ಮುಳ್ಳೂರು, ಫೆ. ೪: ತಾ. ೬ ರಂದು ರೋಟರಿ ಕ್ಲಬ್ ಗವರ್ನರ್ ಪ್ರಕಾಶ್ ಕಾರಂತ್ ಅವರು ಶನಿವಾರಸಂತೆ ರೋಟರಿ ಕ್ಲಬ್‌ಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಶನಿವಾರಸಂತೆ ರೋಟರಿ ಕ್ಲಬ್ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ರೋಟರಿ ಕ್ಲಬ್ ಪ್ರಕಟಣೆ ತಿಳಿಸಿದೆ.

ತಾ. ೬ ರಂದು ಬೆಳಿಗ್ಗೆ ೧೧ ಗಂಟೆಗೆ ಗೋಪಾಲಪುರ ಜಂಕ್ಷನ್‌ನಲ್ಲಿ ಶನಿವಾರಸಂತೆಗೆ ಆಗಮಿಸಲಿರುವ ರೋಟರಿ ಕ್ಲಬ್ ಗವರ್ನರ್ ಪ್ರಕಾಶ್ ಕಾರಂತ್ ಅವರನ್ನು ಸ್ವಾಗತಿಸಿದ ನಂತರ ರೋಟರಿ ಸಂಸ್ಥೆ ವತಿಯಿಂದ ಅಳವಡಿಸಿದ ಮಾರ್ಗಸೂಚಿ ಅನಾವರಣ, ಮಧ್ಯಾಹ್ನ ೧೨ ಗಂಟೆಗೆ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಮಿಕರಿಗೆ ವ್ಯಾಕ್ಸಿನೇಶನ್ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ ೧೨.೩೦ಕ್ಕೆ ಅಪ್ಪಶೆಟ್ಟಳ್ಳಿ ಗ್ರಾಮದ ಖಾಸಗಿ ರೆಸಾರ್ಟ್ನಲ್ಲಿ ಪತ್ರಿಕಾಗೋಷ್ಠಿ, ಮಧ್ಯಾಹ್ನ ೧.೧೫ಕ್ಕೆ ಕ್ಲಬ್ ಅಸಂಬ್ಲಿ ಕಾರ್ಯಕ್ರಮ, ಸಂಜೆ ೭ ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ಐದು ಮಂದಿ ಸಮಾಜ ಸೇವಕರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.