ಪಾಲಿಬೆಟ್ಟ, ಫೆ. ೩: ಸರ್ವಧರ್ಮ ಸಂಕೇತದ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆ ಗೆ ಪಾಲಿಬೆಟ್ಟದಲ್ಲಿ ಗಣ್ಯರು ಚಾಲನೆ ನೀಡಿದರು.

ಮಸೀದಿಯಲ್ಲಿ ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ಬಾಂಧವರು ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.

ಧಾರ್ಮಿಕ ಪಂಡಿತ ಸಯ್ಯದ್ ಮೆಹರೂಫ್ ಅಲ್ ಜಫ್ರಿ ತಂಗಳ್ ದುಆ ನೇತೃತ್ವದೊಂದಿಗೆ ಪಾಲಿಬೆಟ್ಟ ಜುಮಾ ಮಸೀದಿಯ ಖತಿಬ್ ಅಲಿ ಸಖಾಫಿ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಧಾರ್ಮಿಕ ಪಂಡಿತ ಸಯ್ಯದ್ ಸರುಫುದ್ದೀನ್ ಐಲ್ ಹೈದ್ರೊಸಿ ತಂಗಳ್ ದಿಕ್ರ್ ದುವಾ ಮಜ್ಲೀಸ್ ನೇತೃತ್ವ ವಹಿಸಿದ್ದರು.

ತಾರಿಕಟ್ಟೆ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಂ ಅಲಿ, ಪಾಲಿಬೆಟ್ಟ ಜುಮಾ ಮಸೀದಿ ಕಮಿಟಿ ಉಪಾಧ್ಯಕ್ಷ ಸೈನುದ್ದಿನ್, ಪ್ರಧಾನ ಕಾರ್ಯದರ್ಶಿ ಸಮೀರ್ ಮುನ್ನ, ಕಾರ್ಯದರ್ಶಿ ಎ.ಸಿ ಸಮೀರ್, ಸಹಕಾರ್ಯದರ್ಶಿ ಮುನೀರ್, ಖಜಾಂಚಿ ಮುಸ್ತಫ, ಉರೂಸ್ ಸಮಿತಿಯ ಪ್ರಮುಖರಾದ ಸಿ.ಎಚ್ ಫಯಾಜ್ ಅಹ್ಮದ್, ಖಾದರ್ ಸಮಿತಿಯ ಸದಸ್ಯರುಗಳಾದ ಫಜಲ್, ಮುನೀರ್, ಪೈಸೆಲ್, ಬಸೀರ್, ಎರ್ಮು, ಅಬ್ದುಲ್ ರಝಾಕ್, ಮಾಜಿ ಅಧ್ಯಕ್ಷರುಗಳಾದ ಅಬೂಬಕ್ಕರ್, ಜಬ್ಬಾರ್, ಹ್ಯಾರಿಸ್ ಹಾಜಿ. ಸೇರಿದಂತೆ ಸಮಿತಿಯ ಪ್ರಮುಖರು ಗ್ರಾಮಸ್ಥರು ಪಾಲ್ಗೊಂಡಿದ್ದರು. ಮೂರು ದಿನಗಳ ಕಾಲ ನಡೆಯಲಿರುವ ವಿವಿಧ ಕಾರ್ಯಕ್ರಮಗಳು ಫೆ ೪ ರಂದು ರಾತ್ರಿ ಧಾರ್ಮಿಕ ಪಂಡಿತ ಆಫೀಜ್ ಜುನೈದು ಜೌಹರಿ ಅಲ್ ಅಝರಿ ಪ್ರಧಾನ ಭಾಷಣ ಮಾಡಲಿದ್ದಾರೆ.

ತಾ. ೫ ರಂದು ರಾತ್ರಿ ಅಬ್ದುಲ್ಲ ಸಲೀಂ ವಾಫಿ ಅಂಬಲಕAಡಿ ಅವರಿಂದ ಮತ ಪ್ರವಚನ ಹಾಗೂ ತಾ. ೬ ರಂದು ಸಂಜೆ ೭.೦೦ ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಕನ್ನಡ ಮಠದ ಶ್ರೀ ಚನ್ನಬಸವ ದೇಸೀ ಕೇಂದ್ರ ಸ್ವಾಮಿ, ಪಾಲಿಬೆಟ್ಟ ಲೂರ್ಡ್ಸ್ ಚರ್ಚ್ರ ಫಾ. ಮರಿಯಾ ರಾಜ್ ಜಾರ್ಜ್, ಕಕ್ಕಿಂಜೆ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಕೊಡಗು ಜಿಲ್ಲಾ ಖಾಝಿಗಳಾದ ಶಾದುಲಿ ಪೈಝಿ, ಎಂ.ಎA ಅಬ್ದುಲ್ ಪೈಝಿ ಸೇರಿದಂತೆ ದಾರ್ಮಿಕ ಪಂಡಿತರು, ದರ್ಮಗುರುಗಳು, ಸಮಾಜಸೇವಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ತಾ. ೬ ರಂದು ಸಂಜೆ ೬.೩೦ ಗಂಟೆಯಿAದ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಕಾರ್ಯ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸಮೀರ್ ಮುನ್ನ ತಿಳಿಸಿದ್ದಾರೆ.