ಸುಂಟಿಕೊಪ್ಪ, ಫೆ.೧: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಷಿಯನ್ ವತಿಯಿಂದ ೧೨ನೇ ವರ್ಷದ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟವು ಕೆದುಮೂಳ್ಳೂರಿನಲ್ಲಿ ಫೆಬ್ರವರಿ ೧೮ ಮತ್ತು ೧೯ ರಂದು ನಡೆಯಲಿದೆ. ರೋಮನ್ ಕ್ಯಾಥೋಲಿಕ್ ಅಸೋಷಿಯೇಶನ್ನಿನ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

ಸುಂಟಿಕೊಪ್ಪದಲ್ಲಿ ನಡೆದ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಷಿಯೇನ್ನಿನ ವಾರ್ಷಿಕ ಸಭೆ ಹಾಗೂ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸಲು ಹಾಗೂ ಪುರುಷ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ವೀರಾಜಪೇಟೆ ವ್ಯಾಪ್ತಿಯ ಕೆದುಮುಳ್ಳೂರು ಫಾತಿಮಾ ಮಾತೆ ದೇವಾಲಯ ಸಂಯುಕ್ತ ಆಶ್ರಯದಲ್ಲಿ ೧೨ನೇ ಕ್ರೀಡಾಕೂಟವನ್ನು ನಡೆಸಲು ತೀರ್ಮಾನಿಸಲಾಯಿತು.

ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ಹಾಗೂ ೨೫,೦೦೦ ನಗದು, ದ್ವಿತೀಯ ಸ್ಥಾನಗಳಿಸಿದ ತಂಡಕ್ಕೆ ೧೫,೦೦೦ ರೂ ಟ್ರೋಫಿ, ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ೩,೦೦೦ ರೂ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ರೂ ೧,೫೦೦ ರೂ ಹಾಗೂ ಟ್ರೋಫಿಯನ್ನು ನೀಡಲಾಗುವುದು.

ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕ ಪತ್ರವನ್ನು ಮಂಡಿಸಲಾಯಿತು. ನೂತನ ಸಾಲಿನ ಅಧ್ಯಕ್ಷರಾಗಿ ಎಸ್.ಎಂ.ಡಿಸಿಲ್ವಾ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಫ್.ಸಬಾಸ್ಟಿನ್ ಅವರನ್ನು ಸರ್ವಾನುಮತದಿಂದ ಪುನರಾಯ್ಕೆಗೊಳಿಲಾಯಿತು.

ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳ ನೊಂದಾವಣೆಗೆ ಮತ್ತು ಮಾಹಿತಿಗಾಗಿ ಸುದೀಫ್ ಡಿಸೋಜ ೯೭೪೦೨೮೬೦೬೫, ಸುನಿಲ್ ಲೋಪೆಸ್ ೮೨೯೬೭೦೯೨೬೦, ವಿನುಮಿರಾಂದ ೯೫೩೫೫೦೨೦೭೪, ದಿವಾನ್ ಪೀಟರ್ ಮನೆಜೆಸ್ ೭೨೫೯೧೩೬೩೯೮, ನಿಶಾಂತ್ ಮೊರೆಸ್ ೯೫೩೫೦೩೨೯೨೯ ಅವರುಗಳನ್ನು ಸಂಪರ್ಕಿಸಬಹುದಾಗಿದೆ.