ಸುಪ್ರೀಂ ಕೋರ್ಟ್ಗೆ ಐವರು ಹೊಸ ನ್ಯಾಯಾಧೀಶರ ನೇಮಕ
ನವದೆಹಲಿ, ಫೆ. ೪: ಕಳೆದ ವರ್ಷ ಡಿಸೆಂಬರ್ ೧೩ ರಂದು ಕೊಲಿಜಿಯಂ ಶಿಫಾರಸು ಮಾಡಿದ್ದ ಹೆಸರುಗಳಿಗೆ ಕೇಂದ್ರ ಸರ್ಕಾರ ಶನಿವಾರ ಅನುಮೋದನೆ ನೀಡಿದ್ದು, ಸುಪ್ರೀಂ ಕೋರ್ಟ್ಗೆ ಐವರು ಹೊಸ ನ್ಯಾಯಾಧೀಶರು ನೇಮಕಗೊಂಡಿದ್ದಾರೆ. ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿಥಾಲ್, ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್, ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ವಿ. ಸಂಜಯ್ ಕುಮಾರ್, ಪಾಟ್ನಾ ಹೈಕೋರ್ಟ್ನ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಟ್ವೀಟ್ ಮಾಡಿದ್ದಾರೆ. ಮುಂದಿನ ವಾರದ ಆರಂಭದಲ್ಲಿ ಈ ಐವರು ನ್ಯಾಯಾಧೀಶರು ಪ್ರಮಾಣ ವಚನ ಸ್ವೀಕರಿಸಿಲಿದ್ದು, ಇದರೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಒಟ್ಟು ಸಂಖ್ಯೆ ೩೨ಕ್ಕೆ ಏರಿಕೆಯಾಗಲಿದೆ. ಪ್ರಸ್ತುತ, ಸುಪ್ರೀಂ ಕೋರ್ಟ್ನಲ್ಲಿ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ೨೭ ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡುವ ನ್ಯಾಯಾಧೀಶರನ್ನು ನೇಮಕ ಮಾಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಐವರು ನ್ಯಾಯಾಧೀಶರ ನೇಮಕಾತಿಗೆ ಒಪ್ಪಿಗೆ ನೀಡಿದೆ.
ಹಿರಿಯ ಗಾಯಕಿ ವಾಣಿ ಜೈರಾಮ್ ನಿಧನ
ಚೆನ್ನೈ, ಫೆ. ೪: ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪದ್ಮಭೂಷಣ ಹಾಗೂ ರಾಷ್ಟç ಪ್ರಶಸ್ತಿ ವಿಜೇತೆ ಗಾಯಕಿ ವಾಣಿ ಜೈರಾಮ್ ಅವರು ಇಂದು ನಿಧನರಾಗಿದ್ದಾರೆ. ಚೆನ್ನೆöÊನಲ್ಲಿ ನೆಲೆಸಿದ್ದ ೭೮ ವರ್ಷ ವಾಣಿ ಜೈರಾಮ್ ಅವರು ಐದು ದಶಕಗಳ ವೃತ್ತಿಜೀವನವನ್ನು ಹೊಂದಿದ್ದಾರೆ. ವಾಣಿ ಅವರ ಮನೆಕೆಲಸದಾಕೆ ಮಲಾರಕೋಡಿ ಅವರು ನಿನ್ನೆ ರಾತ್ರಿ ವಾಣಿ ಅವರನ್ನು ಕೊನೆದಾಯಗಿ ನೋಡಿದ್ದರು. ಇಂದು ಬೆಳಿಗ್ಗೆ ೧೦.೩೦ರ ಸುಮಾರಿಗೆ ಮಲಾರಕೋಡಿ ಕೆಲಸಕ್ಕೆ ಬಂದಿದ್ದಾರೆ. ಎಷ್ಟೇ ಕೂಗಿದರೂ ಮನೆ ಬಾಗಿಲು ತೆರೆಯದಿದ್ದರಿಂದ ಮಲಾರಕೋಡಿ ಸಂಬAಧಿಕರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಳ್ವಾರ್‌ಪೇಟೆಯಲ್ಲಿ ವಾಸವಿದ್ದ ಸಹೋದರಿ ಬಳಿಯಿದ್ದ ನಕಲಿ ಕೀ ಬಳಸಿ ಬಾಗಿಲು ತೆರೆದಾಗ ವಾಣಿ ಅವರು ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿರುವುದು ಪತ್ತೆಯಾಗಿತ್ತು. ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವಾಣಿ ಅವರ ಮೃತದೇಹವನ್ನು ಓಮಂದೂರರ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಿವಿಧ ಭಾರತೀಯ ಭಾಷೆಗಳಲ್ಲಿ ಸುಮಾರು ೧೦,೦೦೦ ಹಾಡುಗಳನ್ನು ಹಾಡಿದ್ದಾರೆ. ವೆಲ್ಲೂರಿನವರಾದ ಅವರು ತಮಿಳು, ಕನ್ನಡ, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಗುಜರಾತಿ, ಹರ್ಯಾನ್ವಿ, ಅಸ್ಸಾಮಿ, ತುಳು ಮತ್ತು ಬಂಗಾಳಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡಿದ್ದಾರೆ. ಸಾವಿರಾರು ಭಕ್ತಿಗೀತೆಗಳನ್ನು ಹಾಡಿದ್ದಾರೆ. ಅಲ್ಲದೆ ಪ್ರಪಂಚದಾದ್ಯAತ ಹಲವಾರು ಸಂಗೀತ ಕಚೇರಿಗಳನ್ನು ಸಹ ನಡೆಸಿಕೊಟ್ಟಿದ್ದಾರೆ. ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ ೧೯೭೧ರ ಹಿಂದಿ ಚಿತ್ರ ಗುಡ್ಡಿಯೊಂದಿಗೆ ವಾಣಿ ಜೈರಾಮ್ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದರು.
ಜನವರಿ ತಿಂಗಳಲ್ಲಿ ೧ ಲಕ್ಷಕ್ಕೂ ಅಧಿಕ ಟೆಕ್ಕಿಗಳ ಉದ್ಯೋಗ ಕಡಿತ!
ನವದೆಹಲಿ, ಫೆ. ೪: ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಔದ್ಯೋಗಿಕ ವಲಯದ ಹಿನ್ನಡೆಯಿಂದಾಗಿ ಜಗತ್ತಿನಾದ್ಯಂತ ಉದ್ಯೋಗ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಕೇವಲ ಒಂದೇ ತಿಂಗಳ ಅವಧಿಯಲ್ಲಿ ಬರೊಬ್ಬರಿ ೧ ಲಕ್ಷ ಟೆಕ್ಕಿಗಳು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ವರದಿ ಹೊರ ಬಿದ್ದಿದೆ. ಜಾಗತಿಕವಾಗಿ ಜನವರಿ ಒಂದೇ ತಿಂಗಳಲ್ಲಿ ಬರೋಬ್ಬರಿ ೧ ಲಕ್ಷ ಟೆಕ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದು, ಅಂದರೆ ನಿತ್ಯ ಸರಾಸರಿ ೩,೩೦೦ ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಉದ್ಯೋಗ ಕಡಿತಕ್ಕೆ ಸಂಬAಧಿಸಿದ ಮಾಹಿತಿ ಸಂಗ್ರಹಿಸಿರುವ ಐಚಿಥಿoಜಿಜಿs.ಜಿಥಿi ವೆಬ್‌ಸೈಟ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ೨೦೨೨ರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಂಪನಿಗಳು ೧,೫೪,೩೩೬ ಉದ್ಯೋಗಿಗಳನ್ನು ವಜಾ ಮಾಡಿವೆ. ಜನವರಿ ತಿಂಗಳಲ್ಲಿ ಪ್ರಪಂಚದಾದ್ಯAತ ಸುಮಾರು ೨೮೮ ಟೆಕ್ ಕಂಪೆನಿಗಳು ಉದ್ಯೋಗ ಕಡಿತ ಮಾಡಿವೆ. ಇ-ಕಾಮರ್ಸ್ ಕ್ಷೇತ್ರದ ದೈತ್ಯ ಕಂಪನಿ ಅಮೆಜಾನ್ (೧೮,೦೦೦), ತಂತ್ರಜ್ಞಾನ ಕ್ಷೇತ್ರದ ದೊಡ್ಡ ಕಂಪೆನಿಗಳಾದ ಗೂಗಲ್ (೧೨,೦೦೦) ಹಾಗೂ ಮೈಕ್ರೊಸಾಫ್ಟ್ (೧೦,೦೦೦) ಅತಿಹೆಚ್ಚು ಟೆಕ್ ಉದ್ಯೋಗಿಗಳನ್ನು ವಜಾ ಮಾಡಿವೆ. ನಂತರದ ಸ್ಥಾನಗಳಲ್ಲಿ ಸೇಲ್ಸ್ಫೋರ್ಸ್ (೭,೦೦೦), ಐಬಿಎಂ (೩,೯೦೦) ಹಾಗೂ ಸ್ಯಾಪ್ (೩,೦೦೦) ಕಂಪೆನಿಗಳಿವೆ ಎಂದು ಹೇಳಿದೆ.
ಪತ್ರಿಕೆ-ಮಾಧ್ಯಮ ಲಾಭದಾಯಕ ದಂಧೆಯಾಗಿದೆ- ಕಾರಜೋಳ
ವಿಜಯಪುರ, ಫೆ. ೪: ಪತ್ರಿಕೋದ್ಯಮ ಲಾಭ, ನಷ್ಟದ ಲೆಕ್ಕಾಚಾರ ಮಾಡುವಂತಾಗಿದ್ದು, ಸಾಮಾಜಿಕ ಕಳಕಳಿ ಮರೆಯಾಗಿದೆ. ಮಾಧ್ಯಮ ಮಿತ್ರರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ವಿಜಯಪುರ ನಗರದ ಕಂದಗಲ್ ಹನುಮಂತ ರಾಯ ರಂಗಮAದಿರದಲ್ಲಿ ಆಯೋಜಿರುವ ಎರಡು ದಿನಗಳ ಪತ್ರಕರ್ತರ ೩೭ನೇ ರಾಜ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸ್ವಾತಂತ್ರ‍್ಯ ಹೋರಾಟಗಾರರಾಗಿದ್ದ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೂಡ ಪತ್ರಕರ್ತರು ಆಗಿದ್ದರು. ಹೀಗಾಗಿ ಪತ್ರಕರ್ತರು ಹೆಮ್ಮೆ ಪಡಬೇಕು ಎಂದರು. ಅಂತೆಯೇ ಸ್ವಾತಂತ್ರ‍್ಯ ಪೂರ್ವ ಹಾಗೂ ಸ್ವಾತಂತ್ರ‍್ಯ ಹೋರಾಟಕ್ಕೆ ಪತ್ರಿಕೆಗಳು ಪ್ರೇರಣೆಯಾಗಿದ್ದವು. ಆದರೆ, ಇಂದು ಪತ್ರಿಕಾ ಮಾಧ್ಯಮಗಳಲ್ಲಿ ಸಾಮಾಜಿಕ ಕಳಕಳಿ ಉಳಿದಿಲ್ಲ. ಲಾಭದಾಯಕ ದಂಧೆಯಾಗಿದೆ. ಪತ್ರಿಕೋದ್ಯಮ ಲಾಭ, ನಷ್ಟದ ಲೆಕ್ಕಾಚಾರ ಮಾಡುವಂತಾಗಿದೆ. ಸಾಮಾಜಿಕ ಕಳಕಳಿ ಮರೆಯಾಗಿದೆ. ಮಾಧ್ಯಮ ಮಿತ್ರರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪತ್ರಕರ್ತರು, ರಾಜಕಾರಣಿಗಳು ಸ್ವಯಂ ನೀತಿ ಸಂಹಿತೆ ರೂಪಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಇದೇ ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪಾಸ್ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ನಕಲಿ ಪತ್ರಕರ್ತರ ಗ್ಯಾಂಗ್ ಹೆಚ್ಚಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಯೂಟ್ಯೂಬ್ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಅವರಿಗೆ ಮಾನ, ಮರ್ಯಾದೆ ಇಲ್ಲ ಎಂದು ಆರೋಪಿಸಿದರು. ಒಬ್ಬ ಪ್ರಬುದ್ಧ ರಾಜಕಾರಣಿ ಆಗಲು ೨೫, ೩೦ ವರ್ಷ ಬೇಕು. ಮಾಧ್ಯಮದವರು ಏಕಾಏಕಿ ರಾಜಕಾರಣಿಗಳ ತೇಜೋವಧೆ ಮಾಡಬೇಡಿ. ವಿಶ್ವಾಸಾರ್ಹತೆ ಉಳಿಸಿಕೊಳ್ಳಿ ಎಂದರು. ದಿನ ಪತ್ರಿಕೆಗಳು ಇಂದಿಗೂ ತಮ್ಮ ವಿಶ್ವಾಸ ಉಳಿಸಿಕೊಂಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಸ್ತೆಯಲ್ಲಿ ಅಡ್ಡ ಬಂದ ಒಂಟೆಗೆ ಕಾರು ಡಿಕ್ಕಿ : ನಾಲ್ವರು ಸಾವು
ಮಂಗಳೂರು, ಫೆ. ೪: ಸೌದಿ ಅರೇಬಿಯಾದ ಅಲ್-ಹಸಾ ಪ್ರದೇಶದ ಖುರೈಸ್ ಹೆದ್ದಾರಿಯಲ್ಲಿ ಹಠಾತ್ತನೆ ಒಂಟೆಯೊAದು ರಸ್ತೆಗೆ ಅಡ್ಡ ಬಂದ ಪರಿಣಾರ ಭೀಕರ ಅಪಘಾತ ಸಂಭವಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಹಳೆಯಂಗಡಿ ಬಳಿಯ ಕದಿಕೆ ನಿವಾಸಿ ೨೩ ವರ್ಷದ ರಿಜ್ವಾನ್, ಮಂಗಳೂರು ಬೆಂಗರೆ ನಿವಾಸಿ ಅಕೀಲ್, ಸುರತ್ಕಲ್ ಕೃಷ್ಣಾಪುರದ ಶಿಹಾಬ್ ಹಾಗೂ ಬಾಂಗ್ಲಾದೇಶದ ನಾಸೀರ್ ಎಂದು ಗುರುತಿಸಲಾಗಿದೆ. ಬದ್ರುದ್ದೀನ್ ಮತ್ತು ಅಲೀಮಾ ದಂಪತಿಯ ಒಬ್ಬನೇ ಮಗನಾಗಿದ್ದ ರಿಜ್ವಾನ್ ನಾಲ್ಕು ತಿಂಗಳ ಹಿಂದಷ್ಟೇ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದನು. ಇನ್ನು ದಂಪತಿಗೆ ಮೂವರು ಪುತ್ರಿಯರಿದ್ದು ಮಗನನ್ನು ಕಳೆದುಕೊಂಡು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ ಸ್ಯಾಕೊ ಕಂಪನಿಯ ಉದ್ಯೋಗಿಯಾಗಿದ್ದು ಇವರು ಕಳೆದ ರಾತ್ರಿ ಕೆಲಸಕ್ಕೆ ತೆರಳುತ್ತಿರುವಾಗ ಒಂಟೆಯೊAದು ಹಠಾತ್ತನೆ ರಸ್ತೆಗೆ ಅಡ್ಡ ಬಂದಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮೃತದೇಹಗಳನ್ನು ಅಲ್ಲಿನ ಅಲ್-ಹಸಾ ಪ್ರದೇಶದ ಆಸ್ಪತ್ರೆಗೆ ರವಾನಿಸಲಾಗಿದೆ.