ಗೋಣಿಕೊಪ್ಪ ವರದಿ, ಫೆ. ೫ : ಹೃದಯ ಒಪ್ಪಿಕೊಳ್ಳುವಂತಹ ವೃತ್ತಿಯನ್ನು ಆರಿಸಿಕೊಳ್ಳಿ ಎಂದು ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಇಲಾಖೆ ರಾಜ್ಯ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹೇಳಿದರು.
ಕಾಲ್ಸ್ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಗ್ಯಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ ಅವರು, ವಿದ್ಯಾರ್ಥಿ ಜೀವನದಲ್ಲಿ ಗುರಿ, ಶ್ರಮ, ಶ್ರದ್ಧೆಯೊಂದಿಗೆ ಉತ್ಸಾಹ ಬೆರೆತರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಪ್ರಾಂಶುಪಾಲೆ ಬಾಚೆಟ್ಟಿರ ಗೌರಮ್ಮ ನಂಜಪ್ಪ ಮಾತನಾಡಿ, ಸೋಲಿಗೆ ಅಂಜದೆ ಗೆಲುವು ಪಡೆದುಕೊಳ್ಳುವ ಹಠ ಮುಖ್ಯವಾಗಬೇಕು. ಸ್ನೇಹ ಕೂಡ ಬದುಕಿಗೆ ಸಾಕಷ್ಟು ಯಶಸ್ಸು ತಂದುಕೊಡುತ್ತದೆ ಎಂದರು. ಶಾಲಾ ಮುಖ್ಯಸ್ಥ ದತ್ತ ಕರುಂಬಯ್ಯ, ಮ್ಯಾನೇಜಿಂಗ್ ಟ್ರಸ್ಟಿ ಅಶ್ವಿನಿ ನಾಚಪ್ಪ ಇದ್ದರು.