ನಾಪೋಕ್ಲು, ಫೆ. ೩: ಇಲ್ಲಿಗೆ ಸಮೀಪದ ಕಕ್ಕಬ್ಬೆ - ನಾಲಡಿ ಗ್ರಾಮದ ಕಂಬೆಯAಡ ಅಚ್ಚಪ್ಪ ಎಂಬವರ ಪುತ್ರ ಬಿಪಿನ್ ಬಿದ್ದಪ್ಪ (೧೬) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೋಷಕರು ಮೊಬೈಲ್‌ಗೆ ಕರೆನ್ಸಿ ಹಾಕಿಸಿಲ್ಲವೆಂಬ ಕಾರಣಕ್ಕಾಗಿ ಕಳೆದ ನಾಲ್ಕು ದಿನಗಳ ಹಿಂದೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗದೆ ಬಿಪಿನ್ ಸಾವನ್ನಪ್ಪಿದ್ದಾನೆ. ಈತ ನಾಪೋಕ್ಲುವಿನ ಖಾಸಗಿ ಶಾಲೆಯಲ್ಲಿ ೧೦ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಗುರುವಾರ ನಾಲಡಿಯಲ್ಲಿ ಅಂತ್ಯಸAಸ್ಕಾರ ನೆರವೇರಿತು. ಪ್ರಕರಣದ ಬಗ್ಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.