ಗೋಣಿಕೊಪ್ಪ ವರದಿ, ಫೆ. ೫: ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬಸವೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಮಲ್ಲೇಂಗಡ ಬೆಳ್ಯಪ್ಪ ಸ್ಮಾರಕ ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನಿಯನ್ನು ಎ.ಕೆ. ಫ್ರೆಂಡ್ಸ್ ತಂಡ ಗೆದ್ದುಕೊಂಡಿತು. ಹುದಿಕೇರಿ ಎ.ಜೆ. ಫ್ರೆಂಡ್ಸ್ ದ್ವಿತೀಯ ತಂಡವಾಗಿ ಹೊರಹೊಮ್ಮಿತು. ಫೈನಲ್ ಹಣಾಹಣಿಯಲ್ಲಿ ಎ.ಕೆ. ಫ್ರೆಂಡ್ಸ್ ತಂಡವು ೨೨ ರನ್‌ಗಳಿಂದ ಜಯಿಸಿತು. ೬೫ ರನ್‌ಗಳ ಗುರಿ ಬೆನ್ನತ್ತಿದ ಎ.ಜೆ. ಫ್ರೆಂಡ್ಸ್ ೪೩ ರನ್ ಗಳಿಸಿತು. ೧೭ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.

ದಾನಿ ಮಲ್ಲೇಂಗಡ ಅಯ್ಯಪ್ಪ, ಕಾರ್ಯಪ್ಪ ಬಹುಮಾನ ವಿತರಣೆ ಮಾಡಿದರು. ಸ್ಥಳೀಯರಾದ ಮಲ್ಲೇಂಗಡ ಪೂಣಚ್ಚ, ಕವನ್, ಕೊಣಿಯಂಡ ಸಂಜು ಸೋಮಯ್ಯ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಶಾಂತಕುಮಾರ್ ಇದ್ದರು.