್ನು ಮಣಿಸಿತು.

ತಾ. ೮ ರಂದು (ಇಂದು) ಸಂಜೆ ಅಂತಿಮ ಪಂದ್ಯಾವಳಿ ಮಡಿಕೇರಿ ಎ ಮತ್ತು ಬಿ ತಂಡಗಳ ನಡುವೆ ನಡೆಯಲಿದೆ.

(ಮೊದಲ ಪುಟದಿಂದ)

ಉದ್ಘಾಟನೆ: ಇಂದಿನ ಪಂದ್ಯಾವಳಿಯನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಶ್ಮಯಿ ಉದ್ಘಾಟಿಸಿ, ಶುಭ ಹಾರೈಸಿದರು. ಶಕ್ತಿ ಉಪ ಸಂಪಾದಕ ಕುಡೆಕಲ್ ಸಂತೋಷ್, ಸಾಯಿ ಕೇಂದ್ರದ ಆಡಳಿತಾಧಿಕಾರಿ ಮಿನಿ ಉನ್ನಿರಾಜ್, ತರಬೇತುಗಾರ್ತಿ ಕೋಮಲ್, ಲೆಕ್ಕಾಧಿಕಾರಿ ರಾಣಿ ಕರುಂಬಯ್ಯ, ಸಿಬ್ಬಂದಿಗಳಾದ ಬೋಜಪ್ಪ, ಈಶ್ವರ್, ಇತರರಿದ್ದರು.