ವೀರಾಜಪೇಟೆ, ಫೆ. ೫: ಗಣರಾಜ್ಯೋತ್ಸವದ ಅಂಗವಾಗಿ ವೀರಾಜಪೇಟೆ ಕರ್ನಾಟಕ ಸಂಘದ ವತಿಯಿಂದ ಸ್ಥಳೀಯ ಪುರಭವನದಲ್ಲಿ ಇತ್ತೀಚೆಗೆ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ನೃತ್ಯಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಅರಮೇರಿಯ ಎಸ್‌ಎಂಎಸ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದಿದ್ದಾರೆ.

ನೃತ್ಯ ಸ್ಪರ್ಧೆಯಲ್ಲಿ ಶ್ರೇಯ ಮತ್ತು ತಂಡ ಪ್ರಥಮ ಸ್ಥಾನ ಹಾಗೂ ತಷ್ಮಾ ಮತ್ತು ತಂಡ ತೃತೀಯ ಸ್ಥಾನ ಪಡೆದರೆ ಛದÀ್ಮವೇಶ ಸ್ಪರ್ಧೆಯಲ್ಲಿ ಕೆ.ಎನ್. ದೀಕ್ಷಾ ಪ್ರಥಮ ಸ್ಥಾನ ಗಳಿಸಿರುವುದಾಗಿ ಶಾಲಾ ಪ್ರಾಂಶುಪಾಲರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಗುರುಗಳಾದ ಹೇಮಾವತಿ ಕಾಂತರಾಜ್, ಕಾವ್ಯಶ್ರೀ ನೃತ್ಯಾಭ್ಯಾಸ ಕಲಿಸುತ್ತಿದ್ದಾರೆ.