ಶ್ರೀಮಂಗಲ, ಫೆ. ೧: ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳು ಮತ್ತು ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಸದಸ್ಯರಾದ ಕೈಬುಲಿರ ಪಾರ್ವತಿ ಬೋಪಯ್ಯ ರೂ. ೩೫ ಸಾವಿರ ಹಾಗೂ ಚೆಟ್ಟಂಗಡ ಪುಣ್ಯವತಿ ಚಿಣ್ಣಪ್ಪ ಅವರು ರೂ. ೨೦ ಸಾವಿರ ಸೇರಿ ಒಟ್ಟು ರೂ. ೫೫ ಸಾವಿರ ಮೌಲ್ಯದ ೧೦೦ ಟಿ. ಶರ್ಟ್ ಮತ್ತು ಪ್ಯಾಂಟ್ಗಳನ್ನು ಉದಾರವಾಗಿ ನೀಡಿದರು.
ಈ ಸಂದರ್ಭ ವೀರಾಜಪೇಟೆ ತಾಲೂಕು ಬಿ.ಆರ್.ಪಿ. ಪುಷ್ಪ, ಕ್ಲಸ್ಟರ್ ಸಿ.ಆರ್.ಪಿ. ಅನಿತಾಕುಮಾರಿ, ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ ಮತ್ತು ಶಿಕ್ಷಕ ವೃಂದ ಹಾಜರಿದ್ದರು.