ಮಡಿಕೇರಿ, ಫೆ. ೪: ಕುಶಾಲನಗರ ಬಳಿಯ ಗುಮ್ಮನಕೊಲ್ಲಿಯ ದಿನಸಿ ಅಂಗಡಿಯ ಮಾಲೀಕರೋರ್ವರ ಮೊಬೈಲ್ನಿಂದ ಗೂಗಲ್ ಪೇ, ಫೋನ್ಪೇ ಮೂಲಕ ಹಣ ಲಪಟಾಯಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಸೈಬರ್ ಕ್ರೆöÊಂ ಪೊಲೀಸರು ಆರೋಪಿಯಿಂದ ರೂ. ೧.೮೦ ಲಕ್ಷದಷ್ಟು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಗುಮ್ಮನಕೊಲ್ಲಿಯ ವ್ಯಾಪಾರಿಯೋರ್ವರ ಮೊಬೈಲ್ ಬಳಿಸಿ ಗುಡ್ಡೆಹೊಸೂರು ಬಳಿಯ ಬೊಳ್ಳೂರು ಗ್ರಾಮ ನಿವಾಸಿ, ಬಿ.ಎಂ. ನೂತನ್ ಎಂಬಾತ ಒಟ್ಟು ೪,೭೬,೪೫೬ ಹಣವನ್ನು ತನ್ನ ಹಾಗೂ ಸ್ನೇಹಿತರ ಖಾತೆಗೆ ವರ್ಗಾಯಿಸಿಕೊಂಡಿದ್ದ. ಈ ಸಂಬAಧ ವ್ಯಾಪಾರಿಯ ಪುತ್ರಿ ಅನುಷಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ನೂತನ್ನನ್ನು ಬಂದಿಸಿದ್ದರು. ಆತನಿಂದ ರೂ. ೧.೮೦ ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನುಳಿದ ಹಣದ ಪತ್ತೆಗಾಗಿ ಪೊಲೀಸರು ಕ್ರಮಕೈಗೊಂಡಿದ್ದಾರೆ.