ಸೋಮವಾರಪೇಟೆ, ಫೆ.೧: ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ವಯೋಮಾನದ ವಿದ್ಯಾರ್ಥಿಗಳಿಗೆ ಸೋಮವಾರಪೇಟೆ ವಲಯ ಮಟ್ಟದ ರಸ್ತೆ ಓಟದ ಸ್ಫರ್ಧೆಯನ್ನು ಫೆ. ೫ರಂದು ಏರ್ಪಡಿಸಲಾಗಿದೆ ಎಂದು ಅಥ್ಲೆಟಿಕ್ ತರಬೇತುದಾರ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಅಂತೋಣಿ ಡಿಸೋಜ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ ೫ರಂದು ಬಳಗುಂದ ಸರಕಾರಿ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಸ್ಫರ್ಧೆ ನಡೆಯಲಿದ್ದು, ೪ ಮತ್ತು ೫ನೆ ತರಗತಿ ಬಾಲಕರು ಮತ್ತು ಬಾಲಕಿಯರಿಗೆ ೫೦೦ ಮೀಟರ್ ಓಟ, ೬ ಮತ್ತು ೭ನೇ ತರಗತಿ ಬಾಲಕರು ಮತ್ತು ಬಾಲಕಿಯರಿಗೆ ೧೦೦೦ ಮೀಟರ್ ಓಟದ ಸ್ಫರ್ಧೆಯನ್ನು ಆಯೋಜಿಸಲಾಗಿದೆ ಎಂದರು.

೮ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ಬಾಲಕರು ಮತ್ತು ಬಾಲಕಿಯರಿಗೆ ೨ ಕಿ.ಮೀ.ಓಟದ ಸ್ಫರ್ದೆ ಏರ್ಪಡಿಸಲಾಗಿದ್ದು, ಆಸಕ್ತ ಬಾಲಕ ಬಾಲಕಿಯರು ಫೆಬ್ರವರಿ ೨ರ ಸಂಜೆ ೫ ಗಂಟೆಯ ಒಳಗಾಗಿ ತಮ್ಮ ಹೆಸರು, ಜನ್ಮ ದಿನಾಂಕ, ಓದುತ್ತಿರುವ ತರಗತಿ, ಭಾಗವಹಿಸುತ್ತಿರುವ ಸ್ಫರ್ಧೆ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಪ್ರತಿಯ ವಿವರಗಳನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಮೊ: ೯೮೪೪೧೬೨೮೫೧ ನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಸೋಮವಾರಪೇಟೆ ಸುತ್ತಲಿನ ೧೦ ಕಿಲೋಮೀಟರ್ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು. ಸ್ಪರ್ಧೆಗಳು ಬೆಳಿಗ್ಗೆ ೮.೩೦ ಕ್ಕೆ ಪ್ರಾರಂಭಗೊಳ್ಳಲಿದೆ. ಭಾಗವಹಿಸುವ ವಿದ್ಯಾರ್ಥಿಗಳು ೭.೩೦ಕ್ಕೆ ಹಾಜರಿರಬೇಕು ಎಂದು ತಿಳಿಸಿದರು.

ಇದೇ ಸಂದರ್ಭ ಕೂಡಿಗೆ ಕ್ರೀಡಾ ಶಾಲೆಯ ಹಾಕಿ ತರಬೇತುದಾರ ಬಿ.ಎಸ್.ವೆಂಕಟೇಶ್,ಕೊಡಗು ಜಿಲ್ಲೆ ಅಥ್ಲೆಟಿಕ್ಸ್ ಸಂಸ್ಥೆಯ ನಿರ್ದೇಶಕ ಕೆ.ಎ. ಪ್ರಕಾಶ್, ರಾಷ್ಟಿçÃಯ ಹಾಕಿ ಆಟಗಾರ ಹೆಚ್.ಜಿ.ಸಂಭ್ರಮ್ ಇವರುಗಳನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿಯಿತ್ತರು. ಗೋಷ್ಠಿಯಲ್ಲಿ ಕ್ರೀಡಾಪಟುಗಳಾದ ಕೆ.ಎ.ಪ್ರಕಾಶ್, ಬಿ.ಎಸ್.ಸುರೇಶ್, ಧರ್ಮಪ್ಪ, ಅಶ್ರಫ್ ಹಾಜಿ ಇದ್ದರು.