*ಗೋಣಿಕೊಪ್ಪ, ಫೆ. ೨: ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಕೊಲ್ಲಿಹಾಡಿಯ ನಿವಾಸಿಗಳಿಗೆ ಹಕ್ಕುಪತ್ರವನ್ನು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.

ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ೪೦ ವರ್ಷಗಳಿಂದ ಬೇಡಿಕೆಯಲ್ಲಿದ್ದ ಕೊಲ್ಲಿಹಾಡಿಯ ಕುಟುಂಬಗಳಿಗೆ ಶಾಸಕರು ಸ್ಥಳೀಯರ ಸಮ್ಮುಖದಲ್ಲಿ ಹಕ್ಕುಪತ್ರ ವಿತರಿಸಿದರು.

ಸರ್ಕಾರದ ಸೌಲಭ್ಯಗಳು ಹೆಚ್ಚಿನ ರೀತಿಯಲ್ಲಿ ಸಿಗಲು ಹಕ್ಕುಪತ್ರದ ಅವಶ್ಯಕತೆ ಇದೆ. ಇದನ್ನು ಪೂರೈಸುವಲ್ಲಿ ಸಮರ್ಪಕವಾದ ಕಾರ್ಯ ನಡೆದಿದೆ. ಹಕ್ಕುಪತ್ರವನ್ನು ದುರುಪಯೋಗಪಡಿಸಿಕೊಳ್ಳದೆ ಕೃಷಿ ಇನ್ನಿತರ ಸೌಕರ್ಯಗಳನ್ನು ಬಳಸಿ ಕೊಳ್ಳಲು ಸಾಧ್ಯವಾಗಿಸಿ ಕೊಳ್ಳಬೇಕೆಂದು ಶಾಸಕರು ನುಡಿದರು.

ಗ್ರಾ.ಪಂ. ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಅಧ್ಯಕ್ಷತೆಯಲ್ಲಿ ತಾಲೂಕು ಬಗರ್‌ಹುಕಂ ಜಾಗೃತಿ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಕೃಷಿ ಮೋರ್ಚಾ ಮಾಜಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಮಾಚಂಗಡ ಸುಜಾ, ಪೊನ್ನಪ್ಪಸಂತೆ ಗ್ರಾ.ಪಂ. ಸದಸ್ಯ ಆದೇಂಗಡ ವಿನು ಚಂಗಪ್ಪ, ಪ್ರಮುಖರಾದ ಪ್ರಭುಕುಮಾರ್, ಗುತ್ತಿಗೆದಾರರಾದ ಹರೀಶ್‌ಗೌಡ, ಅಮ್ಮೆಕಂಡ ಸವಿತಾ ತಿಮ್ಮಯ್ಯ, ತೋಟದಪ್ಪ ನಾಯಕ್, ಐಟಿಡಿಪಿ ಅಧಿಕಾರಿ ನವೀನ್, ಗ್ರಾ.ಪಂ. ಸದಸ್ಯರುಗಳು, ಕೊಲ್ಲಿಹಾಡಿ ನಿವಾಸಿಗಳು ಹಾಗೂ ಸ್ಥಳೀಯ ಪ್ರಮುಖರು ಇದ್ದರು.