ಸುಂಟಿಕೊಪ್ಪ, ಫೆ. ೪: ಸುಂಟಿಕೊಪ್ಪ ಸ್ವಸ್ಥ ವಿಶೇಷಚೇತನರ ಕೇಂದ್ರದ ಸಿಬಿಆರ್ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಸೇವಾ ಕಾರ್ಯಕರ್ತ ಮುರುಗೇಶ್ ಅವರಿಗೆ ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯಿAದ ಪ್ರಶಸ್ತಿ ಲಭಿಸಿದೆ.
ಜ್ಯೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ (ಜೆಸಿಐ)ನ ಮನೋಬಲ ತಂಡದಿAದ ಒಂದೇ ದಿನದಲ್ಲಿ ಏಕಕಾಲದಲ್ಲಿ ರಾಜ್ಯದಾದ್ಯಂತ ೨೫೩ ಕಡೆ ೨೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಹಿಂದೆ ನಡೆದ ತರಬೇತಿಯಲ್ಲಿ ಗುರಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು, ವ್ಯಕ್ತಿತ್ವ ವಿಕಸನದ ಬಗ್ಗೆ ಹಾಗೂ ಪರೀಕ್ಷೆಯ ತಯಾರಿ ಕುರಿತು ಪ್ರಮಾಣೀಕೃತ ತರಬೇತುದಾರರಿಂದ ತರಬೇತಿಯನ್ನು ನೀಡುವ ಸಂದರ್ಭದಲ್ಲಿ ಸಂಯೋಜಕರಾಗಿ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು.
ಈ ಸೇವೆಯನ್ನು ಗುರುತಿಸಿ ತುಮಕೂರಿನ ಚೇತನ ವಿದ್ಯಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯಿAದ ಮುರುಗೇಶ್ಗೆ ಏಷಿಯಾ ಬುಕ್ ಆಫ್ ರೆಕಾರ್ಡ್ಸ್ನ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.