ಅನಿಲ್ ಎಚ್.ಟಿ.
ಮಡಿಕೇರಿ, ಫೆ. ೫: ರಾಜಾಸೀಟ್ ನಲ್ಲಿ ಕಂಗೊಳಿಸುತ್ತಿರುವ ಪುಪ್ಪರಾಣಿಯರ ವೈಭವಕ್ಕೆ ನಿತ್ಯವೂ ಸಾವಿರಾರು ಜನ ಮನಸೋತಿದ್ದು ಅಂದಾಜು ೨.೫೦ ಟನ್ ಪ್ರಮಾಣದ ೪.೫೦ ಲಕ್ಷ ಹೂಗಳು ಈ ಬಾರಿಯ ಪುಷ್ಪ್ಪ ಪ್ರದರ್ಶನಕ್ಕೆ ಮೆರುಗು ನೀಡಿವೆ.
ವಾರ್ಷಿಕ ಪುಷ್ಪ ಪ್ರದರ್ಶನದ ಪ್ರಾರಂಭಿಕ ಶುಕ್ರವಾರದಂದು ೫ ಸಾವಿರ ವೀಕ್ಷಕರು. ಶನಿವಾರ ೧೫ ಸಾವಿರ ಜನರು, ಭಾನುವಾರ ೨೨ ಸಾವಿರ ಮಂದಿ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ.
ಅಂದಾಜು ರೂ. ೨೦ ಲಕ್ಷ ವೆಚ್ಚದಲ್ಲಿ ಆಯೋಜಿತ ಈ ವರ್ಷದ ಫಲಪುಷ್ಪ ಪ್ರದರ್ಶನ ಭರ್ಜರಿ ಯಶಸ್ಸು ಕಂಡಿದ್ದು ಪ್ರವೇಶ ಶುಲ್ಕ ಮತ್ತು ಗಾಂಧಿ ಮೈದಾನದಲ್ಲಿರುವ ೬೦ ಮಳಿಗೆಗಳ ಬಾಡಿಗೆಯಿಂದಲೇ ರೂ. ೧೨ ಲಕ್ಷ ಇಲಾಖೆಗೆ ಲಭಿಸುವ ನಿರೀಕ್ಷೆಯಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಚೆಕ್ಕೇರ ಪ್ರಮೋದ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ಅವರ ಮಾರ್ಗದರ್ಶನ, ಸಲಹೆಗಳಂತೆ
(ಮೊದಲ ಪುಟದಿಂದ) ಈ ಬಾರಿ ವಿಭಿನ್ನವಾಗಿ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿ ಸಿದ್ದೆವು. ಹಿಂದೆAದಿಗಿAತಲೂ ಈ ಬಾರಿ ಫಲಪುಷ್ಪ ಪ್ರದರ್ಶನ ಆಕರ್ಷಣೀಯವಾಗಿದೆ ಎಂಬ ಮೆಚ್ಚುಗೆಯ ಮಾತುಗಳು ಎಲ್ಲೆಡೆ ಕೇಳಿಬರುತ್ತಿರುವುದು ನಮ್ಮೆಲ್ಲರ ಶ್ರಮ ಸಾರ್ಥಕಗೊಳಿಸಿದೆ ಎಂದು ಸಿ. ಪ್ರಮೋದ್ ಹೇಳಿದರು.
ಈ ಬಾರಿಯ ಪ್ರಧಾನ ಆಕರ್ಷಣೆಯಾಗಿರುವ ನಾಲ್ಕು ನಾಡು ಅರಮನೆಗೆ ಅಂದಾಜು ೩.೦೭ ಲಕ್ಷ ಗುಲಾಬಿ ಹೂಗಳನ್ನು ಬಳಸಲಾಗಿದೆ. ಕಳೆದ ಫಲಪುಷ್ಪ ಪ್ರದರ್ಶನದಲ್ಲಿ ಐನ್‌ಮನೆಯನ್ನು ಪುಷ್ಪÀ್ಪಗಳಿಂದಲೇ ರೂಪಿಸಿದ್ದ ಮೈಸೂರಿನ ಜೆ. ಉಮಾಶಂಕರ್ ಈ ವರ್ಷ ೩೯ ಅಡಿ ಅಗಲ, ೨೨ ಅಡಿ ಉದ್ದ ಮತ್ತು ೨೮ ಅಡಿ ಎತ್ತರದ ನಾಲ್ಕು ನಾಡು ಅರಮನೆಯ ಕಲಾಕೃತಿಯನ್ನು ಹೂಗಳಿಂದ ರೂಪಿಸಿ ಗಮನಸೆಳೆದಿ ದ್ದಾರೆ. ರಾಜಾಸೀಟ್‌ನ ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು ೨.೫೦ ಟನ್ ಪ್ರಮಾಣದ ೪.೦೫ ಲಕ್ಷ ಹೂಗಳನ್ನು ಬಳಸಲಾಗಿದ್ದು, ಈ ಪೈಕಿ ಗುಲಾಬಿ ಮತ್ತು ಕ್ರಿಸೆಂಡಮ್ ಹೂಗಳೇ ಪ್ರಮುಖವಾಗಿದೆ. ಮಡಿಕೇರಿಯ ಹವಾಗುಣಕ್ಕೆ ತಕ್ಕಂಥ ಹೂವುಗಳನ್ನೇ ಹೆಚ್ಚು ಬಳಸಲಾಗಿದ್ದು, ೧೦ ದಿನಗಳ ಕಾಲ ರಾಜಾಸೀಟ್ ನಲ್ಲಿ ೫೦ ಮಂದಿ ನುರಿತ ಸಿಬ್ಬಂದಿಗಳು ಹೂಜೋಡಣೆ ಯಲ್ಲಿ ಸಕ್ರೀಯರಾಗಿ ತೊಡಗಿಸಿ ಕೊಂಡು ಫಲಪುಷ್ಪ ಪ್ರದರ್ಶನದ ಸೌಂದರ್ಯಕ್ಕೆ ಕಾರಣರಾಗಿದ್ದಾರೆ ಎಂದು ಉಮಾಶಂಕರ್ ತಿಳಿಸಿದರು.
ರಾಜಾಸೀಟ್ ಪುಷ್ಪ ಪ್ರದರ್ಶನಕ್ಕೆ ಹೂವುಗಳನ್ನು ನೆಲಮಂಗಲದ ಪುಷೆÇ್ಪÃದ್ಯಾನದಿಂದ ಪ್ರದಶ೯ನಕ್ಕೆ ೧ ದಿನ ಇರುವಾಗ ಕಿತ್ತು ತಂದು ಜೋಡಿಸ ಲಾಗಿದೆ. ಬೆಂಗಳೂರು, ಮೈಸೂರು, ಊಟಿಯಿಂದಲೂ ಕೆಲವು ವಿಧಧ ಹೂಗಳನ್ನು ತರಿಸಿಕೊಳ್ಳಲಾಗಿದೆ. ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ಒಟ್ಟು ಪ್ರದರ್ಶನವನ್ನು ಪುಷ್ಪಾಲಂಕಾರ ದಿಂದ ರೂಪಿಸಲಾಗಿದೆ ಎಂದೂ ಉಮಾಶಂಕರ್ ಮಾಹಿತಿ ನೀಡಿದರು.
ಗಮನ ಸೆಳೆಯುತ್ತಿರುವ ಕಾಫಿ ಮಗ್‌ಗೆ ೪ ಸಾವಿರ ಕ್ರಿಸೆಂಡಮ್, ಸಿಂಡ್ರೆಲ್ಲಾಕ್ಕೆ ೪೫೦೦ ಗ್ಲೆಡಿಯಾ ಹೂಗಳು, ಜೇನುದುಂಬಿ, ವಿಶ್ವಕಪ್, ಚಿಟ್ಟೆ, ಹೂವಿನ ಸೆಲ್ಫಿ ಬಾಕ್ಸ್, ಹೀಗೆ ೧೨ ರೀತಿಯ ವೈವಿಧ್ಯಮಯ ಪುಷ್ಪ ಕಲಾಕೃತಿಗಳನ್ನೂ ಈ ಬಾರಿ ರೂಪಿಸಲಾಗಿದೆ. ಕೋಲ್ಕೋತ್ತಾ ಮೂಲದ ನುರಿತ ಸಿಬ್ಬಂದಿಗಳು ರಾಜಾಸೀಟ್‌ನ ಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆಯುತ್ತಿರುವ ಹೂವು ಅಲಂಕಾರದ ಮುಖ್ಯ ರುವಾರಿಗಳು. ಪಶ್ಚಿಮಬಂಗಾಳದ ಪುಷ್ಪಜೋಡಣೆ ಕಲಾವಿದರಿಂದಲೇ ರಾಜಾಸೀಟ್‌ನ ಪುಷ್ಪ ಪ್ರದಶನದಲ್ಲಿ ಹೂವುಗಳ ವಿನ್ಯಾಸ ರೂಪಿಸಲಾಗಿದೆ ಎಂದೂ ಉಮಾ ಶಂಕರ್ ತಿಳಿಸಿದರು. ದೊಡ್ಡ ಮೆಣಸಿನ ಕಾಯಿಯಿಂದ ರೂಪು ಗೊಂಡ ಕಲಾಕೃತಿಗೆ ಎಷ್ಟು ಮೆಣಸಿನಕಾಯಿ ಬಳಕೆಯಾಗಿದೆ ಗೊತ್ತೆ? ೮೨ ಕೆಜಿ ದೊಡ್ಡ ಮೆಣಸಿನಕಾಯಿಗಳನ್ನು ಬಳಸಿ ಇಲ್ಲಿನ ಕಲಾಕೃತಿ ತಯಾರಿಸಲಾಗಿದೆ.!!
ಮೈಸೂರು ಅರಮನೆ, ಕೆ.ಆರ್.ಎಸ್, ಶಿವಮೊಗ್ಗ, ಚಿಕ್ಕಬಳ್ಳಾಪುರ, ಮಂಗಳೂರು, ಮಂಡ್ಯ, ಬೆಂಗಳೂರು ಅರಮನೆ, ಲಾಲ್ ಭಾಗ್‌ನಲ್ಲಿ ಆಯೋಜಿತ ಪುಷ್ಪ ಪ್ರದರ್ಶನಕ್ಕೂ ಉಮಾಶಂಕರ್ ತಂಡದ ಕಲಾಸ್ಪರ್ಷವಿದೆ.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಇದೇ ಮೊದಲ ಬಾರಿಗೆ ಮತದಾನದ ಮಹತ್ವ ಸಾರುವ ಮತಕೇಂದ್ರವನ್ನು ಪುಷ್ಪಗಳಿಂದಲೇ ರೂಪಿಸಿದ್ದೇವೆ. ಕರ್ನಾಟಕದ ಭೂಪಟ ಕೂಡ ಮತಕೇಂದ್ರದ ಪಕ್ಕದಲ್ಲಿಯೇ ಇದೆ. ಹೀಗಾಗಿ ಇದು ಕೂಡ ನಾಲ್ಕು ನಾಡು ಅರಮನೆಯಂತೆ ಈ ಬಾರಿ ಹೆಚ್ಚು ಗಮನ ಸೆಳೆಯುತ್ತಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ಪ್ರಮೋದ್ ತಿಳಿಸಿದರು. ಕರ್ನಾಟಕ ದಲ್ಲಿಯೇ ಮೊದಲ ಬಾರಿಗೆ ಮಡಿಕೇರಿ ಯಲ್ಲಿ ಮತದಾನ ಜಾಗೃತಿಯ ಪುಷ್ಪ ಸಂದೇಶ ರವಾನೆಯಾಗಿದೆ!
ಈ ವರ್ಷದ ಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಇಲಾಖೆ ಕಳೆದ ವರ್ಷದ ಸೆಪ್ಟೆಂಬರ್ ೩ ರಿಂದಲೇ ಸಿದ್ಧತೆ ಪ್ರಾರಂಭಿಸಿತ್ತು. ಕೈಲ್ ಮುಹೂರ್ತ ಕಳೆದಂತೆ ರಾಜಾಸೀಟ್ ನಲ್ಲಿ ಪುಷ್ಪಗಳ ಮರುನಾಟೀಕರಣ, ಹೊಸ ಸಸಿಗಳ ನೆಡುವಿಕೆ ಇತ್ಯಾದಿ ಕಾರ್ಯಗಳು ಪ್ರಾರಂಭವಾಗಿದ್ದವು. ಸುಮಾರು ೫ ತಿಂಗಳ ಸಿಬ್ಬಂದಿಗಳ ಪರಿಶ್ರಮದ ಬಳಿಕ ಇದೀಗ ಅತ್ಯಂತ ಆಕರ್ಷಕವಾದ ಪುಷ್ಪಪ್ರದರ್ಶನ ಸಾವಿರಾರು ಸಂದರ್ಶಕರ ನೋಟಕ್ಕೆ ನಿಲುಕುವಂತಾಗಿದೆ.