ಕುಶಾಲನಗರ, ಫೆ. ೬: ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಫಿ ಬೆಳೆಗಾರರಾದ ಮಂಥರ್ ಗೌಡ ಅವರು ಉದ್ಘಾಟಿಸಿದರು.
ಜಲ ಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷರಾದ ವಿ.ಎನ್. ವಸಂತ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಪ್ರಮೋದ್ ಮುತ್ತಪ್ಪ, ಪರಿಷತ್ ಗೌರವ ಕೋಶಾಧಿಕಾರಿ ಎಂ.ಬಿ. ಜೋಯಪ್ಪ, ಪತ್ರಕರ್ತ ಎಚ್.ಟಿ. ಅನಿಲ್, ಪರಿಷತ್ನ ಪ್ರಮುಖರು ಇದ್ದರು.