ಮಡಿಕೇರಿ, ಫೆ. ೬: ಮಡಿಕೇರಿ ವಿದ್ಯಾನಗರದ ಕೆಹೆಚ್‌ಬಿ ಬಡಾವಣೆಯಲ್ಲಿ ನೂತನವಾಗಿ ಶ್ರೀ ನಾಗರಾಜನ ಪ್ರತಿಷ್ಠಾ ಕಲಶವು ಬ್ರಹ್ಮ ಶ್ರೀ ವೇದವ್ಯಾಸ ತಂತ್ರಿ ಪೆರಾಜೆ ಯವರ ನೇತೃತ್ವದಲ್ಲಿ ನಡೆಯಿತು. ಗಣಪತಿ ಹೋಮ, ಸಾಮೂಹಿಕ ಪ್ರಾರ್ಥನೆ, ವಾಚನ, ಸ್ಥಳ ಶುದ್ಧಿ, ತಂಬಿಲ ಸೇವೆ, ವಾಸ್ತುಬಲಿ, ದಿಕ್ಕು, ಆಶ್ಲೇಷ ಬಲಿ, ಮತ್ತು ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಸಮಿತಿಯ ಸುದೀಂಧ್ರ ಮದ್ಯಸ್ಥ , ಮಣಿ, ರವೀಂದ್ರ ಹಾಗೂ ಬಡಾವಣೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.