ಮಡಿಕೇರಿ, ಫೆ. ೫: ಕೊಡಗು ಜಿಲ್ಲಾ ಬಂಟರ ಸಂಘದ ಮಹಾಸಭೆ ನಗರದ ಕಾವೇರಿ ಹಾಲ್‌ನಲ್ಲಿ ನಡೆಯಿತು. ಸಂಘದ ಪ್ರಬಾರ ಅಧ್ಯಕ್ಷ ವಿ. ರವೀಂದ್ರ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಉದ್ಯಮಿ ಬಿ.ಡಿ. ಜಗದೀಶ್ ರೈ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲನಗರದ ಉದ್ಯಮಿ ವಿ. ರವೀಂದ್ರ ರೈ ಅವಿರೋಧ ಆಯ್ಕೆಯಾದರು.

ಸಭೆಯ ಆರಂಭದಲ್ಲಿ ಉಪಾಧ್ಯಕ್ಷ ಬಿ.ಕೆ. ರವೀಂದ್ರ ರೈ ಅವರು ಸಂಘ ಮತ್ತು ಟ್ರಸ್ಟ್ನ ಆಸ್ತಿಯ ಬಗ್ಗೆ ವಿವರಣೆ ನೀಡಿದರು. ಜಾಗದ ವಿಚಾರವಾಗಿ ಕೆಲವರು ದುರುದ್ದೇಶಪೂರಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಜಾಗದ ಬಗೆಗಿನ ಎಲ್ಲಾ ನಿಖರ ದಾಖಲೆಗಳು ಸಂಘದ ಬಳಿ ಇದ್ದು, ಯಾರು ಯಾವಾಗ ಬೇಕಾದರೂ ಪರಿಶೀಲಿಸ ಬಹುದೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರವೀಂದ್ರ ವಿ. ರೈ ಮಾತನಾಡಿ, ಹಲವು ವರ್ಷಗಳ ಬಳಿಕ ಎಲ್ಲರೂ ಒಟ್ಟು ಸೇರಿದ್ದೇವೆ. ಮಾಜಿ ಅಧ್ಯಕ್ಷರು, ಕಾರ್ಯದರ್ಶಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೆಲವೇ ಕೆಲವರು ಸೇರಿ ಸಂಘದ ಸದಸ್ಯರನ್ನು ಗಮನಕ್ಕೆ ತೆಗೆದುಕೊಳ್ಳದೆ ತಾವೇ ಸಂಘ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಈ ಹಿಂದೆ ಆಡಳಿತ ಮಂಡಳಿ

(ಮೊದಲ ಪುಟದಿಂದ) ಸಭೆ ಕರೆಯುವುದಕ್ಕೂ ಆಸಕ್ತಿ ತೋರಿಸಿ ರಲಿಲ್ಲ. ಹಲವು ಬಾರಿ ಗಡುವು ನೀಡಿದರೂ ಸಭೆ ಕರೆಯಲಿಲ್ಲ. ಜನವರಿ ೮ರಂದು ಔತಣಕೂಟದ ಹೆಸರಿನಲ್ಲಿ ಸಭೆ ನಡೆಸಿ ಘೋಷಣೆ ಮಾಡಿಕೊಂಡಿ ದ್ದಾರೆ. ಸಂಘದ ಪದಾಧಿಕಾರಿಗಳಿಗೂ ಮಾಹಿತಿ ನೀಡಲಿಲ್ಲ ಎಂದು ತಿಳಿಸಿದರು.

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಡಿ. ಜಗದೀಶ್ ರೈ ಮಾತನಾಡಿ, ಮುಂದಿನ ದಿನದಲ್ಲಿ ಸಂಘದಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ಸಮುದಾಯಕ್ಕೆ ಬೇಕಾದ ಅಗತ್ಯ ಕೆಲಸ ಕಾರ್ಯಗಳನ್ನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡುವುದಾಗಿ ಹೇಳಿದರು.

ಸಮುದಾಯಕ್ಕೆ ಬಂಟರ ಭವನದ ಅಗತ್ಯತೆ ಇದ್ದು, ತನ್ನ ಆಡಳಿತಾವಧಿ ಯಲ್ಲಿ ಭವನ ನಿರ್ಮಾಣ ಮಾಡುವು ದಾಗಿ ಭರವಸೆ ನೀಡಿದರು. ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಶೀಘ್ರದಲ್ಲೇ ಆಯ್ಕೆ ಮಾಡುವುದಾಗಿ ಜಗದೀಶ್ ರೈ ತಿಳಿಸಿದರು.

ಬಂಟರ ಸಂಘದ ಗಮನಕ್ಕೆ ತರದೆ ಸಂಘದ ಅಧ್ಯಕ್ಷ ಸ್ಥಾನದ ಸ್ವಯಂ ಘೋಷಣೆ ಮಾಡಿಕೊಂಡು ಪದಾಧಿಕಾರಿಗಳು ಜನಾಂಗದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ವೀರಾಜಪೇಟೆಯ ರತ್ನಾಕರ ಶೆಟ್ಟಿ ಅವರನ್ನು ಸಭೆಯಲ್ಲಿದ್ದ ಸರ್ವ ಸದಸ್ಯರ ಒಕ್ಕೊರಲ ಆಗ್ರಹದ ಮೇರೆಗೆ ಸರ್ವಾನುಮತದೊಂದಿಗೆ ಜಿಲ್ಲಾ ಬಂಟರ ಸಂಘದಿAದ ಅನಿರ್ದಿಷ್ಟಾವಧಿಗೆ ಉಚ್ಚಾಟನೆ ಮಾಡಿ ನಿರ್ಣಯ ಕೈಗೊಳ್ಳಲಾಯಿತು.

ಸಂಘದ ಬೆಳವಣಿಗೆ ಬಗ್ಗೆ ಹಲವರು ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯದರ್ಶಿ ಬಿ.ಸಿ. ಹರೀಶ್ ರೈ ವರದಿ ವಾಚಿಸಿದರು. ಖಜಾಂಚಿ ಬಿ.ಎನ್. ರತ್ನಾಕರ ರೈ ಆರ್ಥಿಕ ವರದಿ ಮಂಡಿಸಿದರು. ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜನಾರ್ಧನ ಶೆಟ್ಟಿ, ವೀರಾಜಪೇಟೆ ತಾಲೂಕು ಅಧ್ಯಕ್ಷ ದುಷ್ಯಂತ ರೈ, ಮಡಿಕೇರಿ ತಾಲೂಕು ಅಧ್ಯಕ್ಷ ರಮೇಶ್ ರೈ ಉಪಸ್ಥಿತರಿದ್ದು, ನೂತನ ಸಮಿತಿಗೆ ಬೆಂಬಲ ವ್ಯಕ್ತಪಡಿಸಿ ದರು. ಬಾಲಕೃಷ್ಣ ರೈ ಸ್ವಾಗತಿಸಿದರು. ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿ ದರು. ಹಿತ ಯೋಗೇಶ್ ಶೆಟ್ಟಿ ಪ್ರಾರ್ಥಿಸಿ ದರು. ಹರೀಶ್ ರೈ ವಂದಿಸಿದರು.