ಮಡಿಕೇರಿ, ಫೆ. ೨: ಮೈಸೂರಿನ ವಿಜಯನಗರ ೪ನೇ ಹಂತದ ಪೊಂಬೊಳಕ್ ಕೊಡವ ಕೂಟದಿಂದ ಪುತ್ತರಿ ಒತ್ತೊರ್ಮೆ ಕೂಟವು ಇತ್ತೀಚೆಗೆ ಮೈಸೂರಿನ ಕೊಡವ ಸಮಾಜದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಮುಂಡೋಟಿರ ಜಯ ಚಂಗಪ್ಪ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಚೊಟ್ಟಂಡ ಚಂಗಪ್ಪ ಸಂಘದ ವರದಿಯನ್ನು ಓದಿದರು. ಧನ ಸಹಾಯ ಮಾಡಿದ ದಾನಿಯರ ವಿವರವನ್ನು ಕಾರ್ಯದರ್ಶಿ ಗುಡ್ಡಂಡ ರಶ್ಮಿ ತಿಳಿಸಿದರು. ಖರ್ಚು ವೆಚ್ಚದ ವಿವರನ್ನು ಖಜಾಂಚಿ ಕುಲ್ಲಚಂಡ ವಿನುತ ಕೇಸರಿ ಓದಿದರು.
ವೇದಿಕೆಯಲ್ಲಿ ಸಮಿತಿ ಸದಸ್ಯರಾದ ಬೊಪ್ಪಂಡ ಅಪ್ಪಾಜಿ, ಮಲ್ಲೇಂಗಡ ಶರಣು ಸೋಮಯ್ಯ, ಮುಳ್ಳಂಡ ವಿನು, ತೀತರಮಾಡ ದೇವಕಿ, ತೀತಿರ ಬೀನ, ಕ್ರೀಡಾ ಕಾರ್ಯದರ್ಶಿ ಅಡಿಕೇರ ಸಜನ್ ಕಾರ್ಯಪ್ಪ ಹಾಗೂ ಕೊಡವ ಸಮಾಜದ ವಿಜಯನಗರ ೪ನೇ ಹಂತದ ಪ್ರತಿನಿಧಿ ಅಮ್ಮಂಡ ಸೋಮಯ್ಯ ಇವರುಗಳು ಉಪಸ್ಥಿತರಿದ್ದರು.
ತಾತೀರ ಭೀಮಯ್ಯ ವಂದಿಸಿದರು. ಕುಲ್ಲಚಂಡ ಸಹನ ಕೇಸರಿ ನಿರೂಪಿಸಿದರು. ಸದಸ್ಯರಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು.