ಮಡಿಕೇರಿ, ಫೆ. ೬: ಕೆದಮುಳ್ಳೂರು ಪುತ್ತಮಕ್ಕಿ ವಾರ್ಡ್ಸಭೆ ತಾ. ೮ ರಂದು ಪುತ್ತಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಸದಸ್ಯೆ ಕೋರಿಯಾರು ತಾಯಮ್ಮ ಅವರ ಅಧ್ಯಕ್ಷತೆಯಲ್ಲಿ ಅಪರಾಹ್ನ ೨.೩೦ ಗಂಟೆಗೆ ನಡೆಯಲಿದೆ. ಕೆದಮುಳ್ಳೂರು ಕ್ರಿಶ್ಚಿಯನ್ ಕಾಲೋನಿ ವಾರ್ಡ್ಸಭೆ ತಾ. ೧೩ ರಂದು ಕ್ರಿಶ್ಚಿಯನ್ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ವಾರ್ಡ್ ಸದಸ್ಯೆ ವೀಣಾ ವಿಮಲ ಅಧ್ಯಕ್ಷತೆಯಲ್ಲಿ ಅಪರಾಹ್ನ ೨.೩೦ ಗಂಟೆಗೆ ನಡೆಯಲಿದೆ. ಕೆದಮುಳ್ಳೂರು ತೋಮರ ವಾರ್ಡ್ಸಭೆ ತಾ. ೮ ರಂದು ತೋಮರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಸದಸ್ಯ ಕೆ.ಎಂ. ರಾಮಯ್ಯ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ ೧೦.೩೦ ಗಂಟೆಗೆ ನಡೆಯಲಿದೆ. ಪಾಲಂಗಾಲ ವಾರ್ಡ್ಸಭೆ ತಾ. ೧೩ ರಂದು ಪಾಲಂಗಾಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಸದಸ್ಯ ಎಂ.ಎA. ಪರಮೇಶ್ವರ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ ೧೦.೩೦ ಗಂಟೆಗೆ ನಡೆಯಲಿದೆ ಎಂದು ಪಂಚಾಯಿತಿ ಪ್ರಕಟಣೆ ತಿಳಿಸಿದೆ.