ಮಡಿಕೇರಿ, ಫೆ. ೭: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಕೊಡಗು ಜಿಲ್ಲೆ ವತಿಯಿಂದ ತಾ. ೧೩ ರಿಂದ ೧೫ ರವರೆಗೆ ಜಿಲ್ಲಾಮಟ್ಟದ ಕಲಿಕಾ ಹಬ್ಬ ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಸಂತೋಷದಾಯಕವಾದ ಕಲಿಕೆ ಹಾಗೂ ಕಲಿಕೆಯಲ್ಲಿ ಜೀವನ ಕೌಶಲ್ಯ ಗಳನ್ನು ಬೆಳೆಸುವುದು ಕಲಿಕಾ ಹಬ್ಬದ ಪರಿಕಲ್ಪನೆಯಾಗಿದೆ. ಈ ಕಾರ್ಯಕ್ರಮ ದಲ್ಲಿ ಪೋಷಕರು, ಶಿಕ್ಷಣಾಸಕ್ತರು ಭಾಗವಹಿಸಬಹುದು ಎಂದು ಸಮಗ್ರ ಶಿಕ್ಷಣ ಕರ್ನಾಟಕ ಪದನಿಮಿತ್ತ ಜಿಲ್ಲಾ ಉಪ ಯೋಜನಾ ಸಮನ್ವಯಾ ಧಿಕಾರಿಗಳು ಹಾಗೂ ಉಪ ನಿರ್ದೇಶಕ ರಂಗಧಾಮಯ್ಯ ತಿಳಿಸಿದ್ದಾರೆ.