ವಾಷಿಂಗ್ಟನ್, ಫೆ. ೫: ಚೀನಾದ ಬೇಹುಗಾರಿಕೆಯ ಬಲೂನ್‌ನ್ನು ಅಮೇರಿಕಾ ಹೊಡೆದುರುಳಿಸಿದ್ದು, ಇದಕ್ಕೆ ತೀವ್ರವಾಗಿ ಕೆಂಡಾಮAಡಲ ಗೊಂಡಿರುವ ಚೀನಾ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ ಹಾಕಿದೆ.

ಅಮೇರಿಕಾದ ಭದ್ರತಾ ಸೂಕ್ಷö್ಮ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಚೀನಾದ ಸ್ಪೆöÊ ಬಲೂನ್ ಬಗ್ಗೆ ಗಂಭೀರವಾಗಿ ಮಿಲಿಟರಿ ಅಧಿಕಾರಿಗಳ ಜೊತೆ ಚರ್ಚಿಸಿದ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು.

ಅಧ್ಯಕ್ಷ ಜೋ ಬಿಡೆನ್ ಅವರ ಸೂಚನೆ ಮೇರೆಗೆ, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಉನ್ನತ ಮಿಲಿಟರಿ ಅಧಿಕಾರಿ ಗಳು ಬಲೂನ್ ಹೊಡೆದುರುಳಿಸಲು ಯೋಜನೆ ಹಾಕಿಕೊಂಡಿದ್ದರು. ಆದರೆ, ಹೊಡೆದುರುಳಿಸುವುದರಿಂದ ಕೆಳಗಿರುವ ಹಲವಾರು ಜನರಿಗೆ ಅಪಾಯವಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದರು.

ಅದರಂತೆ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಅಮೇರಿಕಾದ ಫೈಟರ್ ಜೆಟ್ ಚೀನಾದ ಗುಪ್ತಚರ ಬಲೂನ್‌ನನ್ನು ಹೊಡೆದುರುಳಿಸಿದೆ. ಕೆರೊಲಿನಾ ಕರಾವಳಿಯಲ್ಲಿ ಪತ್ತೆಯಾದ ಸ್ಪೆöÊ ಬಲೂನನ್ನು ಅಮೇರಿಕಾ ಹೊಡದುರುಳಿಸಿದೆ.

ವರದಿಗಳ ಪ್ರಕಾರ, ಹೊಡೆದುರುಳಿಸಲಾದ ಬಲೂನು ಜನವರಿ ೨೮ ರಂದು ಅಮೆರಿಕದ ವಾಯುಪ್ರದೇಶವನ್ನು ಮೊದಲು ಪ್ರವೇಶಿಸಿತು. ಬಳಿಕ ಜನವರಿ ೩೦ ರಂದು ಕೆನಡಾ ಭಾಗಕ್ಕೆ ಹೋಗಿ ಮರುದಿನ ಮತ್ತೆ ಅಮೇರಿಕಾದ ಕಡೆ ಬಂದಿತ್ತು. ಆದರೆ, ಇದು ಸಾಗರ ಪ್ರದೇಶಕ್ಕೆ ಬರದೇ ಇದ್ದುದರಿಂದ ಶೂಟ್ ಮಾಡಲು ಕಷ್ಟವಾಗಿತ್ತು. ಕೊನೆಗೆ ಶನಿವಾರ ಈ ಬಲೂನನ್ನು ಕ್ಷಿಪಣಿ ಮೂಲಕ ಹೊಡೆದುರುಳಿ ಸಲಾಗಿದೆ ಎಂದು ತಿಳಿದುಬಂದಿದೆ.

ಚೀನಾದ ಈ ಬಲೂನು ತಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂತಿತ್ತು ಎಂದು ಅಮೇರಿಕಾ ಹೇಳಿದ್ದು, ಬಲೂನನ್ನು ಹೊಡೆದುರುಳಿಸುವ ಬಗ್ಗೆ ಚೀನಾಗೆ ಮಾಹಿತಿಯನ್ನೂ ನೀಡಿತ್ತು ಎಂದು ಅಮೇರಿಕಾದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಚೀನಾದ ವಿದೇಶಾಂಗ ಸಚಿವಾಲಯವು ಈ ಬಲೂನ್ ಚೀನಾಕ್ಕೆ ಸೇರಿದ್ದು ಎಂದು ಶುಕ್ರವಾರ ದೃಢಪಡಿಸಿತ್ತು. ಇದು ಹವಾಮಾನ ಸಂಶೋಧನೆ ನಡೆಸುತ್ತಿರುವ ನಾಗರಿಕ ವಾಯುನೌಕೆಯಾಗಿದ್ದು, ಆಕಸ್ಮಿಕವಾಗಿ ಹಾರಿಹೋಗಿದೆ ಎಂದು ಹೇಳಿತ್ತು.

ಅಮೇರಿಕಾ ಬಲೂನ್‌ನ್ನು ಹೊಡೆದುರುಳಿಸಿರುವುದಕ್ಕೆ ತೀಕ್ಷ÷್ಣವಾಗಿ ಪ್ರತಿಕ್ರಿಯಿಸಿರುವ ಚೀನಾ, ಅಮೇರಿಕಾದಿಂದ ಅಂರ‍್ರಾಷ್ಟಿçÃಯ ಪ್ರಮಾಣಿತ ನಡಾವಳಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ಅಮೇರಿಕಾ ಹೊಡೆದು ರುಳಿಸಿದ ಬಲೂನು ಯಾವುದೇ ಬೇಹುಗಾರಿಕೆ ಕಾರ್ಯಕ್ಕೆ ಬಳಕೆ ಯಾಗುತ್ತಿರಲಿಲ್ಲ. ನಾಗರಿಕ ಸೇವೆ ಉದ್ದೇಶದಿಂದ ಆ ಪ್ರದೇಶದ ಬಳಿ ಹೋಗಿತ್ತು. ಆದರೆ, ಆಕಸ್ಮಿಕವಾಗಿ ಅದು ಅಮೇರಿಕಾ ಪ್ರದೇಶಕ್ಕೆ ಹಾದು ಹೋಗಿದೆ. ಅಷ್ಟಕ್ಕೆ ಅಮೇರಿಕಾ ಅತಿರೇಕವಾಗಿ ವರ್ತಿಸಿದೆ. ಅಮೇರಿಕಾದ ಈ ಕ್ರಮಕ್ಕೆ ತಾನು ಅಷ್ಟೇ ತೀವ್ರವಾಗಿ ಸ್ಪಂದಿಸುವ ಅಧಿಕಾರ ತನಗಿದೆ ಎಂದು ಚೀನಾ ಬೆದರಿಕೆ ಹಾಕಿದೆ.

ಅಮೇರಿಕಾ-ಚೀನಾ ನಡುವೆ ಬಲೂನ್ ವಾರ್ ಶುರುವಾಗಿದ್ದು, ದೊಡ್ಡಣ್ಣನ ತಾಕತ್ತು ತಿಳಿಯಲು ಕಮ್ಯುನಿಸ್ಟ್ ಹಾರಿಸಿರೋ ಬಲೂನ್ ಇದಾಗಿದೆ ಎಂದು ಹೇಳಲಾಗುತ್ತಿದೆ.

ತೈವಾನ್ ವಿಚಾರವಾಗಿ ವಾಗ್ಯುದ್ಧ ದಲ್ಲಿ ನಿರತವಾಗಿದ್ದ ಎರಡೂ ರಾಷ್ಟçಗಳು ರಣಾಂಗಣ ದಲ್ಲಿ ಮುಖಾಮುಖಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.