ಕೂಡಿಗೆ, ಫೆ. ೨: ಕೂಡ್ಲೂರು ಕೈಗಾರಿಕಾ ಘಟಕದ ಕೇಂದ್ರದಲ್ಲಿ ಕಾಫಿ ಹೊಟ್ಟು ವ್ಯವಹಾರದಲ್ಲಿ ಸ್ಥಳೀಯ ವರ್ತಕರಿಗೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಕೂಡ್ಲೂರು ಕೈಗಾರಿಕಾ ಪ್ರದೇಶದ ಲಾರಿ ಮಾಲೀಕರ ಸಂಘ ಹಾಗೂ ಕಾಫಿ ಹಸ್ಕ್ ಮರ್ಚೆಂಟ್ಸ್ ಸಂಘದವರು ಎರಡನೇ ದಿನ ಕೂಡ ಪ್ರತಿಭಟನೆಯನ್ನು ಮುಂದುವರಿಸಿದರು.

ಸAಘದ ಅಧ್ಯಕ್ಷ ಕೆ.ಕೆ. ಭೋಗಪ್ಪ ನೇತೃತ್ವದಲ್ಲಿ ಕೈಗಾರಿಕಾ ಪ್ರದೇಶದ ಕಾಫಿ ಘಟಕಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಎ. ಚಿಣ್ಣಪ್ಪ, ಖಜಾಂಚಿ ಎಂ.ಕೆ. ಹನುಮರಾಜು, ಕಾರ್ಯದರ್ಶಿ ಪಿ.ಎ. ಕಾರ್ಯಪ್ಪ, ಪ್ರಮುಖರಾದ ಸುರೇಶ್, ರವಿ, ಎಚ್.ಕೆ. ರಾಘವೇಂದ್ರ, ಹಿರಣ್ಯಕುಮಾರ್, ಸುಶಾಂತ್ ಗೌಡ, ಸಚಿನ್, ದಿಲೀಪ್ ಗೌಡ, ಯುವರಾಜ ಮತ್ತಿತರರು ಇದ್ದರು.