ಕೂಡಿಗೆ, ಫೆ. ೫: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಮೂರು ಗ್ರಾಮಗಳ ಯುವಕರು, ಗ್ರಾಮಸ್ಥರು, ಕ್ರೀಡಾಭಿಮಾನಿಗಳು ಸೇರಿ ಸಮತಟ್ಟು ಮಾಡಿರುವ ಮೈದಾನಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿಕ್ಕತ್ತೂರು, ದೊಡ್ಡತ್ತೂರು, ಸುಂದರನಗರ ಗ್ರಾಮಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರ ಪ್ರಯತ್ನದಿಂದಾಗಿ, ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಮೈದಾನ ಸಮತಟ್ಟು ಮಾಡುವ ಕೆಲಸವಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಕ್ರೀಡಾಕೂಟ ಗಳನ್ನು ನಡೆಸಲು ಉತ್ತಮ ಅವಕಾಶ ವಾಗಲಿದೆ. ಇದನ್ನು ಗ್ರಾಮೀಣ ಪ್ರದೇಶದ ಯುವಕರು ಸದ್ಬಳಕೆ ಮಾಡಿ ಕೊಳ್ಳಬೇಕು. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಸಹಕಾರ ನೀಡುವ ಭರವಸೆ ನೀಡಿದರು. ಈ ಸಂದರ್ಭ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ದಿನೇಶ್, ಗಿರೀಶ್ ಮಣಿ ಕಂಠ, ಭಾಗ್ಯಮ್ಮ, ತಾಲೂಕು ಮಾಜಿ ಸದಸ್ಯ ಗಣೇಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ.ಸಿ. ಸ್ವಾಮಿ, ಗುಜೇಂದ್ರ, ಜಿಲ್ಲಾ ಕುರುಬ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಭಾಕರ್, ಮಾದಪ್ಪ, ಹೊನ್ನಣ್ಣ, ಶಿವನಂದರೈ, ಮಂಜುನಾಥ ಮಂಜಣ್ಣ, ಸೇರಿದಂತೆ ಮೂರು ಗ್ರಾಮಗಳÀ ಪ್ರಮುಖರು ಹಾಜರಿದ್ದರು.