ಮಡಿಕೇರಿ, ಫೆ. ೨: ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ನೇರ ನೇಮಕಾತಿ ಗೊಳಪಡಿಸಿ ಹಂತಹAತವಾಗಿ ಖಾಯಂಗೊಳಿಸುವAತೆ ಒತ್ತಾಯಿಸಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಸರಕಾರದ ಭರವಸೆ ಹಿನ್ನೆಲೆ ಕೈಬಿಡಲಾಗಿದೆ.
ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರಸಭೆ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೈಬಿಟ್ಟಿದ್ದು, ತಾ. ೩ ರಿಂದ ಕೆಲಸಕ್ಕೆ ಸಿಬ್ಬಂದಿಗಳು ಮರು ಹಾಜರಾಗಲಿದ್ದಾರೆ.
ಸರಕಾರ ಪೌರಕಾರ್ಮಿಕರನ್ನು ನೇರಪಾವತಿಗೊಳಪಡಿಸುವ ಕ್ರಮದ ರೀತಿಯಲ್ಲಿ ವಾಹನ ಚಾಲಕರು, ನೀರು ಗಂಟಿಗಳು, ಡಾಟ ಆಪರೇಟರ್‌ಗಳನ್ನು ನಿಯೋಜಿಸಲು ಕ್ರಮವಹಿಸಬೇಕೆಂದು ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಯುತಿತ್ತು. ಇದರ ಹಿನ್ನೆಲೆ ಸರಕಾರದ ಅಧೀನ ಕಾರ್ಯದರ್ಶಿ ರಾಕೇಶ್ ಸಿಂಗ್, ನಗರಾಭಿವೃದ್ಧಿ ಕಾರ್ಯದರ್ಶಿ ಅಜಯ್ ನಾಗಭೂಷಣ್ ಸಂಘದ ಪ್ರಮುಖರೊಂದಿಗೆ ಬೆಂಗಳೂರಿನಲ್ಲಿ ಚರ್ಚಿಸಿ ಮುಂದಿನ ಬಜೆಟ್‌ನಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಬಜೆಟ್‌ನಲ್ಲಿ ಬೇಡಿಕೆ ಘೋಷಿಸುವುದು, ಖಾತ್ರಿಪಡಿಸುವಂತೆ ‘ನಮ್ಮ ನಡಿಗೆ ಮುಖ್ಯಮಂತ್ರಿ ಮನೆ ಕಡೆಗೆ’ ಎಂಬ ಘೋಷಣೆಯೊಂದಿಗೆ ತಾ. ೧೧ ರಿಂದ ರಾಮನಗರ ಜಿಲ್ಲೆಯಲ್ಲಿ ಕಾಲ್ನಡಿಗೆ ಜಾಥಾ ನಡೆಯಲಿದೆ. ಇದರಲ್ಲಿ ಜಿಲ್ಲೆಯವರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಈರಪ್ಪ ಶೆಟ್ಟಿ ತಿಳಿಸಿದ್ದಾರೆ.