ಮಡಿಕೇರಿ, ಫೆ. ೪: ವೀರಾಜಪೇಟೆ ಸನಿಹದ ಅರಮೇರಿ - ಕಳಂಚೇರಿ ಮಠದಲ್ಲಿ ತಾ.೫ರಂದು (ಇಂದು) ೨೦೭ನೇ ಹೊಂಬೆಳಕು - ಮಾಸಿಕ ತತ್ವ ಚಿಂತನಗೋಷ್ಠಿ ಏರ್ಪಡಿಸಲಾಗಿದೆ. ಮಧ್ಯಾಹ್ನ ೩ರಿಂದ ಸಂಜೆ ೫ರವರೆಗೆ ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶಾಂತಮಲ್ಲಿಕಾರ್ಜುನ ಸ್ವಾಮೀಜಿ ವಹಿಸುವರು. ಕೊಡಗು ವೈದ್ಯಕೀಯ ಸಂಸ್ಥೆಯಲ್ಲಿ ಹಿರಿಯ ಶುಶ್ರೂಷಕಿಯಾಗಿರುವ ಮಕ್ಕಂದೂರಿನ ಕುಸುಮ ಉದ್ಘಾಟಿಸುವರು. ನೇತ್ರ ಚಿಕಿತ್ಸಕ ಎಸ್.ಎಂ. ಚೇತನ್ ಉಪನ್ಯಾಸ ನೀಡುವರು.