ವೀರಾಜಪೇಟೆ, ಫೆ. ೧: ವಿದ್ಯಾರ್ಥಿಗಳು ತಮ್ಮ ಜೀವನದ ಭವಿಷ್ಯವನ್ನು ಕ್ರೀಡೆಯಿಂದಲೂ ರೂಪಿಸಿಕೊಳ್ಳುವಂತಾಗಬೇಕು ಎಂದು ಭಾರತದ ಪ್ರತಿಷ್ಟಿತ ಫುಟ್ಬಾಲ್ ಲೀಗ್‌ನಲ್ಲಿ ಅನುಭವ ಹೊಂದಿರುವ ಐಎಸ್‌ಎಲ್ ಆಟಗಾರ ತಮಿಳು ನಾಡಿನ ಧನ್‌ಪಾಲ್ ಗಣೇಶ್ ಕರೆ ನೀಡಿದರು. ವೀರಾಜಪೇಟೆ ನಗರ ದಲ್ಲಿರುವ ಪ್ರಗತಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ೮ ರಿಂದ ೧೩ ವರ್ಷದ ವಿದ್ಯಾರ್ಥಿ ಗಳಿಗೆ ಆಯೋಜಿಸ ಲಾಗಿದ್ದ ಫುಟ್ಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿ, ಅವರು ಮಕ್ಕಳ ಮುಂದಿನ ಭವಿಷ್ಯಕ್ಕೆ ಫುಟ್ಬಾಲ್ ಕ್ರೀಡೆಯು ಸಹಕಾರಿ ಯಾಗಲಿದ್ದು, ಉತ್ತಮ ಕ್ರೀಡಾಪಟುಗಳಾಗಿ ಜಿಲ್ಲೆ, ರಾಜ್ಯ, ನಂತರ ರಾಷ್ಟçಮಟ್ಟದಲ್ಲಿಯು ಭಾಗವಹಿಸುವಂತಾಗಬೇಕೆAದರು. ಪ್ರಗತಿ ಶಾಲಾ ಮುಖ್ಯಸ್ಥರು, ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ೮ ರಿಂದ ೧೩ ವರ್ಷದ ಚಿಕ್ಕ ಮಕ್ಕಳಿಗೆ ಫುಟ್ಬಾಲ್ ಪಂದ್ಯಾಟದ ಬಗ್ಗೆ ಮಾಹಿತಿ ನೀಡುವ ಮೂಲಕ ಕಳೆದ ನಾಲ್ಕು ವಾರಗಳಿಂದಲೂ ಈ ಮೈದಾನದಲ್ಲಿ ವಿದ್ಯಾರ್ಥಿಗಳ ೧೮ ತಂಡಗಳ ಪಂದ್ಯಾಟ ನಡೆಯುತ್ತಿದ್ದು, ನಂತರ ಅಮ್ಮತ್ತಿಯ ಮೈದಾನದಲ್ಲಿ ಅಂತಿಮ ಫುಟ್ಬಾಲ್ ಪಂದ್ಯಾಟ ನಡೆಯಲಿದೆ.
ಕೊಡಗು ಫುಟ್ಬಾಲ್ ಅಸೋಸಿಯೇಶನ್ ಸಹಕಾರ ದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿದ ಮಕ್ಕಳನ್ನು ಉತ್ತಮ ಕ್ರೀಡಾಪಟು ಗಳನ್ನಾಗಿ ಬೆಳೆಸಿ ಪ್ರೋತ್ಸಾಹಿಸ ಲಾಗುವುದು ಎಂದರು.
ಕೊಡಗು ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಜಗದೀಶ್ ಮಂದಪ್ಪ ಮಾತನಾಡಿ, ಮಕ್ಕಳನ್ನು ಉತ್ತಮ ಆಟಗಾರರನ್ನಾಗಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದರು. ಅಸೋಸಿ ಯೇಶನ್ ಕಾರ್ಯದರ್ಶಿ ನಾಗೇಶ್ ಮಾತನಾಡಿ, ಮಕ್ಕಳಿಗೆ ಫುಟ್ಬಾಲ್ ಪಂದ್ಯಾಟಕ್ಕೆ ಪ್ರೋತ್ಸಾಹ ನೀಡಲಾ ಗುತ್ತಿದ್ದು, ಫುಟ್ಬಾಲ್ ಪಂದ್ಯಾಟಕ್ಕೆ ಮೈದಾನದ ಅವಶ್ಯಕತೆ ಇದೆ ಎಂದರು. ಭಾರತ ಫುಟ್ಬಾಲ್ ಆಟಗಾರ ಧನ್ ಪಾಲ್ ಗಣೇಶ್ ಅವರನ್ನು ರಗ್ಬಿ ಆಟ ಗಾರ ಮಾದಂಡ ತಿಮ್ಮಯ್ಯ ಸನ್ಮಾನಿಸಿ ಗೌರವಿಸಿದರು. ವಿದ್ಯಾರ್ಥಿಗಳಾದ ಸೈಮಾ ಸ್ವಾಗತಿಸಿ, ಈಜ್ಬಾ ನಿರೂಪಿಸಿ, ಅಸ್ನಾ ವಂದಿಸಿದರು.