ಗುಡ್ಡೆಹೊಸೂರು, ಫೆ. ೫: ಇಲ್ಲಿನ ಹಿತರಕ್ಷಣ ಸಮಿತಿ ವತಿಯಿಂದ ಮೂರನೇ ವರ್ಷದ ಜಿಲ್ಲಾಮಟ್ಟದ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.
ಎರಡು ದಿನಗಳ ಕಾಲ ನಡೆಯುವ ಪಂದ್ಯಾವಳಿಗೆ ಅಂರ್ರಾಷ್ಟಿçÃಯ ಸೆಷ್ಟೋಬಾಲ್ ಕ್ರೀಡಾಪಟು ನಂದಿನಿ ಅವರು ಬೊಳ್ಳೂರಿನ ಶ್ರೀ ಬಸವೇಶ್ವರ ದೇವಸ್ಥಾನದಿಂದ ಜ್ಯೋತಿಯನ್ನು ಮೈದಾನಕ್ಕೆ ತಂದು ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿತರಕ್ಷಣಾ ಸಮಿತಿಯ ಶಶಿ ವಹಿಸಿದ್ದರು. ಉದ್ಯಮಿ ಸಚಿನ್, ಗ್ರಾ.ಪಂ. ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಯಶೋದÀ, ಸದಸ್ಯರಾದ ಬಿ.ಎಂ. ಪ್ರದೀಪ್, ನಾರಾಯಣ, ಗಂಗಮ್ಮ, ಕೆ.ಆರ್. ನಿತ್ಯಾನಂದ, ಶಾಲಾ ಮುಖ್ಯ ಶಿಕ್ಷಕ ಸಣ್ಣಸ್ವಾಮಿ, ಸಮಿತಿಯ ಕಾರ್ಯದರ್ಶಿ ಅಭಿಜಿತ್ ಎಲ್ಲಾ ಸದಸ್ಯರು ಹಾಜರಿದ್ದರು.
ಬಸವನಹಳ್ಳಿ ಪ್ರೌಢಶಾಲಾ ಶಿಕ್ಷಕ ಲಕ್ಷö್ಮಣ ಕಾರ್ಯಕ್ರಮ ನಿರೂಪಿಸಿದರು.