ಶ್ರೀಮಂಗಲ, ಫೆ. ೩: ಸ್ಮಾರ್ಟ್ ಬ್ರೆöÊನ್ಸ್ ಅಬಾಕಸ್ ಆಶ್ರಯದಲ್ಲಿ ಕುಶಾಲನಗರ ಎಪಿಎಂಸಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ಮಾರ್ಟ್ ಬ್ರೆöÊನ್ಸ್ ಅಬಾಕಸ್ ಸ್ಪರ್ಧೆಯಲ್ಲಿ ವೀರಾಜಪೇಟೆ ರೋಟರಿ ಶಾಲೆಯ ವಿದ್ಯಾರ್ಥಿಗಳಾದ ಮಹಮ್ಮದ್ ಹರ್ಷ (ಪ್ರಥಮ), ದಿಗಂತ್ ಪಿ.ಎಸ್., ಯದುನಂದನ್, ಜಿತನ್ ಎಂ.ಪಿ. (ದ್ವಿತೀಯ) ಸ್ಥಾನ ಪಡೆದರು. ಕ್ಯಾಲಗ್ರಫಿಯಲ್ಲಿ ಚಿರಂತ್ ಎನ್.ಪಿ. ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳಿಗೆ ವೀರಾಜಪೇಟೆಯ ಇರ್ಫಾನ್ ತರಬೇತಿ ನೀಡಿದ್ದರು.
ಪ್ರಶಸ್ತಿ ಪಡೆದ ವಿದ್ಯಾರ್ಥಿಗಳೊಂದಿಗೆ ಶಾಲೆಯ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಶಾಲಾ ನಿರ್ದೇಶಕಿ ಕವಿತಾ ಸುಬ್ರಮಣಿ ಇದ್ದಾರೆ.