ಸೋಮವಾರಪೇಟೆ, ಫೆ. ೫: ಕೊಡಗು ಜಿಲ್ಲಾ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಘಟಕದ ವತಿಯಿಂದ ತಾಲೂಕಿನ ತಲ್ತಾರೆಶೆಟ್ಟಳ್ಳಿ ವಲಯದ ಸಭೆ ಅಭಿಮಠ ಗ್ರಾಮದಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಬಿ.ಈ. ಜಯೇಂದ್ರ ಪಾಲ್ಗೊಂಡು ಮಾತನಾಡಿ, ಸದ್ಯದಲ್ಲಿಯೇ ವಿಧಾನ ಸಭಾ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಲಿದ್ದು, ಪಕ್ಷವನ್ನು ಬಲವರ್ಧನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕೆಂದರು.

ಸಭೆಯ ಅಧ್ಯಕ್ಷತೆಯನ್ನು ಸೋಮವಾರಪೇಟೆ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಹೆಚ್.ಬಿ. ರಾಜಪ್ಪ ವಹಿಸಿದ್ದರು. ಸಭೆಯಲ್ಲಿ ಶಾಂತಳ್ಳಿ ಗ್ರಾ.ಪಂ. ಸದಸ್ಯ ರಂಜಿತ್, ಪ್ರಮುಖರಾದ ಹೆಚ್.ಎ. ನಾಗರಾಜು, ಮಂಜುನಾಥ್, ರಾಜಣ್ಣ, ಶಫಿ, ಹರೀಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಈ ಸಂದರ್ಭ ವಲಯ ಸಮಿತಿಯ ಅಧ್ಯಕ್ಷರಾಗಿ ಹೆಚ್.ಜೆ. ಪ್ರವೀಣ್, ಉಪಾಧ್ಯಕ್ಷರಾಗಿ ಲೋಕೇಶ್, ಕಾರ್ಯದರ್ಶಿಯಾಗಿ ಟಿ.ಜೆ. ಸಂತೋಷ್ ಕುಮಾರ್, ಖಜಾಂಚಿಯಾಗಿ ಟಿ.ಬಿ. ದರ್ಶನ್ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಸದಸ್ಯರಾಗಿ ರಾಜಣ್ಣ, ರಂಜಿತ್, ನವೀನ್, ತಿಮ್ಮಯ್ಯ, ಪ್ರಜ್ವಲ್, ನಿಂಗರಾಜು, ರಾಕೇಶ್, ಹೆಚ್. ರಾಜು ಆಯ್ಕೆಯಾದರು.