ಅಧ್ಯಾತ್ಮಿಕ ಪರಂಪರೆಯನ್ನು ಮುಂದುವರಿಸಿದ ಶ್ರೀ ಶ್ರೀ ಶ್ರೀ ಸದ್ಗುರು ಅಪ್ಪಯ್ಯ ಸ್ವಾಮೀಜಿಯವರ ಸುಪುತ್ರ ೧೦೦ ಸಂವತ್ಸರ ಪೂರೈಸಿದ ಶ್ರೀ ಶ್ರೀ ಶ್ರೀ ವಿವೇಕಾನಂದ ಶರಣ ಸ್ವಾಮೀಜಿಯವರ ಪೂರ್ವಕತೆ.
ದಿ. ಶ್ರೀ ಅಪ್ಪಯ್ಯ ಸ್ವಾಮೀಜಿ ಯವರ ಗೃಹಸ್ಥ ಜೀವನ ಜಗನ್ಮಾತೆ ಕಾಳಿಕಾ ದೇವಿಯು ನಿಶ್ಚಯಿಸಿದಂತೆ ಉತ್ತಮ ರೀತಿಯಲ್ಲಿ ನಡೆಯುತ್ತಿತ್ತು. ಆತ್ಮ ಸಾಕ್ಷಾತ್ಕಾರವೇ ನಮಗೆ ಶ್ರೇಯಸ್ಕರವೆಂದು ಜನರಲ್ಲಿ ಧರ್ಮದ ಭಾವನೆ ಯನ್ನು ತುಂಬುತ್ತಿದ್ದರು. ನೂರು ವರ್ಷಗಳ ಹಿಂದಿನ ಕಾಲದಲ್ಲಿ ಜನರ ಜೀವನದಲ್ಲಿ ಉತ್ತಮವಾದ ಬದಲಾವಣೆಯನ್ನು ಈ ಭಾಗದ ಜನರಲ್ಲಿ ತಂದಿದ್ದರು.
ಇನ್ನು ಮುಂದೆಯೂ ಅಧ್ಯಾತ್ಮಿಕ ಪರಂಪರೆಯನ್ನು ತನಗೆ ಸಹಾಯಕ ವಾಗುವಂತೆ ತÀನಗೆ ಒಬ್ಬ ಯೋಗ್ಯ ಪುತ್ರನನ್ನು ನೀಡುವಂತೆ ಅಪ್ಪಯ್ಯ ಸ್ವಾಮಿಯವರು ಜಗನ್ಮಾತೆಯಲ್ಲಿ ಆಗ ಅತ್ಯಂತ ಭಕ್ತಿಯಿಂದ ದಿನನಿತ್ಯ ಪ್ರಾರ್ಥಿಸಿಕೊಳ್ಳುತ್ತಿದ್ದರು. ಜನವರಿ ೧೨.೧೯೨೩ ಶುಕ್ರವಾರ ಜಗತ್ತು ಕಂಡ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಸದ್ಗುರು ಅಪ್ಪಯ್ಯ ಸ್ವಾಮಿಯವರು ಮನೆಯಲ್ಲಿಯೇ ಆಚರಣೆ ಮಾಡುತ್ತಿದ್ದರು. ಅದೇ ದಿನದ ಪೂರ್ವಾಹ್ನ ೧೦ ಗಂಟೆ ೧೫ ನಿಮಿಷಕ್ಕೆ ಶ್ರೀಗಳಿಗೆ ಒಂದು ಗಂಡು ಮಗು ಜನಿಸಿದ ಸುದ್ದಿ ತಿಳಿದು ಸಂತಸಗೊAಡರು. ಮಗು ನೋಡಲು ವಿಶೇಷವಾಗಿದ್ದು ಆ ಮಗುವಿನ ಸೊಂಟ ಪಟ್ಟಿ ಕಟ್ಟಿದಂತೆ ಇತ್ತು ಆ ದಿವ್ಯ ಮಗುವಿನ ಜನನ ವಾಗಿರುವುದನ್ನು ಅರಿತು ಅಪ್ಪಯ್ಯ ಸ್ವಾಮಿಗಳು ಮಗುವಿಗೆ ‘ವಿವೇಕಾನಂದ’ ಎಂಬ ನಾಮಕರಣವನ್ನು ಮಾಡುವುದೆಂದು ಸಂಕಲ್ಪ ಮಾಡಿ ಜೊತೆಗೆ ತಮ್ಮ ಸಮಾಜಕ್ಕೆ ಒಪ್ಪುವ ರೀತಿಯಲ್ಲಿ ‘ಗಣಪತಿ’ ಎಂಬ ನಾಮಕರಣವನ್ನು ಮಾಡಿದರು. ಮುಂದೆ ಮಗು ಬೆಳೆಯುತ್ತಲೆ ಮಾಂಸಾಹಾರವನ್ನು ತಿರಸ್ಕಾರ ಭಾವದಿಂದ ಕಾಣುತ್ತಿತು. ಇದನ್ನು ನೋಡಿ ಶ್ರೀ ಸ್ವಾಮಿಗಳು ಅವರ ಮನೆಯಲ್ಲಿ ಅಂತಹ ಆಹಾರದ ಅಡುಗೆಯನ್ನೇ ನಿಷೇಧ ಮಾಡಿಬಿಟ್ಟರು.
ಶ್ರೀ ಸ್ವಾಮಿಗಳ ಮನೆಗೆ ಯಾವಾಗಲೂ ತುಂಬಾ ಭಕ್ತ ಜನರು ಬರುತ್ತಿದ್ದರು. ಅವರಲ್ಲಿ ಸಸ್ಯಾಹಾರಿಗಳು ಮಾತ್ರ ಪೂಜಾಲಯಕ್ಕೆ ಪ್ರವೇಶಿಸ ಬಹುದಾಗಿತ್ತು. ಪ್ರತಿನಿತ್ಯ ಬೆಳಿಗ್ಗೆ, ಸಂಜೆ ದೇವರ ನಾಮ ಭಜನೆ ಪೂಜಾ ಲಯದಲ್ಲಿ ನಡೆಯುತ್ತಿತ್ತು. ಈ ಮಗುವು ಆನಂದದಿAದ ಆ ಭಜನೆಯನ್ನು ಆಲಿಸುತ್ತಿತ್ತು. ದಿನಗಳು ಉರುಳಿದವು. ಮಗು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಯಸ್ಸಿನಲ್ಲಿ ಅವರ ಚಿಕ್ಕಪ್ಪರೊಬ್ಬರು ಬೆಂಗಳೂರಿAದ ಬರುವಾಗ ಒಂದು ಹಾರ್ಮೋನಿಯಂ ಅನ್ನು ತಂದು ಕೊಟ್ಟರು. ಬಾಲಕನಿಗೆ ಬಹಳ ಸಂತೋಷವಾಯಿತು. ಅವರ ಚಿಕ್ಕಪ್ಪ ಆ ವಾದ್ಯಪೆಟ್ಟಿಗೆಯಲ್ಲಿ ‘‘ರಾಮ ರಾಮ ರಾಮ ಸೀತಾ’’ ಎಂದು ನುಡಿಸಲು ಕಲಿಸಿಕೊಟ್ಟರು, ಬಾಲಕನು ಕುತೂಹಲದಿಂದ ಎಲ್ಲ ಭಜನೆಗಳಿಗು ಹಾರ್ಮೋನಿಯಂ ನುಡಿಸುವ ಅಭ್ಯಾಸವನ್ನು ಮಾಡಿದನು, ಅದರಿಂದ ನಿತ್ಯ ದೇವರ ಭಜನೆ ಇನ್ನಷ್ಟು ಭಕ್ತಿಯಿಂದ ಹುಮ್ಮಸ್ಸಿನಿಂದ ನಡೆಯುವಂತಾಯಿತು. ೧೯೩೪ ಬಾಲಕನಿಗೆ ೧೧ವರ್ಷ ಆಗ ಶ್ರೀ ಸ್ವಾಮಿಗಳು ತಮ್ಮ ಕುಟುಂಬವನ್ನೆಲ್ಲ ಮಡಿಕೇರಿಯಲ್ಲಿ ವಾಸಿಸಲು ಕರೆದುಕೊಂಡು ಹೋದರು, ಅಲ್ಲಿ ಆತನ ಅಕ್ಕ ಸೀತಮ್ಮನಿಗೆಂದು ಸಂಗೀತ ಪಾಠವನ್ನು ಕಲಿಯಲು ಏರ್ಪಡಿಸಿದ್ದರು. ಅವರ ಜೊತೆ ಸ್ವಲ್ಪ ಮಟ್ಟಿಗೆ ಸರಿಗಮ ನುಡಿಸಲು ಅಭ್ಯಾಸ ಮಾಡಿಕೊಂಡು ಆನಂತರದ ದಿನಗಳಲ್ಲಿ ಮಡಿಕೇರಿ ವೇದಾಂತ ಸಂಘ, ಕಾವೇರಿ ಆಶ್ರಮ. ಶ್ರೀ ಕೈಲಾಸ ಆಶ್ರಮ. ಶ್ರೀ ರಾಜರಾಜೇಶ್ವರಿ ವಿದ್ಯಾ ಶಾಲೆಗಳಲ್ಲಿ ಸತ್ಸಂಗ ಕೂಟಗಳಲ್ಲಿ ಭಜನೆಯೊಂದಿಗೆ ಹಾರ್ಮೋನಿಯಂ ವಾದ್ಯ ನುಡಿಸುತ್ತಾ ಭಕ್ತಿಯನ್ನು ತುಂಬುತ್ತಾ ಭಕ್ತ ಜನರ ಮೆಚ್ಚುಗೆಯನ್ನು ಪಡೆದಿದ್ದರು.
ಬಾಲಕ ಗಣಪತಿ ಐದನೇ ತರಗತಿವರೆಗೆ ಕಾಕೋಟು ಪರಂಬು ಶಾಲೆಯಲ್ಲಿ ಓದಿ ೧೯೩೪ರಲ್ಲಿ ಮಡಿಕೇರಿ ಸೆಂಟ್ರಲ್ ಹೈಸ್ಕೂಲ್ ನಲ್ಲಿ ಓದು ಮುಂದುವರಿಸಿದರು. ಸುಮಾರು ೧೯೩೩ನೇ ಇಸವಿಯಲ್ಲಿ ಶ್ರೀ ಸ್ವಾಮಿಗಳು ‘ಯೋಗಾಸನ' ಎಂಬ ಬಿ.ಕೆ.ಎಸ್. ಅಯ್ಯಂಗಾರ್ ಅವರು ಬರೆದಿದ್ದ ಒಂದು ಪುಸ್ತಕವನ್ನು ಮನೆಗೆ ತಂದಿದ್ದರು. ಈ ಬಾಲಕ ಪುಸ್ತಕವನ್ನು ಅತ್ಯಂತ ಕುತೂಹಲದಿಂದ ಓದುತ್ತಾ ಅದರಲ್ಲಿ ಬರೆದಿರುವ ಚಿತ್ರಗಳನ್ನು ನೋಡಿಕೊಂಡು ೧೬ ಯೋಗಾಸನಗಳನ್ನು, ಪ್ರಾಣಾಯಾಮವನ್ನು ಅಭ್ಯಾಸ ಮಾಡಿಕೊಂಡರು. ಅದರಲ್ಲಿ ಮಯೂರಾಸನ ಅಭ್ಯಾಸ ಮಾಡಲು ಸ್ವಲ್ಪ ತೊಡಕಾಯಿತು. ಅದನ್ನು ಬಹಳ ಪ್ರಯಾಸಪಟ್ಟು ಕರಗತ ಮಾಡಿಕೊಂಡರು. ಮನೆಗೆ ಬಂದ ನೆಂಟರುಗಳಿಗೆಲ್ಲ ಮಾಡಿ ತೋರಿಸಿ ಹೆಮ್ಮೆಪಡುತ್ತಿದ್ದರು.
೧೦ನೇ ತರಗತಿಯಲ್ಲಿ ಓದುತ್ತಿದ್ದಾಗ ಮುಖ್ಯೋಪಾಧ್ಯಾಯರಾದ ಪಿ. ಸಿ. ಉತ್ತಯ್ಯ ಅವರು ತರಗತಿಯಲ್ಲಿ ಪಾಠ ಮಾಡುತ್ತಾ ಇರುವಾಗ "ಉoಜ" ಎಂಬ ಪದ ಬಂತು. ಅದರ ಅರ್ಥವೇನೆಂದು ಕೇಳಲು ಇಡೀ ತರಗತಿಯನ್ನು ಅವಲೋಕಿಸಿ, ಈ ಬಾಲಕನಿಗೆ ಕೈ ತೋರಿಸಿ ಪ್ರಶ್ನಿಸಿದರು. ವೇದಾಂತ ಸಂಘದಲ್ಲಿ ಅದರ ಕಾರ್ಯದರ್ಶಿಯಾಗಿದ್ದ ಗುಡ್ಡಂಡ ಸುಬ್ಬಯ್ಯ ನವರು ಅವರಿಗೆ ಚಿಕ್ಕ ಚಿಕ್ಕ ಅಧ್ಯಾತ್ಮಿಕ ಪುಸ್ತಕಗಳನ್ನು ಓದುವುದಕ್ಕೆ ಕೊಡುತ್ತಿದ್ದರು ಹಾಗಾಗಿ ಆತನಿಗೆ "ಉoಜ" ಎಂದರೆ omಟಿiಠಿಡಿeseಟಿಣ. ಔmಟಿiಠಿoಣeಟಿಣ omಟಿisಛಿieಟಿಣ. ಸರ್ವ ವ್ಯಾಪಕ. ಸರ್ವಶಕ್ತ. ಸರ್ವಜ್ಞ. ಎಂಬುದಾಗಿ ಗೊತ್ತಿದ್ದು ಅತಿ ವಿನಯದಿಂದ ಹೇಳದೆ ಎರಡು ನಿಮಿಷ ನಿಂತೇ ಇದ್ದರು. ಆಮೇಲೆ ಮುಖ್ಯೋಪಾಧ್ಯಾಯರಿಗೆ ಬೇಸರ ವಾಗಿರಬೇಕು ಕೂರಿಸಿಬಿಟ್ಟರು. ಅವರು ಈ ಘಟನೆಯಿಂದಾಗಿ ಮುಂದಕ್ಕೆ ಎಲ್ಲ ಕಾಲದಲ್ಲೂ ಪಶ್ಚತ್ತಾಪ ಪಡುವಂತಾ ಯಿತು. ಗೊತ್ತಿರುವ ವಿಷಯವನ್ನು ಸಮಯೋಚಿತವಾಗಿ ತಿಳಿಯಪಡಿಸು ವುದು ಉತ್ತಮ ಎಂಬುವುದರ ಅರಿವಾಯಿತು. ಎಲ್ಲರಲ್ಲೂ ಈ ಸೋಲನ್ನು ಮುಖ್ಯವಾಗಿ ವಿದ್ಯಾರ್ಥಿ ಗಳಲ್ಲಿ ಹೇಳಿಕೊಳ್ಳುತ್ತಿದ್ದರು. "ವಿದ್ಯಾ ದದಾತಿ ವಿನಯಂ" ಈ ಸುಭಾಷಿತವು ತನಗೆ ತುಂಬಾ ಇಷ್ಟವಾಗಿದ್ದರಿಂದ ಅನಂತರ ತನ್ನ ಗುರುಗಳ ಹೆಸರಿನಲ್ಲಿ ಕೂಡಿಗೆಯಲ್ಲಿ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯನ್ನು ತೆರೆದಾಗ ಆ ಶಾಲೆಯ ಧ್ಯೇಯ ವಾಕ್ಯವಾಗಿ ಆ ಪದಗುಚ್ಛವನ್ನೇ ಆರಿಸಿಕೊಂಡರು. ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಹೋಗಿದ್ದಾಗ ಬಸವನಗುಡಿಯಲ್ಲಿ ರುವ ಶ್ರೀ ರಾಮಕೃಷ್ಣಾಶ್ರಮಕ್ಕೆ ಪದೇ-ಪದೇ ಭೇಟಿ ಕೊಡುತ್ತಿದ್ದರು. ಅಲ್ಲಿನ ಅಧ್ಯಕ್ಷರಾದ ತ್ಯಾಗಿಶಾನಂದ ಸ್ವಾಮಿಗಳು ತುಂಬಾ ಪ್ರೀತಿಯನ್ನು ತೋರಿಸುತ್ತಾ ಮಾರ್ಗದರ್ಶನ ಮಾಡುತ್ತಿದ್ದರು. ಸ್ವಲ್ಪ ಸಮಯ ಶ್ರೀ ಆಶ್ರಮದಲ್ಲಿ ಉಳಿದುಕೊಂಡು ಕಾಲೇಜಿಗೆ ಹೋಗುತ್ತಿದ್ದರು. ಬೇಸಿಗೆ ಕಾಲದಲ್ಲಿ ಬೇಸಿಗೆ ಶಿಬಿರ ಅವರಿಗೆ ತುಂಬಾ ಆಕರ್ಷಣೀಯವಾಗಿತ್ತು. ಸೇಂಟ್ ಜೋಸೆಫ್ ಕಾಲೇಜಿ ನಲ್ಲಿ ಬಿ.ಎ. ಓದು ಮುಗಿದ ನಂತರ ಶ್ರೀ ರಾಮಕೃಷ್ಣ ಆಶ್ರಮದಲ್ಲೇ ಇದ್ದು ಬಿಟ್ಟರು. ಅಧ್ಯಾತ್ಮಿಕ ಸಾಧನಾಧ್ಯಯನಗಳಲ್ಲಿ ತೊಡಗಿಕೊಂಡು ಶ್ರೀ ತ್ಯಾಗಿಶಾನಂದ ಸ್ವಾಮಿಗಳ ಪ್ರೀತಿಗೆ ಪಾತ್ರರಾಗಿದ್ದುಕೊಂಡು ಅನಂದದಿAದ ದಿನ ಕಳೆಯುತ್ತಿದ್ದರು.
ಶ್ರೀ ಕಾವೇರಿ ಆಶ್ರಮದ ಸನಿಹದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಆಧ್ಯಾಪಕ ವೃತ್ತಿಯೊಂದು ಖಾಲಿಯಾಗಿದ್ದು ಅಲ್ಲಿ ಒಂದು ವರ್ಷ ಆಧ್ಯಾಪಕ ವೃತ್ತಿಯನ್ನು ಮಾಡಿದರು. ಸ್ವಲ್ಪ ಸಮಯದ ನಂತರ ಕೂಡಿಗೆ ಶ್ರೀ ಕೃಷ್ಣ ಆಶ್ರಮದ ಪಕ್ಕದಲ್ಲಿರುವ ಒಂದು ಕಾಫಿ ಉದ್ಯಮದ ಶಾಖೆಯಲ್ಲಿ ೧೫ ವರ್ಷ ಕಾರ್ಯನಿರ್ವಹಿಸಿದರು. ಆ ಸಮಯದಲ್ಲಿ ಮಿಲಿಟರಿ ಅಧಿಕಾರಿ ವರ್ಗಕ್ಕೆ ಕರೆ ಬಂತೆAದು ಅವರು ಅದಕ್ಕೆ ಪ್ರಯತ್ನವನ್ನು ಮಾಡಿದರು. ಮಿಲಿಟರಿ ೨ನೇ ಸಂದರ್ಶನಕ್ಕೆ ಕಾಲು ನೋವಿನಿಂದ ಹೋಗಲಿಕ್ಕಾಗಲಿಲ್ಲ ಆ ನಡುವೆ ಮಧ್ಯೆ ಸಬ್ ಇನ್ಸಪೆಕ್ಟರ್ ಹುದ್ದೆಗೆ ಸಂದರ್ಶನ ಕರೆ ಬಂತು. ಶ್ರೀ ಗುರುಗಳಿಗೆ ವಿಷಯ ತಿಳಿಸಿದಾಗ ಅವರು ನಸುನಗುತ್ತಾ... ‘‘ನಾವು ಎಲ್ಲರಲ್ಲೂ ದೇವರನ್ನು ಅಥವಾ ಒಳ್ಳೆಯದನ್ನು ಯೋಚನೆ ಮಾಡಬೇಕಾದವರು. ಕ್ರಿಮಿನಲ್ ಪ್ರಕರಣಗಳ, ಅಪರಾಧಿ ಕ್ರಿಯೆಗಳ ತನಿಖೆಯಲ್ಲಿ ತೊಡಗಿಸಿಕೊಳ್ಳುವುದು ಬೇಡ ನಿನ್ನ ಕಾರ್ಯಕ್ಷೇತ್ರ ಅಧ್ಯಾತ್ಮಿಕವಾದುದಾಗಿರಲಿ’’ ಎಂದು ಎ. ಸಿ. ಯಾಗಿದ್ದ ಮಂಡೆಪAಡ ಮಂದಣ್ಣ ತನಗೆ ಹೇಳುತ್ತಿದ್ದುದ್ದನ್ನು ಜ್ಞಾಪಿಸಿಕೊಂಡು ಅವರು ಆ ಸಂದರ್ಶನಕ್ಕೆ ಹೋಗಲೇ ಇಲ್ಲ. ಈ ಸಮಯದಲ್ಲಿ ಅವರ ಮನಸ್ಸು ಅಂತರ್ಮುಖಿಯಾಗಿ ಏನನ್ನೋ ಹುಡುಕುತ್ತಿತ್ತು. ಶ್ರೀ ಕಾವೇರಿ ಆಶ್ರಮದಲ್ಲಿ ಪತಂಜಲಿ ಯೋಗ ಸೂತ್ರದಲ್ಲಿ ಹೇಳಿರುವಂತೆ ಧಾರಣ. ಧ್ಯಾನ. ಸಮಾಧಿ ಕೊನೆಗೆ ನಿರ್ವಿಕಲ್ಪ ಸಮಾಧಿಗಳನ್ನು ಸ್ವಾನುಭವದಿಂದ ತಿಳಿದವರು ಮೂರ್ನಾಲ್ಕು ಜನ ಇದ್ದಾರೆಂದು ತಿಳಿದು ಶ್ರೀ ಕಾವೇರಿ ಆಶ್ರಮದಲ್ಲೇ ಇದ್ದು, ಸಾಧನೆಗಳನ್ನು ಮುಂದುವರಿಸುವುದಾಗಿ ನಿರ್ಧಾರ ಮಾಡಿದರು.
೧೯೬೪ರಲ್ಲಿ ಬೆಂಗಳೂರಿನ ಶ್ರೀ ಕೈಲಾಸ ಆಶ್ರಮದ ಮಠಾಧಿಪತಿಯಾದ ಶ್ರೀ ಶ್ರೀ ತಿರುಚಿ ಮಹಾಸ್ವಾಮಿಗಳು ಶ್ರೀ ವಿಶ್ವ ಮಾತಾಜಿ ಅವರ ಕರೆಯ ಮೇರೆಗೆ ಶ್ರೀ ಕಾವೇರಿ ಆಶ್ರಮಕ್ಕೆ ಬಂದಿದ್ದರು. ಕೂಡಿಗೆಯಲ್ಲಿರುವ ಕೃಷ್ಣಾಶ್ರಮಕ್ಕೂ ಭೇಟಿ ನೀಡಿದರು. ಗಣಪತಿ ಅವರು ಆವಾಗ ಅಲ್ಲಿ ವಾಸ್ತವ್ಯ ಹೂಡಿದ್ದರು. ಅವರನ್ನು ನೋಡಿ ಶ್ರೀ ತಿರುಚ್ಚಿಸ್ವಾಮಿಗಳು ಈ ರೀತಿ ಹೇಳಿದರು ‘‘ಮನುಷ್ಯನಿಗೆ ಅಜ್ಞಾನದಿಂದ ಮಲವಿಕ್ಷೇಪಾ ವರಣಗಳಿಂದ ಜೀವಾತ್ಮನು ಮುಚ್ಚಲ್ಪಟ್ಟಿರುತ್ತಾನೆ. ಮಲವನ್ನು ಕರ್ಮ ಯೋಗದಿಂದಲೂ ವಿಕ್ಷೇಪವನ್ನು ಉಪಾಸನೆಯಿಂದಲೂ ಮಡಿಕೆಯಲ್ಲಿ ಮುಚ್ಚಿರುವ ದೀಪದಂತೆ ಇರುವ ದಿವ್ಯಾತ್ಮನನ್ನು ದರ್ಶನ ಮಾಡಬೇಕಾದರೆ ಗುರುಗಳು ಆ ಮಡಿಕೆಯನ್ನು ಒಡೆಯಬೇಕಾಗುತ್ತದೆ. ಆಗ ಅದರೊಳಗಿನ ದಿವ್ಯ ಜ್ಯೋತಿಯು ಗೋಚರವಾಗುತ್ತದೆ’’ ಎಂಬುದಾಗಿ ಶ್ರೀ ಸ್ವಾಮಿಗಳು ಹೇಳಿದರು. ಮುಂದುವರೆದು ಸ್ವಾಮಿಗಳು ತಾನು ಒಂದು ಶಾಲೆಯನ್ನು ತೆರೆಯುತ್ತಿದ್ದೇನೆ, ಅದನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ನೀನು ನನ್ನ ಜೊತೆಯಲ್ಲಿ ಬಾ. ಮಕ್ಕಳ ಸೇವೆಯೇ ದೇವರ ಸೇವೆ ಅಲ್ಲವೇ ಎಂದು ಹೇಳಿದರು ಅದಕ್ಕೆ ಶ್ರೀ ಗಣಪತಿ ಆಗಲೆಂದು ಒಪ್ಪಿಕೊಂಡರು. ಹಾಗೆಯೇ ೧೯೬೫ ಜೂನ್ ೨೧ಕ್ಕೆ ಕೊಡಗನ್ನು ಬಿಟ್ಟು ಕೈಲಾಸ ಆಶ್ರಮಕ್ಕೆ ತೆರಳಿದರು. ಪ್ರಾಥಮಿಕ ಶಾಲೆಯಾಗಿದ್ದನ್ನು ಪ್ರಯತ್ನ ಪೂರ್ವಕವಾಗಿ, ಪ್ರೌಢಶಾಲೆಯಾಗಿ ಮೇಲೇರಿಸಿದರು. ಅಲ್ಲಿ ೮ ವರ್ಷಗಳ ಸೇವೆಯನ್ನು ಸಲ್ಲಿಸಿ ಶಾಲೆಯನ್ನು ಉತ್ತಮ ರೀತಿಗೆ ತಂದರು, ಇವರು ಶಾಲೆಯಲ್ಲಿ ವಾರಕ್ಕೊಂದು ದಿನ ಶನಿವಾರ ಒಂದು ಗಂಟೆ ಯೋಗ ಶಿಕ್ಷಣವನ್ನೂ, ಸತ್ಸಂಗವನ್ನೂ ನಡೆಸುತ್ತಿ ದ್ದರು. ಕೈಲಾಸಆಶ್ರಮದಲ್ಲಿ ಪ್ರತಿ ಶುಕ್ರವಾರ ಆ ಊರಿನವರು (ಕೆಂಚೇನ ಹಳ್ಳಿ) ಭಜನೆ ಕಾರ್ಯಕ್ರಮಕ್ಕೆ ಬರುತಿದ್ದರು. (ಮುಂದುವರಿಯುವುದು)
-ಶಶಿ ಮಗ್ಗುಲ, ವೀರಾಜಪೇಟೆ