ಮಡಿಕೇರಿ, ಫೆ. ೪: ದಿನನಿತ್ಯದ ಜಂಜಾಟದ ನಡುವೆ ಆರೋಗ್ಯದ ಬಗ್ಗೆಯೂ ಪ್ರತಿಯೊಬ್ಬರಿಗೆ ಕಾಳಜಿ ಇರಲಿ ಎಂದು ‘ಶಕ್ತಿ’ಯ ಪ್ರಧಾನ ಸಂಪಾದಕರು ಹಾಗೂ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿಯ ಮಹಾಪೋಷಕರಾದ ಜಿ. ರಾಜೇಂದ್ರ ಅವರು ಸಲಹೆ ನೀಡಿದರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಅಂಗವಾಗಿ ಕೊಡಗು ಪ್ರೆಸ್ ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಡಗು ಜಿಲ್ಲಾ ಘಟಕ, ಅಶ್ವಿನಿ ಆಸ್ಪತ್ರೆ, ಮೈಸೂರು ಸುಯೋಗ್ ಆಸ್ಪತ್ರೆ, ಮಡಿಕೇರಿ ವಾಕ್ ಮತ್ತು ಶ್ರವಣ ಇನ್ ಪ್ಲಾಂಟ್ ಕ್ಲಿನಿಕ್ ಜಸ್ಟೀಸ್ ಕೆ.ಎಸ್. ಹೆಗ್ಡೆ ಸ್ಮಾರಕ ದಂತ ವಿಭಾಗ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಅಶ್ವಿನಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಸ್ಥಿತಿ ಎಸ್ಟೇ ಉತ್ತಮವಾಗಿದ್ದರೂ ಆರೋಗ್ಯ ಸ್ಥಿತಿ ಸರಿ ಇಲ್ಲವಾದರೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಮಾದಕ ವ್ಯಸನಗಳಿಂದ ದೂರವಿರಬೇಕು ಎಂದು ರಾಜೇಂದ್ರ ಅವರು ಕಿವಿ ಮಾತು ಹೇಳಿದರು.
ಅಶ್ವಿನಿ ಆಸ್ಪತ್ರೆಯ ಕಾರ್ಯದರ್ಶಿ ಕುಪ್ಪಂಡ ರಾಜಪ್ಪ ಅವರು ಮಾತನಾಡಿ, ಹಣ ಸಂಪಾದನೆಗಿAತ ಉತ್ತಮ ಸೇವೆ ಒದಗಿಸುವುದು ಅಶ್ವಿನಿ ಆಸ್ಪತ್ರೆಯ ಮುಖ್ಯ ಧ್ಯೇಯವಾಗಿದೆ. ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಸೇರಿದಂತೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಶಸ್ತç ಚಿಕಿತ್ಸೆ ವ್ಯವಸ್ಥೆಯನ್ನು ಅಶ್ವಿನಿ ಆಸ್ಪತ್ರೆಯಲ್ಲಿ ಮಾಡಲು ಕಾರ್ಯಪ್ರವೃತ್ತರಾಗುತ್ತಿರು\ವುದಾಗಿ ತಿಳಿಸಿದರು. ಮಾಧ್ಯಮಗಳು ಅನಗತ್ಯ ಟೀಕೆಗಳನ್ನು ಮಾಡದೇ ನಿಸ್ಪಕ್ಷಪಾತ ವಾಗಿ ಕೆಲಸ ಮಾಡುವಂತಾಗಬೇಕು ಎಂದು ಅಭಿಪ್ರಾಯಿಸಿದರು.
ಅಶ್ವಿನಿ ಆಸ್ಪತ್ರೆಯ ಡಾ. ಪವನ್ ಮಾತನಾಡಿ, ಆರೋಗ್ಯವನ್ನು ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದರು.
(ಮೊದಲ ಪುಟದಿಂದ) ಬೆಳ್ಳಿ ಮಹೋತ್ಸವ ಆಚರಣಾ ಸಮಿತಿಯ ಆರೋಗ್ಯ ಸಮಿತಿ ಸಂಚಾಲಕ ಜೆರುಸ್ ಥೋಮಸ್ ಅಲೆಗ್ಸಾಂಡರ್ ಮಾತನಾಡಿ, ಆರೋಗ್ಯ ತಪಾಸಣಾ ಶಿಬಿರಗಳನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿ ಕೊಳ್ಳಬೇಕೆಂದರು.
ಮೈಸೂರು ಸುಯೋಗ್ ಆಸ್ಪತ್ರೆಯ ಡಾ. ರಾಘವೇಂದ್ರ ಮಾತನಾಡಿ, ಹೃದಯ ಸಂಬAಧಿ ತಪಾಸಣೆಯನ್ನು ನಿರ್ಲಕ್ಷö್ಯ ಮಾಡಬಾರದು ಎಂದು ಹೇಳಿದರು. ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾದ ಉಳ್ಳಿಯಡ ಎಂ. ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಪ್ರಯುಕ್ತ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಸರ್ವರ ಸಹಕಾರ ಇರಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಪ್ರೆಸ್ ಕ್ಲಬ್ ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಆರೋಗ್ಯ ಸಮಿತಿಯ ಸಂಚಾಲಕ ಅಬ್ದುಲ್ಲಾ, ದಂತ ವೈದ್ಯರಾದ ಡಾ. ಅನುಶ್ರೀ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಕುಪ್ಪಂಡ ದತ್ತಾತ್ರಿ, ಸುನಿಲ್ ಪೊನ್ನೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ದಿವಾಕರ್ ನಿರೂಪಿಸಿ, ಅಬ್ದುಲ್ಲಾ ಸ್ವಾಗತಿಸಿದರು. ಪ್ರತಿಕ್ಷಾ ಪ್ರಾರ್ಥಿಸಿ, ಅಶ್ವಿನಿ ಆಸ್ಪತ್ರೆಯ ಡಾ. ದಿವ್ಯಜ್ಯೋತಿ ವಂದಿಸಿದರು. ಶಿಬಿರದಲ್ಲಿ ಸಾಮಾನ್ಯ ತಪಾಸಣೆ, ಸ್ತಿçÃರೋಗ, ಕಿವಿ, ಗಂಟಲು, ಮೂಗು, ಕತ್ತು, ತಲೆ, ಸರ್ಜಿಕಲ್ ಆಂಕೋಲಜಿಸ್ಟ್, ದಂತ ಚಿಕಿತ್ಸೆ, ಹೃದಯ, ವಾಕ್ ಮತ್ತು ಶ್ರವಣ ಪರೀಕ್ಷೆಗಳನ್ನು ಮಾಡಲಾಯಿತು. ಇಸಿಜಿ, ಇಕೋ ತಪಾಸಣೆ ನಡೆಯಿತು.