ಸೋಮವಾರಪೇಟೆ, ಫೆ.೫ : ಕ್ರೀಡಾ ಪ್ರತಿಭೆಗಳ ಅನ್ವೇಷಣೆ ಹೆಸರಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಅಥ್ಲೆಟಿಕ್ಸ್ ತರಬೇತುದಾರರೂ ಆಗಿರುವ ಅಂತೋಣಿ ಅವರು ಸಮೀಪದ ಬಳಗುಂದ ಗ್ರಾಮದಲ್ಲಿ ಆಯೋಜಿಸಿದ್ದ ರಸ್ತೆ ಓಟ ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ೩೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗಿಯಾಗಿದ್ದರು.

ಸೋಮವಾರಪೇಟೆ ಪಟ್ಟಣ ವನ್ನೂ ಒಳಗೊಂಡAತೆ ಸುತ್ತಮುತ್ತಲ ೧೦ ಕಿ.ಮೀ. ವ್ಯಾಪ್ತಿಯ ೪-೫ನೇ ತರಗತಿಯಿಂದ ಪ್ರೌಢಶಾಲೆಯವರೆಗಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಲಯ ಮಟ್ಟದ ರಸ್ತೆ ಓಟದ ಸ್ಪರ್ಧೆಯು ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಿತು.

೪ ಮತ್ತು ೫ನೇ ತರಗತಿ ವಿದ್ಯಾರ್ಥಿಗಳಿಗೆ ಬಜೆಗುಂಡಿ ಅಯ್ಯಪ್ಪಸ್ವಾಮಿ ದೇವಾಲಯದಿಂದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದವರೆಗೆ ೫೦೦ ಮೀಟರ್ ಓಟ, ೬ ಮತ್ತು ೭ನೇ ತರಗತಿ ವಿದ್ಯಾರ್ಥಿಗಳಿಗೆ ಕುಸುಬೂರು ದೇವಾಲಯದಿಂದ ೧೦೦೦ ಮೀಟರ್ ಓಟ, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕುಸುಬೂರು ಕೆರೆಯಿಂದ ೨ ಸಾವಿರ ಮೀಟರ್ ಓಟದ ಸ್ಪರ್ಧೆಗಳನ್ನು ಆಯೋಜಿ¸ Àಲಾಗಿತ್ತು.

ಕಾರ್ಯಕ್ರಮದ ರೂವಾರಿ, ೬೪ ರಾಷ್ಟಿçÃಯ ಕ್ರೀಡಾಕೂಟಗಳಲ್ಲಿ ಭಾಗಿಯಾಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಅಂತೋಣಿ ಅವರು ಮಾತನಾಡಿ, ಭಾರತದಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಸಹ ಒಲಂಪಿಕ್ಸ್ನಲ್ಲಿ ಹೆಚ್ಚಿನ ಸಾಧನೆ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು. ಕ್ರೀಡೆಯೆಂಬುದು ಕಲೆಯೂ ಹೌದು, ಹೋರಾಟವೂ ಹೌದು. ಸರಿ ದಾರಿಯಲ್ಲಿ ಸಾಗಿದಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ಕ್ರೀಡೆಯ ಬಗ್ಗೆ ಅಸಡ್ಡೆ ಇರಬಾರದು. ಮಕ್ಕಳು ಮೊಬೈಲ್ ಗೀಳಿಗೆ ಬಿದ್ದಿದ್ದಾರೆಂದು ಪೋಷಕರು ಆರೋಪಿಸುತ್ತಾರೆ, ಆದರೆ ಪೋಷಕರೇ ಮನೆಯಲ್ಲಿ ಮೊಬೈಲ್ ನಲ್ಲಿ ಮುಳುಗಿರುತ್ತಾರೆ. ಪೋಷಕರು ಮೊಬೈಲ್ ಬಿಟ್ಟರೆ ಮಕ್ಕಳೂ ಸಹ ಇತರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.

ಮುAದಿನ ದಿನಗಳಲ್ಲಿ ಬಳಗುಂದ ವ್ಯಾಪ್ತಿಯಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಕೂಡಿಗೆ ಕ್ರೀಡಾಶಾಲೆಯ ತರಬೇತುದಾರ ಬಿ.ಎಸ್. ವೆಂಕಟೇಶ್, ಕೊಡಗು ಅಥ್ಲೆಟಿಕ್ ಸಂಸ್ಥೆಯ ನಿರ್ದೇಶಕ ಕೆ.ಎ. ಪ್ರಕಾಶ್, ರಾಷ್ಟಿçÃಯ ಹಾಕಿ ಆಟಗಾರ ಸಂಭ್ರಮ್, ಬಳಗುಂದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೆ.ಎನ್. ರಮೇಶ್ ಅವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಬೇಳೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುರೇಶ್, ಎಸ್‌ಡಿಎಂಸಿ ಅಧ್ಯಕ್ಷ ಪಿ. ರಶೀದ್, ಮಾಜಿ ಮಂಡಲ ಪ್ರಧಾನ ಪುಟ್ಟರಾಜು, ಪ್ರಮುಖರಾದ ಬಿ.ಎಸ್. ಸುರೇಶ್, ಸುನಿಲ್‌ಕುಮಾರ್, ಜೇಸೀ ಅಧ್ಯಕ್ಷೆ ಎಂ.ಎ. ರುಬೀನಾ, ಅಣ್ಣಪ್ಪ, ಆನಂದ್, ಎಲ್ವಿನ್ ಡಿಸೋಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಸ್ತೆ ಓಟದ ಸ್ಪರ್ಧೆ-ವಿಜೇತರು: ೪ ರಿಂದ ೫ ನೇ ತರಗತಿ ಬಾಲಕರ ವಿಭಾಗ- ೫೦೦ ಮೀಟರ್ ಓಟ: ಸುಶಾಂತ್, ಗಾಯನ್, ಮಂಜುನಾಥ್, ಮೋಹಿತ್, ಮಣಿಕಂಠ, ಬಾಲಕಿಯರ ವಿಭಾಗದಲ್ಲಿ ಚಿಂತನ, ಇಂಚರ, ಹರ್ಷಿತ, ಯಶಸ್ವಿನಿ, ನಿಹಾರ ಅವರುಗಳು ಕ್ರಮವಾಗಿ ಸ್ಥಾನಗಳನ್ನು ಗಳಿಸಿದರು.

೬ ಮತ್ತು ೭ನೇ ತರಗತಿ ಬಾಲಕರ ವಿಭಾಗದ ೧೦೦೦ ಮೀಟರ್ ಓಟದಲ್ಲಿ ಕೆ.ಎಂ. ಶ್ರೇಯಸ್, ಚಂದನ್, ಮಣಿಕಂಠ, ಪವನ್, ಹರೀಶ್, ಬಾಲಕಿಯರ ವಿಭಾಗದಲ್ಲಿ ತಜ್ಞವಿ, ಸಂಜನ, ಸುಕೃತ, ಅನನ್ಯ, ಚೈತ್ರ, ಪ್ರೌಢಶಾಲಾ ಬಾಲಕರ ವಿಭಾಗದ ೨೦೦೦ ಮೀಟರ್ ಓಟದಲ್ಲಿ ಸರ್ಕಾರಿ ಪ್ರೌಢಶಾಲೆಯ ಮಿಥುನ್, ಚಿರಾಗ್, ಓಎಲ್‌ವಿ ಶಾಲೆಯ ಮಿಥುನ್ ಬಹುಮಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ ಅರ್ಪಿತ, ವೈಶಾಲಿ, ಜನನಿ ಬಹುಮಾನ ಪಡೆದರು. ಆಶಾ ಮತ್ತು ವಿಸ್ಮಯ ಸಮಾಧಾನಕರ ಬಹುಮಾನ ಪಡೆದರು. ಇದರೊಂದಿಗೆ ರಸ್ತೆ ಓಟದ ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.