ಮಡಿಕೇರಿ, ಫೆ. ೧: ಮಾಕುಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಬೇರೆಡೆಯಿಂದ ತ್ಯಾಜ್ಯ ತಂದು ಸುರಿಯುತ್ತಿದ್ದ ಪ್ರಕರಣವೊಂದನ್ನು ಮಾಕುಟ್ಟ ವಲಯ ವನ್ಯಜೀವಿ ವಿಭಾಗ ಹಾಗೂ ಅರಣ್ಯ ಇಲಾಖಾ ಸಿಬ್ಬಂದಿಗಳು ಜಂಟಿ ಕಾರ್ಯಾ ಚರಣೆಯಲ್ಲಿ ಪತ್ತೆ ಹಚ್ಚಿದ್ದಾರೆ.

ಮಾಕುಟ್ಟ ವಲಯ ವನ್ಯಜೀವಿ ವಿಭಾಗ ಹಾಗೂ ಅರಣ್ಯ ಇಲಾಖಾ ಸಿಬ್ಬಂದಿಗಳು ಜಂಟಿ ಕಾರ್ಯಾ ಚರಣೆಯಲ್ಲಿ ಪತ್ತೆ ಹಚ್ಚಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರಿನವರಾದ ಪೆಂಚಾಲಯ್ಯ ಹಾಗೂ ಶೀನ ಎಂಬವರು ಬಂಧಿತರಾಗಿದ್ದಾರೆ. ಲಾರಿ ಕೂಡ ಆಂಧ್ರಪ್ರದೇಶದ ನೋಂದಣಿ ಯದ್ದಾಗಿದೆ. ವಿಶೇಷವೆಂದರೆ ಈ ಕಸವನ್ನು ತಂದಿದ್ದು ಕೇರಳ ರಾಜ್ಯದಿಂದ ಎಂಬುದು ತಿಳಿದು ಬಂದಿದೆ.

ಕೇರಳಕ್ಕೆ ಲಾರಿಯಲ್ಲಿ ಸಾಮಗ್ರಿ ತಂದು ಮತ್ತೆ ಹಿಂತಿರುಗುತ್ತಿದ್ದ ಸಂದರ್ಭ ಅಲ್ಲಿಂದ ಇವರು ಕಸವನ್ನು ತಂದಿದ್ದಾರೆ. ೧೫ ಚೀಲಗಳಷ್ಟು ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೂಟುಪೊಳೆ ಯಲ್ಲಿರುವ ಅರಣ್ಯ ಇಲಾಖೆಯ ತಪಾಸಣಾ ಗೇಟ್‌ಗಿಂತ ಅನತಿ ದೂರದಷ್ಟು ಹಿಂಬದಿಯಲ್ಲಿ (ಕೇರಳಕಡೆ) ಇದನ್ನು ಪತ್ತೆ ಹಚ್ಚಲಾಗಿದೆ. ಲಾರಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಬಂಧಿತ ರಾಗಿರುವ

(ಮೊದಲ ಪುಟದಿಂದ) ಪೆಂಚಾಲಯ್ಯ ಹಾಗೂ ಶೀನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ ೨೯ರಂತೆ ಪ್ರಕರಣ ದಾಖಲಿಸಲಾಗಿದೆ. ಕಸವನ್ನು ಕೇರಳದ ಯಾವ ಸ್ಥಳದಿಂದ ತರಲಾಗಿದೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಕಾರ್ಯಾಚರಣೆಯಲ್ಲಿ ವನ್ಯಜೀವಿ ವಿಭಾಗ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಬ್ರಹ್ಮಗಿರಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ದೇಚಮ್ಮ, ಮಾಕುಟ್ಟ ವಲಯದ ಸುಹಾನ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇತ್ತೀಚೆಗೆ ಮಾಕುಟ್ಟ ಮೀಸಲು ಅರಣ್ಯದಲ್ಲಿ ಕೇರಳದಿಂದ ಕಸದ ರಾಶಿಯನ್ನು ತಂದು ಹಾಕುತ್ತಿರುವ ಕುರಿತು ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಗೊಂಡಿತ್ತು. ಇದರಂತೆ ಈ ಕಾರ್ಯಾಚರಣೆ ನಡೆದಿದೆ. ಈ ಕೃತ್ಯ ಹಿಂದಿನಿAದಲೂ ನಡೆದುಕೊಂಡು ಬರುತ್ತಿತ್ತು.