ಮಡಿಕೇರಿ, ಫೆ. ೨: ಮಂಗಳೂರಿನ ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್ ಸಂಘಟನೆಯ ವತಿಯಿಂದ ಜ. ೨೮ ರಂದು ಫೀ.ಮಾ. ಕಾರ್ಯಪ್ಪ ಅವರ ೧೨೪ನೇ ಜನ್ಮ ದಿನಾಚರಣೆ ನಡೆಯಿತು.

ಮಂಗಳೂರಿನ ಕದ್ರಿಯಲ್ಲಿ ಯುದ್ಧ ಸ್ಮಾರಕದಲ್ಲಿ ಕಾರ್ಯಕ್ರಮ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಂಘಟನೆಯ ಸಲಹೆಗಾರ ಸೋಮೆಯಂಡ ಪಿ. ಚಂಗಪ್ಪ, ಬಟ್ಟೀರ ಅಜಿತ್ ಬೋಪಯ್ಯ ಪಾಲ್ಗೊಂಡಿದ್ದರು.

ಕೊಡವ ಸ್ಟೂಡೆಂಟ್ಸ್ ಅಸೋಸಿ ಯೇಷನ್ ಅಧ್ಯಕ್ಷ ಮಂಡೇಪAಡ ನಂಜಪ್ಪ, ಉಪಾಧ್ಯಕ್ಷ ಬಾಚಿನಾಡಂಡ ಸಿಂಪ್ಲ ಗಣಪತಿ, ಕಾರ್ಯದರ್ಶಿ ಕಾಂಗಿರ ಬಿಷನ್ ಬಿದ್ದಯ್ಯ, ಬಾಳೆಯಡ ರಿಶಿಕಾ ತಿಮ್ಮಯ್ಯ, ಚೌಂಡೀರ ಭೀಮಯ್ಯ, ಬದ್ದಂಜೆಟ್ಟಿರ ಸಾನಿಯಾ ದೇಚಮ್ಮ ಮತ್ತಿತರರು ಪಾಲ್ಗೊಂಡಿದ್ದರು. ಮುಂದಿನ ಭಾನುವಾರದಂದು ಸಂಘಟನೆಯಿAದ ಅನಾಥಾಶ್ರಮದ ಮಕ್ಕಳಿಗೆ ಹಣ್ಣು-ಹಂಪಲು ಹಾಗೂ ಅಗತ್ಯ ಸಾಮಗ್ರಿ ನೀಡಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.