ಮಡಿಕೇರಿ, ಫೆ. ೬: ಪ್ರತಿಷ್ಠಿತವಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಜಾನಪದ ಕಲಾವಿದೆ ಕೊಡಗಿನವರಾದ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಹಾಗೂ ಪದಾಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದರು. ಈ ಸಂದರ್ಭ ಕಾರ್ಯಾಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲರಾದ

ಬಾಚಿರ ಎಸ್. ಕಾರ್ಯಪ್ಪ, ಚೊಟ್ಟೆಯಂಡಮಾಡ ಎನ್. ವಿಶ್ವನಾಥ್, ಅರಮಣಮಾಡ ಸತೀಶ್ ದೇವಯ್ಯ, ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ ಹಾಗೂ ಇತರರು ಪಾಲ್ಗೊಂಡಿದ್ದರು.