ಗೋಣಿಕೊಪ್ಪ ವರದಿ, ಫೆ. ೨: ಕಳತ್ಮಾಡ್ ಲಯನ್ಸ್ ಶಾಲಾ ಮೈದಾನದಲ್ಲಿ ವಿದ್ಯಾಸಂಸ್ಥೆಯ ಕ್ರೀಡಾ ದಿನಾಚರಣೆ ಶನಿವಾರ ನಡೆಯಿತು. ಸಂಸ್ಥೆಯ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳು ಓಟ, ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು. ಅಂರ‍್ರಾಷ್ಟಿçÃಯ ಮಾಜಿ ಹಾಕಿ ಆಟಗಾರ ಮುಕ್ಕಾಟಿರ ಎ. ಬೋಪಣ್ಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಮುಖ್ಯ. ಕ್ರೀಡೆಗೆ ಆಸಕ್ತಿ ತೋರುವುದರಿಂದ ಮತ್ತಷ್ಟು ಬಲಗೊಳ್ಳಬಹುದು. ಭಾರತದ ಸಂವಿಧಾನವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಲಯನ್ಸ್ ಚಾರಿಟೆಬಲ್ ಟ್ರಸ್ಟ್ ಮುಖ್ಯಸ್ಥ ಪಾರುವಂಗಡ ಎನ್. ಪೆಮ್ಮಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಅಮ್ಮಂಡ ಚಿಣ್ಣಪ್ಪ, ಪ್ರಾಂಶುಪಾಲ ಚಿಯಕ್‌ಪೂವಂಡ ಲತಾ ಬೋಪಣ್ಣ, ಮುಖ್ಯ ಶಿಕ್ಷಕಿಯರಾದ ಎ.ಬಿ. ಅಕ್ಕಮ್ಮ, ಪಿ.ಡಿ. ತಂಗಮ್ಮ, ವಿದ್ಯಾರ್ಥಿ ಸಂಘದ ಕ್ರೀಡಾ ನಾಯಕರಾದ ಕೆ. ಭೂಮಿ ಬಿದ್ದಪ್ಪ, ಎಂ.ಕೆ. ಚಿನ್ಮಯ್ ಚಿಣ್ಣಪ್ಪ, ಎ.ಟಿ. ತರುಣ್ ಕರುಂಬಯ್ಯ ಇದ್ದರು.